High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

ಅಧಿಕ ರಕ್ತದೊತ್ತಡ ಸಮಸ್ಯೆ ಹಲವು ಆರೋಗ್ಯ ಸಮಸ್ಯೆಗೆ ಹಾಗೂ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡ ಸಮಸ್ಯೆ ನಿಯಂತ್ರಿಸದೇ ಹೋದರೆ ಇದು ಹಲವು ಮಾರಣಾಂತಿಕ ಕಾಯಿಲೆಗಳನ್ನು ತಂದೊಡ್ಡುತ್ತಿದೆ. ಅಧಿಕ ರಕ್ತದೊತ್ತಡ ಸಮಸ್ಯೆ ತಡೆಗೆ ನಿಮ್ಮ ಜೀವನಶೈಲಿಯನ್ನು ಸರಿಪಡಿಸಬೇಕಾಗುತ್ತದೆ. ಜೊತೆಗೆ ಕೆಲವು ಯೋಗಾಸನ ಮಾಡಬೇಕಾಗುತ್ತದೆ. ಆದರೆ ಅಧಿಕ ರಕ್ತದೊತ್ತಡ ಸಮಸ್ಯೆಯಿದ್ದಾಗ ಕೆಲವು ಯೋಗಾಭ್ಯಾಸ ಮಾಡಬಾರದಂತೆ.

First published:

  • 18

    High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

    ಅಧಿಕ ರಕ್ತದೊತ್ತಡ ಸಮಸ್ಯೆ ಬರಲು ನಿಮ್ಮ ಕೆಟ್ಟ ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿ ಕಾರಣವಾಗಿದೆ. ತಡವಾಗಿ ಮಲಗುವುದು, ತಡವಾಗಿ ಏಳುವುದು, ಅತಿಯಾಗಿ ತಿನ್ನುವುದು, ಕಡಿಮೆ ತಿನ್ನುವುದು, ಸಂಸ್ಕರಿಸಿದ ಆಹಾರ ತಿನ್ನುವುದು, ಅಧಿಕ ಬಿಳಿ ಉಪ್ಪನ್ನು ತಿನ್ನುವುದು, ಹೆಚ್ಚು ಮೈದಾ, ಸಕ್ಕರೆ, ಸೋಡಾ ಪದಾರ್ಥ ತಿನ್ನುವ  ಸಮಸ್ಯೆ ಹೆಚ್ಚಿಸುತ್ತದೆ.

    MORE
    GALLERIES

  • 28

    High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

    ದಿನವೂ ತಡವಾಗಿ ಏಳುವುದು ಮತ್ತು ಅನಾರೋಗ್ಯಕರ ಆಹಾರ ಸೇವಿಸುವುದು, ಸಾಕಷ್ಟು ವ್ಯಾಯಾಮ ಮಾಡದೇ ಇರುವುದು ಹಾಗೂ ಕೆಟ್ಟ ಚಟಗಳಿಂದಾಗಿ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚುತ್ತದೆ. ಇದು ರೋಗಿಗೆ ಅಪಾಯ ತಂದೊಡ್ಡುತ್ತದೆ.

    MORE
    GALLERIES

  • 38

    High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

    ಅನಾರೋಗ್ಯಕರ ಅಭ್ಯಾಸಗಳು ಹೆಚ್ಚಿನ ರೋಗಗಳು ಬರಲು ಕಾರಣವಾಗಿವೆ. ದೈಹಿಕ ಚಟುವಟಿಕೆಯ ಕೊರತೆಯು ಹೆಚ್ಚು ಕಾಯಿಲೆಗಳು ಬರಲು ಕಾರಣವಾಗಿದೆ. ಸೋಡಿಯಂ ತಿನ್ನುವುದರಿಂದ ಮತ್ತು ಅಧಿಕ ರಕ್ತದೊತ್ತಡದ ನಡುವಿನ ಸಂಬಂಧವಿದೆ. ಅಧಿಕ ರಕ್ತದೊತ್ತಡ ಅಪಾಯ ಕಡಿಮೆ ಮಾಡಲು ಬಿಳಿ ಉಪ್ಪನ್ನು ತಿನ್ನುವುದನ್ನು ಕಡಿಮೆ ಮಾಡಿ.

    MORE
    GALLERIES

  • 48

    High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

    ಮಿತಿಮೀರಿ ಉಪ್ಪು ತಿನ್ನುವುದರಿಂದ ಅಧಿಕ ರಕ್ತದೊತ್ತಡ ಆರೋಗ್ಯ ಸಮಸ್ಯೆ ಹೆಚ್ಚುತ್ತದೆ. ಇಡೀ ದಿನದಲ್ಲಿ ಒಬ್ಬ ವ್ಯಕ್ತಿ ತಿನ್ನಬೇಕಾದ ಉಪ್ಪಿನ ಪ್ರಮಾಣವು ಒಂದು ಪೂರ್ಣ ಟೀ ಚಮಚಕ್ಕಿಂತ ಹೆಚ್ಚಿರಬಾರದು ಅಂತಾರೆ ತಜ್ಞರು. ಇಲ್ಲದಿದ್ದರೆ ಇದು ಹೃದಯಾಘಾತ, ಪಾರ್ಶ್ವವಾಯು ಸೇರಿ ಹಲವು ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ.

    MORE
    GALLERIES

  • 58

    High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

    ಅದಕ್ಕಾಗಿ ದೈನಂದಿನ ಜೀವನದಲ್ಲಿ ಯೋಗ, ನಡಿಗೆ, ವ್ಯಾಯಾಮ ಮಾಡಬೇಕು. ಅದಾಗ್ಯೂ ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಕೆಲವು ಯೋಗಾಸನ ಮಾಡಬಾರದು. ಮತ್ತು ಕೆಲವು ಯೋಗಾಭ್ಯಾಸ ಮಾಡಬೇಕು. ಅಧಿಕ ರಕ್ತದೊತ್ತಡ ಇರುವವರು ಈ ಯೋಗಾಸನ ಮಾಡಬಾರದು.

    MORE
    GALLERIES

  • 68

    High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

    ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಕೆಲವು ಯೋಗಾಸನ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂಬುದು ತಜ್ಞರ ಸಲಹೆ. ಯಾಕಂದ್ರೆ ಈ ಆಸನಗಳು ಹೃದಯ ಮತ್ತು ದೇಹದ ಮೇಲೆ ಹೆಚ್ಚು ಒತ್ತಡ ಉಂಟು ಮಾಡುತ್ತವೆ. ಶೀರ್ಷಾಸನ, ಅಧೋಮುಖ ವೃಕ್ಷಾಸನ, ಸರ್ವಾಂಗಾಸನ ಮಾಡಬಾರದು.

    MORE
    GALLERIES

  • 78

    High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

    ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಶೀರ್ಷಾಸನ, ಅಧೋಮುಖ ವೃಕ್ಷಾಸನ, ಸರ್ವಾಂಗಾಸನ ಮಾಡಿದರೆ ಇದು ಹೃದಯದ ಮೇಲೆ ತೀವ್ರ ಒತ್ತಡ ಉಂಟು ಮಾಡುತ್ತದೆ. ಅಧಿಕ ರಕ್ತದೊತ್ತಡದಲ್ಲಿ ಹೃದಯವು ರಕ್ತವನ್ನು ಪಂಪ್ ಮಾಡಲು ಶ್ರಮಿಸಬೇಕಾಗುತ್ತದೆ. ಇದು ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯ ತಂದೊಡ್ಡುತ್ತದೆ.

    MORE
    GALLERIES

  • 88

    High Blood Pressure: ನಿಮಗೆ ಹೈ ಬಿಪಿ ಇದ್ರೆ ಈ ಯೋಗಾಸನ ಮಾಡ್ಲೇಬೇಡಿ, ಮಾಡಿದ್ರೆ ಸಮಸ್ಯೆ ಫಿಕ್ಸ್

    ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಕೆಲವು ಯೋಗಾಸನಗಳನ್ನು ತಪ್ಪದೇ ಮಾಡಬೇಕು. ಇದು ಅವರನ್ನು ಕಾಯಿಲೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮನಸ್ಸನ್ನು ಶಾಂತವಾಗಿರಿಸುತ್ತದೆ. ಶವಾಸನ, ಬಾಲಾಸನ ಮತ್ತು ಪಶ್ಚಿಮೋತ್ತನಾಸನ ಅಭ್ಯಾಸ ದಿನವೂ ಮಾಡಿ.

    MORE
    GALLERIES