ನೈಸರ್ಗಿಕ ಅಥವಾ ಗಿಡಮೂಲಿಕೆ ಬಣ್ಣಗಳನ್ನು ಬಳಸಿ: ರಕ್ತಪ್ರವಾಹದ ಮೂಲಕ ರಾಸಾಯನಿಕ ಬಣ್ಣಗಳು ಭ್ರೂಣಕ್ಕೆ ಹಾನಿಯಾಗಬಹುದು. ಬಣ್ಣಗಳೊಂದಿಗೆ ಆಟವಾಡುವಾಗ ನೀವು ಉಸಿರಾಡುವ ಗಾಳಿಯಲ್ಲಿ ತಾಮ್ರದ ಸಲ್ಫೇಟ್, ಸೀಸದ ಆಕ್ಸೈಡ್ ಮತ್ತು ಪಾದರಸದಂತಹ ಹಾನಿಕಾರಕ ರಾಸಾಯನಿಕಗಳು ಮಿಶ್ರಣಗೊಳ್ಳುತ್ತವೆ. ರಾಸಾಯನಿಕ ಬಣ್ಣಗಳು ನಿಮ್ಮ ಚರ್ಮಕ್ಕೆ ಸೇರಿಕೊಳ್ಳುತ್ತವೆ ಮತ್ತು ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಕೆಮಿಕಲ್ ಬಣ್ಣಗಳನ್ನು ತ್ಯಜಿಸುವುದು ಮತ್ತು ನೈಸರ್ಗಿಕ(ನ್ಯಾಚುರಲ್) ಬಣ್ಣಗಳನ್ನು ಬಳಸುವುದು ಉತ್ತಮ. ಗಿಡಮೂಲಿಕೆಗಳ ಬಣ್ಣದಲ್ಲಿರುವ ಪೋಷಕಾಂಶಗಳು ಚರ್ಮಕ್ಕೆ ಸಹ ಪ್ರಯೋಜನಕಾರಿಯಾಗಿದೆ.
ಕರಿದ ಸಿಹಿತಿಂಡಿಗಳು ಅತಿಯಾಗಿ ತಿನ್ನಬೇಡಿ: ಹೆಚ್ಚು ಕರಿದ ಪದಾರ್ಥಗಳನ್ನು ಮತ್ತು ಸಕ್ಕರೆ ಹೆಚ್ಚಿರುವ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದು ಸದಾ ಒಳ್ಳೆಯದು. ಆದ್ದರಿಂದ ನೀವು ತಾಯಿಯಾಗಲು ಬಯಸಿದರೆ, ನೀವು ಈ ಆಹಾರಗಳಿಂದ ದೂರವಿರಬೇಕು. ಮಸಾಲೆಯುಕ್ತ ಚಾಟ್, ಭಾಂಗ್, ಕೆಫೀನ್ ಹೊಂದಿರುವ ಪಾನೀಯಗಳು, ಹುರುಳಿ, ಲಡ್ಡೂಗಳು ಮತ್ತು ಇತರ ತುಪ್ಪದ ಸಿಹಿತಿಂಡಿಗಳನ್ನು ತಿನ್ನಬಾರದು. ಇದು ಅಜೀರ್ಣ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.