ಒಟ್ಟಿಗೆ ಕ್ರಿಸ್ಮಸ್ ಮರವನ್ನು ಅಲಂಕರಿಸಿ ಈ ಸಮಯದಲ್ಲಿ ಅನೇಕ ಜನರು ಕ್ರಿಸ್ಮಸ್ ಮರವನ್ನು ಅಲಂಕರಿಸುತ್ತಾರೆ. ಕ್ರಿಸ್ಮಸ್ ಮರವನ್ನು ಅಲಂಕರಿಸುವುದು ವಿಶೇಷ ಅನುಭವವನ್ನು ನೀಡುತ್ತದೆ. ಕ್ರಿಸ್ಮಸ್ ಟ್ರೀ ಹಬ್ಬದ ಮೂಡ್, ಚೀರ್ಸ್ ಹುಟ್ಟು ಹಾಕುತ್ತದೆ. ಈ ಮರವು ಏಕತೆಯನ್ನು ಸೂಚಿಸುತ್ತದೆ. ಒಟ್ಟಿಗೆ ಮರವನ್ನು ಅಲಂಕಾರ ಮಾಡುವುದು ಇಬ್ಬರನ್ನು ಇನ್ನಷ್ಟು ಹತ್ತಿರ ಮಾಡುತ್ತದೆ.
ಒಟ್ಟಿಗೆ ಕೇಕ್ ಮಾಡಿ. ಕ್ರಿಸ್ಮಸ್ ದಿನದಂದು ಎಲ್ಲರೂ ಅತ್ಯಂತ ರುಚಿಕರವಾದ, ಬಾಯಲ್ಲಿ ನೀರೂರಿಸುವ ಪ್ಲಮ್ ಕೇಕ್ ಮತ್ತು ಹಣ್ಣಿನ ಕೇಕ್ ಅನ್ನು ತಯಾರಿಸುತ್ತಾರೆ. ಆದರೆ ಪ್ರೇಮಿಗಳು ಸೇರಿ ಕೇಕ್ ತಯಾರಿಸಿದರೆ ಆಗುವ ಖುಷಿಯೇ ಬೇರೆ. ಇಬ್ಬರೂ ಸೇರಿ ಮೋಜು ಮಸ್ತಿ ಮಾಡುತ್ತಾ ಕೇಕ್ ರೆಡಿ ಮಾಡಿದರೆ. ಆ ನೆನಪು ಮನಸ್ಸಿನಲ್ಲಿ ಸದಾ ಭದ್ರವಾಗಿರುತ್ತದೆ. ಕ್ರಿಸ್ಮಸ್ ದಿನದಂದು ಒಟ್ಟಿಗೆ ಕೇಕ್ ತಯಾರಿಸುವುದು ಅತ್ಯಂತ ವಿಶೇಷ .ಅತ್ಯಂತ ಸ್ಮರಣೀಯ ಸಂಪ್ರದಾಯಗಳಲ್ಲಿ ಒಂದಾಗಿದೆ. ಇದು ಖಂಡಿತವಾಗಿಯೂ ದಂಪತಿಗಳನ್ನು ಹತ್ತಿರ ಮಾಡುತ್ತದೆ.