ಬೇಸಿಗೆಯ ಶುಷ್ಕ ಗಾಳಿಯಿಂದ ಚರ್ಮ ಒಣಗುವುದಲ್ಲದೆ, ತುಟಿಗಳು ಒಡೆಯುತ್ತದೆ. ಕೆಲವೊಮ್ಮೆ ಈ ರೀತಿಯ ಸಮಸ್ಯೆಯಿಂದ ತುಟಿಗಳು ಒಡೆದು ರಕ್ತಸ್ರಾವವಾಗುತ್ತದೆ. ಇಂತಹ ತೊಂದರೆಗಳನ್ನು ತೊಡೆದುಹಾಕಲು ಏಲಕ್ಕಿಯನ್ನು ಬಳಸಿಕೊಳ್ಳಬಹುದು. 1 ಏಲಕ್ಕಿಯನ್ನು ಚೆನ್ನಾಗಿ ಕುದಿಸಿ ಅದಕ್ಕೆ ಬೆಣ್ಣೆಯನ್ನು ಬೆರೆಸಿ. ಈ ಮಿಶ್ರಣವನ್ನು ದಿನಕ್ಕೆ ಎರಡು ಬಾರಿ ತುಟಿಗಳಿಗೆ ಅನ್ವಯಿಸಿ. ಇದರಿಂದ ತುಟಿ ಒಣಗುವಿಕೆ ಸಮಸ್ಯೆ ದೂರವಾಗುವುದಲ್ಲದೆ, ತುಟಿಯು ನೈಸರ್ಗಿಕವಾಗಿ ಗುಲಾಬಿ ಬಣ್ಣವನ್ನು ಪಡೆದುಕೊಳ್ಳುತ್ತದೆ.
ಏಲಕ್ಕಿ ಹಾಗೂ ಜೇನುತುಪ್ಪ ಮಿಶ್ರಣವನ್ನು ಅತ್ಯುತ್ತಮ ನೈಸರ್ಗಿಕ ಫೇಸ್ ಪ್ಯಾಕ್ ಎನ್ನಲಾಗುತ್ತದೆ. ರುಬ್ಬಿದ ಏಲಕ್ಕಿಗೆ ಜೇನನ್ನು ಸೇರಿಸಿ ಮುಖಕ್ಕೆ ಹಚ್ಚುವುದರಿಂದ ಮೊಡವೆ ಮತ್ತು ಕಲೆಗಳನ್ನು ಹೋಗಲಾಡಿಸಬಹುದು. ಇದರಿಂದ ಮುಖವು ಕಾಂತಿಯುತವಾಗಿ ಕಾಣಿಸುತ್ತದೆ. ಇದನ್ನು ಬೆಳಿಗ್ಗೆ ಹಚ್ಚಬಹುದು ಅಥವಾ ರಾತ್ರಿ ಮಲಗುವಾಗ ಅನ್ವಯಿಸಿ ಬೆಳಗಿನ ಜಾವ ತಣ್ಣನೆಯ ನೀರಿನಿಂದ ತೊಳೆದುಕೊಳ್ಳಬಹುದು.