ಅಡುಗೆ ಮಾಡಿದ ಪಾತ್ರೆಯಿಂದ ಹಿಡಿದು ಆಹಾರದ ಪರಿಮಳ ಅಡುಗೆ ಮನೆಯ ಪೂರ್ತಿ ವಿವಿಧ ರೀತಿಯಲ್ಲಿ ವಾಸನೆ ಬರುತ್ತಿದ್ಯಾ? ಅಡುಗೆ ಮನೆಯನ್ನು ಎಷ್ಟೇ ಸ್ವಚ್ಛವಾಗಿಟ್ಟರೂ ಕೆಲವೊಮ್ಮೆ ನಮಗೆ ಅರಿವಿಲ್ಲದೇ ದುರ್ವಾಸನೆ ಬರುತ್ತದೆ. ಅದು ಹೇಗೆ? ದುರ್ವಾಸನೆ ಎಲ್ಲಿಂದ ಬರುತ್ತಿದೆ ಎಂದು ಕೂಡ ನಾವು ಕಂಡು ಹಿಡಿಯಲು ಆಗುವುದಿಲ್ಲ. ಆ ದುರ್ವಾಸನೆ ನಮಗೆ ಮಾತ್ರವಲ್ಲ ಮನೆಯಲ್ಲಿರುವವರನ್ನೂ ಕಾಡುತ್ತದೆ. ಈ ಸಮಸ್ಯೆಗಳನ್ನು ತೊಡೆದುಹಾಕಲು ಈ ಸರಳ ಟಿಪ್ಸ್ ಫಾಲೋ ಮಾಡಿ.
ನಿಂಬೆ ಸಿಪ್ಪೆ: ನಾವು ಎಸೆಯುವ ಮತ್ತು ಸುಡುವ ಕೆಲವು ವಸ್ತುಗಳು ನಮ್ಮ ಅಡುಗೆಮನೆಯನ್ನು ಉತ್ತಮ ವಾಸನೆಯಿಂದ ಇಡಲು ಸಹಾಯ ಮಾಡುತ್ತದೆ. ನಾವು ಸುಟ್ಟ ನಿಂಬೆ ಮತ್ತು ಕಿತ್ತಳೆ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ ಕುದಿಸಬೇಕು. ನೀರು ಚೆನ್ನಾಗಿ ಕುದಿದ ನಂತರ, ಅದಕ್ಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ. ನೀರು ತಣ್ಣಗಾದಾಗ, ಅದನ್ನು ಸ್ಪ್ರೇ ಬಾಟಲಿಗೆ ಹಾಕಿಕೊಂಡು ಇಡೀ ಅಡಿಗೆ ಮನೆಗೆ ಸಿಂಪಡಿಸಿ. ಹೀಗೆ ಮಾಡುವುದರಿಂದ ಅಡುಗೆಮನೆಯನ್ನು ಪರಿಮಳಯುಕ್ತವಾಗಿ ಇಡಬಹುದು.