ಯಾಣ: ದಟ್ಟವಾದ ಕಲ್ಲು ಬಂಡೆ ಅರಣ್ಯ ಪ್ರದೇಶದಿಂದ ಕೂಡಿದ ಹಳ್ಳಿ. ಇದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಪ್ರೇಕ್ಷಣೀಯ ಸ್ಥಳ. ಮೊನಚಾಗಿರುವ ಬೆಟ್ಟದಂತಿರುವ ಶಿಲೆಗಳ 61 ಶಿಖರಗಳನ್ನ ಒಳಪಟ್ಟಿದೆ. ಇದರಲ್ಲಿ 61 ಶಿಖರಗಳಿದ್ದರೂ ಕೂಡ, ಭೈರವೇಶ್ವರ ಶಿಖರ, ಮೋಹಿನಿ ಶಿಖರ ಮತ್ತು ಬೆಟ್ಟದ ಭೈರವೇಶ್ವರ ದೇವಾಲಯ ಹೆಚ್ಚಿನ ಪ್ರಖ್ಯಾತಿ ಪಡೆದಿದೆ. (ಕೃಪೆ: Instagram)
ರವೀಂದ್ರನಾಥ ಟಾಗೋರ್ ಬೀಚ್: ಕಾರವಾರ ಬಸ್ ನಿಲ್ದಾಣದಿಂದ 1 ಕಿ.ಮೀ ದೂರದಲ್ಲಿರುವ ಕಾರವಾರ ಬೀಚ್, ರವೀಂದ್ರನಾಥ ಟಾಗೋರ್ ಬೀಚ್ ಎಂದೂ ಕರೆಯಲ್ಪಡುತ್ತದೆ. ರವೀಂದ್ರನಾಥ ಟಾಗೋರ್ ಅವರೇ ಈ ಬೀಚ್ನ ಸೌಂದರ್ಯಕ್ಕೆ ಮಾರುಹೋಗಿದ್ದರಂತೆ. ಹೀಗಾಗಿ ಅವರ ಹೆಸರನ್ನೇ ಇಡಲಾಗಿದೆ. ಕಾಳಿ ನದಿ ಕಡಲತೀರದ ಅಂತ್ಯದಲ್ಲಿ ಅರೇಬಿಯನ್ ಸಮುದ್ರಕ್ಕೆ ಸೇರುತ್ತದೆ. ಕಾಳಿ ಸೇತುವೆಯಿಂದ ಸೂರ್ಯಾಸ್ತದ ನೋಟ ಅದ್ಭುತ ಮತ್ತು ಮರೆಯಲಾಗದ ಅನುಭವವಾಗಿದೆ. (ಕೃಪೆ: Instagram)
ಗೇರುಸೊಪ್ಪಾ: ಹೊನ್ನಾವರ ತಾಲ್ಲೂಕಿನಲ್ಲಿದೆ. ಒಂದು ಕಾಲದಲ್ಲಿ ಸಾಳ್ವ ರಾಣಿ ಚೆನ್ನಭೈರಾದೇವಿಯ ರಾಜಧಾನಿಯಾಗಿತ್ತು. ಸುತ್ತ ದಟ್ಟಾರಣ್ಯದಲ್ಲಿರುವ ಈ ಊರು, ಶರಾವತಿ ದಡದಲ್ಲಿದೆ. ದೂರದಲ್ಲಿ ಅರಬ್ಬಿ ಸಮುದ್ರ ಭೋರ್ಗರೆಯುತ್ತಿರುತ್ತದೆ. ಅನೇಕ ಜೀವ ಪ್ರಬೇಧಗಳಿಗೆ ಈ ಊರು ಆಶ್ರಯತಾಣ. ರಾಣಿ ಕಟ್ಟಿಸಿದ್ದ ಚತುರ್ಮುಖ ಬಸದಿ ಇಲ್ಲಿನ ಮತ್ತೊಂದು ಆಕರ್ಷಣೆ. (ಕೃಪೆ: Instagram)