Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

ಸಾಮಾನ್ಯವಾಗಿ ನೀವು ಒದ್ದೆಯಾದ ಕೈಗಳಿಂದ ಅಕ್ಕಿಯನ್ನು ಮುಟ್ಟಿದರೆ, ಹುಳುಗಳು ಮತ್ತು ಕೀಟಗಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒದ್ದೆಯಾದ ಕೈಗಳಿಂದ ಅಕ್ಕಿಯನ್ನು ಮುಟ್ಟಬೇಡಿ. ಇದರಿಂದ ಕೀಟಗಳು ಮತ್ತು ಹುಳುಗಳನ್ನು ಆಶ್ರಯಿಸುತ್ತದೆ.

First published:

  • 18

    Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

    ಪ್ರತಿದಿನ ನಾವು ಅಕ್ಕಿಯಲ್ಲಿ ಅನ್ನ, ಬಿರಿಯಾನಿ, ಇಡ್ಲಿ, ದೋಸೆ ಹೀಗೆ ತರತರವಾದ ಅಡುಗೆ ಮಾಡಿ ಸೇವಿಸುತ್ತೇವೆ. ಆದರೆ ಮನೆಯಲ್ಲಿ ಇಂತಹ ಅಕ್ಕಿಯನ್ನು ಹಲವಾರು ದಿನಗಳವರೆಗೆ ಸಂಗ್ರಹಿಸಿದರೆ ಅದರಲ್ಲಿ ಹುಳುಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಅಕ್ಕಿಯನ್ನು ಬಳಸಲು ಅನೇಕರು ಹಿಂದೇಟು ಹಾಕುತ್ತಾರೆ.

    MORE
    GALLERIES

  • 28

    Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

    ಅಲ್ಲದೇ ಅಕ್ಕಿಯನ್ನು ಬಿಸಾಡಲು ಕೂಡ ಎಸೆಯಲು ಕೂಡ ಸಾಧ್ಯವಾಗುವುದಿಲ್ಲ. ಹಾಗಾಗಿ ಅಕ್ಕಿಯಲ್ಲಿ ಹುಳುಗಳು ಬರದಂತೆ ದೀರ್ಘಕಾಲದವರೆಗೆ ಸಂಗ್ರಹಿಸಿಡುವುದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ.

    MORE
    GALLERIES

  • 38

    Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

    ಸಾಮಾನ್ಯವಾಗಿ ನೀವು ಒದ್ದೆಯಾದ ಕೈಗಳಿಂದ ಅಕ್ಕಿಯನ್ನು ಮುಟ್ಟಿದರೆ, ಹುಳುಗಳು ಮತ್ತು ಕೀಟಗಳು ಬರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಒದ್ದೆಯಾದ ಕೈಗಳಿಂದ ಅಕ್ಕಿಯನ್ನು ಮುಟ್ಟಬೇಡಿ. ಇದರಿಂದ ಕೀಟಗಳು ಮತ್ತು ಹುಳುಗಳನ್ನು ಆಶ್ರಯಿಸುತ್ತದೆ. ಹಾಗಾಗಿ ಅಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸಿ ಮತ್ತೆ ಡಬ್ಬದಲ್ಲಿ ಹಾಕಿದರೆ ಅಕ್ಕಿ ಸದಾ ಹೊಳೆಯುತ್ತಿರುತ್ತದೆ.

    MORE
    GALLERIES

  • 48

    Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

    ಬಿರಿಯಾನಿ ಎಲೆ: ಬಿರಿಯಾನಿ ಎಲೆಗಳ ವಾಸನೆಯು ಹುಳುಗಳು ಮತ್ತು ಕೀಟಗಳನ್ನು ಹಿಮ್ಮೆಟ್ಟಿಸುತ್ತದೆ. ಇದು ಅಕ್ಕಿಯನ್ನು ಯಾವಾಗಲೂ ತಾಜಾವಾಗಿರಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಅಕ್ಕಿಯೊಂದಿಗೆ 4-5 ಬಿರಿಯಾನಿ ಎಲೆಗಳನ್ನು ಮಿಶ್ರಣ ಮಾಡಿ.

    MORE
    GALLERIES

  • 58

    Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

    ಲವಂಗಗಳು: ಲವಂಗಗಳು ಪರಿಮಳಯುಕ್ತ ಗಿಡಮೂಲಿಕೆಗಳಾಗಿವೆ. ಆದ್ದರಿಂದ 10 ಲವಂಗವನ್ನು ತೆಗೆದುಕೊಂಡು ಅದನ್ನು ಅಕ್ಕಿಯೊಂದಿಗೆ ಮಿಶ್ರಣ ಮಾಡಿ ಇಟ್ಟರೆ, ಇದರಲ್ಲಿ ಕೀಟಗಳು ಬರಲು ಸಾಧ್ಯವಿಲ್ಲ.

    MORE
    GALLERIES

  • 68

    Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

    ಬೆಳ್ಳುಳ್ಳಿ: ಹುಳುಗಳು ಮತ್ತು ಕೀಟಗಳು ಬೆಳ್ಳುಳ್ಳಿಯ ವಾಸನೆಯನ್ನು ಇಷ್ಟಪಡುವುದಿಲ್ಲ. ಆದ್ದರಿಂದ ಅಕ್ಕಿಯಲ್ಲಿ ಸ್ವಲ್ಪ ಬೆಳ್ಳುಳ್ಳಿಯನ್ನು ಮಿಶ್ರಣ ಮಾಡಿ.

    MORE
    GALLERIES

  • 78

    Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

    ಶೈತ್ಯೀಕರಣಗೊಳಿಸಿ: ಅನೇಕ ಜನರು ಕಾಳುಗಳು ಮತ್ತು ಬೀಜಗಳನ್ನು ದೀರ್ಘಕಾಲದವರೆಗೆ ಕೆಡದಂತೆ ಸುರಕ್ಷಿತವಾಗಿರಿಸಲು ಫ್ರಿಜ್ನಲ್ಲಿ ಇಡುತ್ತಾರೆ. ಹೀಗೆ ಅಕ್ಕಿಯನ್ನು ಕೂಡ ಫ್ರಿಜ್ ನಲ್ಲಿಟ್ಟರೆ ಹುಳು ಬರುವುದಿಲ್ಲ. ಇದನ್ನು ಒಮ್ಮೆ ನೀವು ಟ್ರೈ ಮಾಡಬಹುದು.

    MORE
    GALLERIES

  • 88

    Kitchen Hacks: ಹುಳ, ಕೀಟಗಳು ಬಾರದಂತೆ ಅಕ್ಕಿಯನ್ನು ಸಂರಕ್ಷಿಸುವುದು ಹೇಗೆ? ಈ ಟಿಪ್ಸ್ ಟ್ರೈ ಮಾಡಿ!

    ಸೂರ್ಯನ ಬಿಸಲು: ಮೊದಲೇ ಹೇಳಿದಂತೆ, ನಿಮಗೆ ಸಮಯ ಸಿಕ್ಕಾಗಲೆಲ್ಲಾ ಅಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸಿ. ಹೀಗೆ ಮಾಡುವುದರಿಂದ ಕೀಟಗಳು ಮತ್ತು ಹುಳುಗಳು ಬರುವುದಿಲ್ಲ. ಅಕ್ಕಿ ಮಾತ್ರವಲ್ಲದೇ ಒಣ ಮತ್ತು ತಾಜಾ ಕಾಳುಗಳಿಗೂ ಕೂಡ ಈ ಟಿಪ್ಸ್ ಟ್ರೈ ಮಾಡಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)

    MORE
    GALLERIES