Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

ಕಳೆದ 4 ತಿಂಗಳಲ್ಲಿ ಅತಿ ಹೆಚ್ಚು ವಿವಾಹಗಳು ನಡೆದಿವೆ. ದೇಶಾದ್ಯಂತ ಹಲವು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರ್ಷಾಂತ್ಯದವರೆಗೂ ಈ ನವಜೋಡಿಗೆ ಪ್ರತಿ ಹಬ್ಬವೂ ಮೊದಲ ಹಬ್ಬವಾಗಿರುತ್ತದೆ. ಅಲ್ಲದೇ ಫೆಬ್ರವರಿಯಲ್ಲಿ ಮದುವೆಯಾದವರಿಗೆ ಮಾರ್ಚ್ 8ರಂದು ನಡೆಯುವ ಹೋಳಿಯೇ ಮೊದಲ ಹಬ್ಬ. ನವವಿವಾಹಿತರು ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಮತ್ತು ಅದನ್ನು ತಮ್ಮ ಜೀವನದುದ್ದಕ್ಕೂ ಹೇಗೆ ನೆನಪಿಸಿಕೊಳ್ಳುತ್ತಾರೆ ಎಂಬುದನ್ನು ನೋಡೋಣ. ಸಾಮಾನ್ಯವಾಗಿ ಮದುವೆಯಾದ ನಂತರ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ಹೋಗುತ್ತಾರೆ

First published:

  • 19

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ಕಳೆದ 4 ತಿಂಗಳಲ್ಲಿ ಅತಿ ಹೆಚ್ಚು ವಿವಾಹಗಳು ನಡೆದಿವೆ. ದೇಶಾದ್ಯಂತ ಹಲವು ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವರ್ಷಾಂತ್ಯದವರೆಗೂ ಈ ನವಜೋಡಿಗೆ ಪ್ರತಿ ಹಬ್ಬವೂ ಮೊದಲ ಹಬ್ಬವಾಗಿರುತ್ತದೆ. ಅಲ್ಲದೇ ಫೆಬ್ರವರಿಯಲ್ಲಿ ಮದುವೆಯಾದವರಿಗೆ ಮಾರ್ಚ್ 8ರಂದು ನಡೆಯುವ ಹೋಳಿಯೇ ಮೊದಲ ಹಬ್ಬ. (ಸಾಂಕೇತಿಕ ಚಿತ್ರ)

    MORE
    GALLERIES

  • 29

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ನವವಿವಾಹಿತರು ಈ ಹಬ್ಬವನ್ನು ಹೇಗೆ ಆಚರಿಸುತ್ತಾರೆ ಮತ್ತು ಅದನ್ನು ತಮ್ಮ ಜೀವನದುದ್ದಕ್ಕೂ ಹೇಗೆ ನೆನಪಿಸಿಕೊಳ್ಳುತ್ತಾರೆ ಎಂಬುದನ್ನು ನೋಡೋಣ. ಸಾಮಾನ್ಯವಾಗಿ ಮದುವೆಯಾದ ನಂತರ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಗಳಿಗೆ ಹೋಗುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 39

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ಮದುವೆಯಾದ ನಂತರ ನವವಿವಾಹಿತ ದಂಪತಿ ಶಾಶ್ವತವಾಗಿ ಒಟ್ಟಿಗೆ ಇರುತ್ತಾರೆ. ಈ ಹಿನ್ನೆಲೆ ಅನೇಕ ಪ್ರವಾಸಗಳಿಗೆ ಹೋಗಲು ಪ್ಲ್ಯಾನ್ ಮಾಡಿರುತ್ತಾರೆ. ಆದರೀಗ ಹಬ್ಬಗಳು ಬಂದಿರುವುದರಿಂದ ಎಲ್ಲಿಲ್ಲದ ಸಂಭ್ರಮ ಮನೆ ಮಾಡಿದೆ. ಟ್ರಿಪ್ ಹೋಗುವ ಬದಲು ಹಬ್ಬ ಆಚರಿಸುವಲ್ಲಿ ಜೋಡಿಗಳು ಬ್ಯುಸಿ ಆಗಿರುತ್ತಾರೆ. (ಸಾಂಕೇತಿಕ ಚಿತ್ರ)

    MORE
    GALLERIES

  • 49

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ಹೌದು, ಇನ್ನೇನು ಕೆಲವೇ ದಿನಗಳಲ್ಲಿ ಹೋಳಿ ಬರಲಿದೆ. ಈ ಹೋಳಿಯನ್ನು ವಿಶೇಷ ಮತ್ತು ಶಾಶ್ವತವಾಗಿ ಸ್ಮರಣೀಯವಾಗಿಸಲು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿ. ಆದರೆ ಈ ಮುನ್ನ ಹೋಳಿಗೆ ಏನು ಮಾಡಬೇಕು ಎಂಬುವುದನ್ನು ಮೊದಲು ನಿರ್ಧರಿಸಿ. (ಸಾಂಕೇತಿಕ ಚಿತ್ರ)

    MORE
    GALLERIES

  • 59

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ಬೆಳಗ್ಗೆ ವಿಶೇಷವಾಗಿದ್ದರೆ ಪ್ರತಿದಿನವೂ ಸಂತೋಷವಾಗಿರುತ್ತದೆ. ಹೋಳಿಯಲ್ಲಿಯೂ ಹಾಗೆಯೇ, ನಿಮ್ಮ ಸಂಗಾತಿಗಾಗಿ ನಗುಮೊಗದಿಂದ ದಿನವನ್ನು ಪ್ರಾರಂಭಿಸಿ. ನಿಮ್ಮ ಸಂಗಾತಿ ಇಷ್ಟಪಡುವ ಅಡುಗೆಗಳನ್ನು ಮಾಡಿ. ಹಾಗೆಯೇ ಇದೇ ಸಮಯದಲ್ಲಿ ಪ್ರೀತಿಯನ್ನು ವ್ಯಕ್ತಪಡಿಸುವುದನ್ನು ಮರೆಯಬೇಡಿ. (ಸಾಂಕೇತಿಕ ಚಿತ್ರ)

    MORE
    GALLERIES

  • 69

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ಹೋಳಿ ಹಬ್ಬವು ಅನೇಕ ಜನರು ಒಟ್ಟಿಗೆ ಬಣ್ಣಗಳನ್ನು ಎರಚುವ ಹಬ್ಬವಾಗಿದೆ. ಈ ಹೋಳಿಯನ್ನು ಇಬ್ಬರು ಮಾತ್ರ ಮಾಡಿದ್ರೆ ಅಷ್ಟು ಖುಷಿ ಆಗುವುದಿಲ್ಲ. ಆದ್ದರಿಂದ ಅನೇಕ ಸ್ನೇಹಿತರು ಮತ್ತು ಕುಟುಂಬ ಸದಸ್ಯರೊಂದಿಗೆ ಹೋಳಿ ಆಚರಿಸಿ. (ಸಾಂಕೇತಿಕ ಚಿತ್ರ)

    MORE
    GALLERIES

  • 79

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ಹಬ್ಬದ ದಿನವಾಗಿರುವುದರಿಂದ ನಿಮ್ಮ ಸಂಗಾತಿಗೆ ಇಷ್ಟವಾದ ಡ್ರೆಸ್ ಖರೀದಿಸಿ. ಆಗ ನಿಮ್ಮ ಸಂಗಾತಿ ವಿವಿಧ ಬಟ್ಟೆಗಳನ್ನು ಸಂತೋಷದಿಂದ ಧರಿಸುತ್ತಾರೆ. ಅದರಲ್ಲಿಯೂ ಅವರಿಗೆ ಇಷ್ಟವಾಗುವಂತಹ ಉಡುಪುಗಳನ್ನು ಆಯ್ಕೆ ಮಾಡುವುದು ಉತ್ತಮ. (ಸಾಂಕೇತಿಕ ಚಿತ್ರ)

    MORE
    GALLERIES

  • 89

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ಹೋಳಿ ವಿಶೇಷ ದಿನವಾಗಿರುವುದರಿಂದ ಸಂಗಾತಿಯಿಂದ ಉಡುಗೊರೆಯನ್ನು ನಿರೀಕ್ಷಿಸುವುದು ಸಹಜ ಸಂಗತಿ. ಹಾಗಾಗಿ ನಿಮ್ಮ ಸಂಗಾತಿಗೆ ಇಷ್ಟವಾದ ಉಡುಗೊರೆಯನ್ನು ನೀಡಿ. ಅವರಿಗೆ ಹೇಳದೇ ಸರ್ಪ್ರೈಸ್ ಕೊಟ್ಟರೂ ಆ ಸಮಯದಲ್ಲಿ ಬರುವ ಕಿಕ್ ಬೇರೆಯೇ ಆಗಿರುತ್ತದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 99

    Colours: ಮದುವೆ ನಂತ್ರ ಇದು ನಿಮ್ಗೆ ಮೊದಲ ಹೋಳಿ ಹಬ್ಬನಾ? ಹಾಗಾದ್ರೆ ಈ ರೀತಿ ಆಚರಿಸಿ, ಮಜಾವಾಗಿರುತ್ತೆ!

    ಹೋಳಿಯಲ್ಲಿ ವಿಶೇಷ ಡ್ಯಾನ್ಸ್ ಪಾರ್ಟಿ ಆಯೋಜಿಸಿ. ಇದು ನಿಮ್ಮ ಮೊದಲ ಹೋಳಿಯಾಗಿರುವುದರಿಂದ ಒಟ್ಟಿಗೆ ಕುಣಿದರೆ ಬಾಂಧವ್ಯ ಗಟ್ಟಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಇವುಗಳನ್ನು ಪ್ರಯತ್ನಿಸಿ ಮತ್ತು ಬಾಂಧವ್ಯವನ್ನು ಬಲಪಡಿಸಿ. (ಸಾಂಕೇತಿಕ ಚಿತ್ರ)

    MORE
    GALLERIES