Watermelon Rind Benefits: ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೆ ಈ ರೀತಿ ಬಳಕೆ ಮಾಡಿ!

Watermelon Peel: ಬೇಸಿಗೆ ಕಾಲ ಶುರುವಾಗಿದೆ. ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಲೇ ಇದೆ. ಬಿಸಿಲಿನ ಬೇಗೆಯನ್ನು ಕಡಿಮೆ ಮಾಡಿಕೊಳ್ಳಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಈ ಬೇಸಿಗೆಯಲ್ಲಿ ಹೇಳಿ ಮಾಡಿಸಿದ ಹಣ್ಣು ಕಲ್ಲಂಗಡಿ. ಸೀಸನಲ್ ಹಣ್ಣಾದ ಕಲ್ಲಂಗಡಿಯಲ್ಲಿ ನೀರಿನಾಂಶ ಹೆಚ್ಚಾಗಿದೆ. ಹೀಗಾಗಿ ಎಲ್ಲರೂ ಇಷ್ಟಪಟ್ಟು ಬೇಸಿಗೆಯಲ್ಲಿ ಕಲ್ಲಂಗಡಿ ತಿನ್ನುತ್ತಾರೆ. ಬರೀ ಹಣ್ಣು ತಿಂದು ಸಿಪ್ಪೆಯನ್ನು ಬಿಸಾಡುತ್ತಾರೆ. ಆದರೆ ಈ ಸಿಪ್ಪೆಯಿಂದಲೂ ಅನೇಕ ಪ್ರಯೋಜನಗಳಿವೆ ಅಂದ್ರೆ ನಂಬ್ತೀರಾ? ಹೌದು, ಅದರ ಲಾಭಗಳ ಬಗ್ಗೆ ಗೊತ್ತಾದ್ರೆ ನೀವು ಸಿಪ್ಪೆಯನ್ನು ಎಸೆಯೋದೆ ಇಲ್ಲ.

First published:

  • 17

    Watermelon Rind Benefits: ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೆ ಈ ರೀತಿ ಬಳಕೆ ಮಾಡಿ!

    ಕಲ್ಲಂಗಡಿ ಹಣ್ಣಿನ ಸಿಪ್ಪೆ ಬೇರೆ ಹಣ್ಣುಗಳ ಸಿಪ್ಪೆಗಳಂತೆ ತೆಳುವಾಗಿಲ್ಲ, ಮಂದವಾಗಿದೆ. ಈ ದಪ್ಪ ಸಿಪ್ಪೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕಲ್ಲಂಗಡಿ ತಿಂದ ನಂತರ ಅದರ ಬಿಳಿ ಮತ್ತು ಹಸಿರು ಭಾಗವನ್ನು ಎಸೆಯದೇ ಬಳಸಬಹುದು. ಅದು ಹೇಗೆ ಅಂತೀರಾ? ಮುಂದೆ ಓದಿ.

    MORE
    GALLERIES

  • 27

    Watermelon Rind Benefits: ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೆ ಈ ರೀತಿ ಬಳಕೆ ಮಾಡಿ!

    ಅಡುಗೆಯಲ್ಲಿ ಬಳಕೆ: ಕಲ್ಲಂಗಡಿ ಸಿಪ್ಪೆಯಿಂದ ಉಪ್ಪಿನಕಾಯಿ ತಯಾರಿಸಬಹುದು. ಸಿಪ್ಪೆಯನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಉಪ್ಪಿನಕಾಯಿ ಹಾಕಿದರೆ ತುಂಬಾ ರುಚಿಯಾಗಿರುತ್ತದೆ. ಇನ್ನು, ಸಿಪ್ಪೆಯ ಬಿಳಿ ಭಾಗದಿಂದ ಸ್ಮೂಥಿಗಳು & ಸೂಪ್​​ಗಳನ್ನು ತಯಾರಿಸಬಹುದು. ಕೆಲವು ದೇಶಗಳಲ್ಲಿ ಈ ಸಿಪ್ಪೆಯಿಂದ ಅನೇಕ ಬಗೆಯ ಅಡುಗೆ ಮಾಡುತ್ತಾರೆ.

    MORE
    GALLERIES

  • 37

    Watermelon Rind Benefits: ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೆ ಈ ರೀತಿ ಬಳಕೆ ಮಾಡಿ!

    ತ್ವಚೆಯ ಆರೈಕೆ: ಕಲ್ಲಂಗಡಿ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಎ ಮತ್ತು ಸಿ ಅಂಶವಿದೆ. ಅವು ತ್ವಚೆಯನ್ನು ರಕ್ಷಿಸುತ್ತವೆ. ಆದ್ದರಿಂದ, ಕಲ್ಲಂಗಡಿ ಸಿಪ್ಪೆಯನ್ನು ಅರೆದು ಚರ್ಮಕ್ಕೆ ಅಪ್ಲೈ ಮಾಡಬಹುದು. ಕಲ್ಲಂಗಡಿ ಸಿಪ್ಪೆಯನ್ನು ಮಿಕ್ಸರ್​​ನಲ್ಲಿ ಹಾಕಿ, ಜ್ಯೂಸ್ ನಂತೆ ಮಾಡಿ ದೇಹಕ್ಕೆ ಹಚ್ಚಿಕೊಳ್ಳಬಹುದು. ನೈಸರ್ಗಿಕ ಫೇಸ್‌ಪ್ಯಾಕ್‌ನಂತೆ ಬಳಸಬಹುದು.

    MORE
    GALLERIES

  • 47

    Watermelon Rind Benefits: ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೆ ಈ ರೀತಿ ಬಳಕೆ ಮಾಡಿ!

    ಕಾಂಪೋಸ್ಟಿಂಗ್: ಕಲ್ಲಂಗಡಿ ಸಿಪ್ಪೆಯಲ್ಲಿ ಸಾರಜನಕವಿದೆ. ಹಾಗಾಗಿ ಇವುಗಳನ್ನು ಕಾಂಪೋಸ್ಟ್ ಗುಂಡಿಗೆ ಹಾಕಿದರೆ 90 ದಿನಗಳ ನಂತರ ನೈಸರ್ಗಿಕ ಗೊಬ್ಬರ, ವರ್ಮಿಕಾಂಪೋಸ್ಟ್ ಆಗಿ ಬದಲಾಗುತ್ತದೆ. ಇದನ್ನು ಗಿಡಗಳಿಗೆ ಹಾಕಿದರೆ ಗಿಡಗಳು ಚೆನ್ನಾಗಿ ಬೆಳೆಯುತ್ತವೆ.

    MORE
    GALLERIES

  • 57

    Watermelon Rind Benefits: ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೆ ಈ ರೀತಿ ಬಳಕೆ ಮಾಡಿ!

    ಪ್ರಾಣಿಗಳಿಗೆ ಆಹಾರ: ನಾವು ಕಲ್ಲಂಗಡಿ ಹಣ್ಣನ್ನು ತಿಂದು, ಅದರ ಸಿಪ್ಪೆಯನ್ನು ಬಿಸಾಡದೆ ಪ್ರಾಣಿಗಳಿಗೆ ನೀಡಬಹುದು. ಹಸು, ಕುರಿ-ಮೇಕೆಯಂತಹ ಸಸ್ಯಾಹಾರಿ ಪ್ರಾಣಿಗಳಿಗೆ ಕೊಡಬಹುದು.

    MORE
    GALLERIES

  • 67

    Watermelon Rind Benefits: ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೆ ಈ ರೀತಿ ಬಳಕೆ ಮಾಡಿ!

    ಕ್ರಾಫ್ಟ್​ ಪ್ರಾಜೆಕ್ಟ್​ಗೆ ಬಳಕೆ: ಕಸದಿಂದ ರಸ ಎಂಬ ಮಾತನ್ನು ಕೇಳಿದ್ದೇವೆ. ಅಂತೆಯೇ ಕಲ್ಲಂಗಡಿ ಹಣ್ಣಿನ ಸಿಪ್ಪೆಯಿಂದ ಅನೇಕ ಅಲಂಕಾರಿಕ ಕ್ರಾಫ್ಟ್​ಗಳನ್ನು ತಯಾರಿಸಬಹುದು. ನಿಮಗೆ ಇದರ ಬಗ್ಗೆ ಗೊಂದಲಗಳಿದ್ದರೆ, ಯೂಟ್ಯೂಬ್​ನಲ್ಲಿ ಅನೇಕ ವಿಡಿಯೋಗಳು ಸಿಗುತ್ತವೆ. ಅವುಗಳ ಸಹಾಯ ತೆಗೆದುಕೊಳ್ಳಿ.

    MORE
    GALLERIES

  • 77

    Watermelon Rind Benefits: ಕಲ್ಲಂಗಡಿ ಹಣ್ಣಿನ ಸಿಪ್ಪೆ ಎಸೆಯದೆ ಈ ರೀತಿ ಬಳಕೆ ಮಾಡಿ!

    ಹೀಗೆ ಕಲ್ಲಂಗಡಿ ಸಿಪ್ಪೆಯನ್ನು ಹಲವು ವಿಧಗಳಲ್ಲಿ ಬಳಸಬಹುದು. ಇದನ್ನು ಅಡುಗೆಯಲ್ಲಿ, ಚರ್ಮದ ಆರೈಕೆಗಾಗಿ, ಕರಕುಶಲ ತಯಾರಿಕೆಯಲ್ಲಿ, ಗೊಬ್ಬರವಾಗಿ ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಅನೇಕ ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣಿನ ಸಿಪ್ಪೆಯನ್ನು ಬಳಸುವುದರಿಂದ ನಮಗೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ.

    MORE
    GALLERIES