Health Tips: ತೂಕ ಇಳಿಸುವುದರಿಂದ ಹಿಡಿದು ಮಲಬದ್ದತೆಯವರೆಗೆ ಕಾಮಕಸ್ತೂರಿಯ ಪ್ರಯೋಜನಗಳಿವು
Basil Seeds Health Benefits: ಸಾಮಾನ್ಯವಾಗಿ ಫಾಲೂದಾದಲ್ಲಿ ನೀರಿನ ಗುಳ್ಳೆಯ ರೀತಿಯ ಕಾಳುಗಳಿರುತ್ತದೆ. ಅದು ತಿನ್ನಲು ಮಜ ಅನಿಸುತ್ತದೆ. ಆದರೆ ಅದೆಷ್ಟೋ ಜನರಿಗೆ ಈ ಬೀಜದ ಬಗ್ಗೆ ಮಾಹಿತಿ ಇರುವುದಿಲ್ಲ. ಈ ಬೀಜವನ್ನು ಕಾಮಕಸ್ತೂರಿ ಅಥವಾ ತುಳಸಿ ಬೀಜ ಎನ್ನಲಾಗುತ್ತದೆ. ಇದರ ಆರೋಗ್ಯ ಪ್ರಯೋಜನಗಳು ಹಲವಾರು. ಹಾಗಾದ್ರೆ ಇದರ ಪ್ರಯೋಜನಗೇನು ಎಂಬುದು ಇಲ್ಲಿದೆ.
ಈ ಕಾಮಕಸ್ತೂರಿ ಬೀಜಗಳು ತೂಕವನ್ನು ಇಳಿಕೆ ಮಾಡಿಕೊಳ್ಳುವುದರಿಂದ ಹಿಡಿದು ಚರ್ಮದ ಆರೋಗ್ಯವನ್ನು ಕಾಪಾಡುವವರೆಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
2/ 10
ಈ ಕಾಮ ಕಸ್ತೂರಿ ಬೀಜಗಳು ಒಮೆಗಾ 3, ಕೊಬ್ಬಿನಾಮ್ಲಗಳು, ವಿಟಮಿನ್ ಎ, ಬಿ, ಇ ಮತ್ತು ಕೆ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್ ಮತ್ತು ಕಬ್ಬಿಣದಂತಹ ವಿವಿಧ ರೀತಿಯ ಪೋಷಕಾಂಶಗಳನ್ನು ಸಮೃದ್ದವಾಗಿ ಹೊಂದಿದೆ.
3/ 10
ಕಾಮಕಸ್ತೂರಿ ಬೀಜವನ್ನು ರಾತ್ರಿ ಸೇವನೆ ಮಾಡುವುದು ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ತೂಕವನ್ನು ಸಹ ಸುಲಭವಾಗಿ ಇಳಿಸಿಕೊಳ್ಳಬಹುದು.
4/ 10
ಕಾಮಕಸ್ತೂರಿ ಬೀಜವನ್ನು ಸಕ್ಕರೆಯ ಜೊತೆ ಸೇರಿಸಿ ಸೇವನೆ ಮಾಡುವುದು ನಿಮ್ಮ ದೇಹದಿಂದ ವಿಷದ ಅಂಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ.
5/ 10
ಕಾಮಕಸ್ತೂರಿ ಬೀಜ ಹೆಚ್ಚು ತಂಪಿನ ಗುಣಗಳನ್ನು ಹೊಂದಿದ್ದು, ಇದರ ಸೇವನೆಯಿಂದ ದೇಹದ ಉಷ್ಣಾಂಶವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
6/ 10
ಇನ್ನು ಈ ಬೀಜಗಳನ್ನು ರಾತ್ರಿಯಲ್ಲಾ ನೆನೆಸಿಟ್ಟು , ಬೆಳಗ್ಗೆ ಅದಕ್ಕೆ ನಿಂಬೆ ರಸ ಹಾಕಿ ಕುಡಿಯುವುದು ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ.. ಇದು ನಿಮ್ಮ ದೇಹದ ಹೆಚ್ಚಿನ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ.
7/ 10
ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಈ ಬೀಜಗಳು ಹೆಚ್ಚು ಪ್ರಯೋಜನಕಾರಿ. ಈ ಬೀಜಗಳನ್ನು ರಾತ್ರಿ ನೆನಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ಕುಡಿಯುವುದು ಉತ್ತಮ.
8/ 10
ಮಲಬದ್ಧತೆ, ಹೊಟ್ಟೆ ನೋವು, ಎದೆಯಲ್ಲಿ ಉರಿಯಂತಹ ಸಮಸ್ಯೆ ಅನುಭವಿಸುತ್ತಿದ್ದಾರೆ, ಇದು ಬೆಸ್ಟ್ ಮನೆಮದ್ದು ಎನ್ನಲಾಗುತ್ತದೆ. ಇದು ಮೃದುವಾದ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ.
9/ 10
ನಿಮಗೆ ಮುಖ ಅಥವಾ ಬೇರೆ ಯಾವುದೇ ಚರ್ಮದ ಸಮಸ್ಯೆ ಇದ್ದರೆ, ಬೀಜಗಳನ್ನು ಪುಡಿ ಮಾಡಿ, ತೆಂಗಿನ ಎಣ್ಣೆಯಲ್ಲಿ ಸೇರಿಸಿ ಹಚ್ಚುವುದು, ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
10/ 10
ಬೀಜಗಳನ್ನು ನಿಯಮಿತವಾಗಿ ತಿನ್ನುವುದರಿಂದ ದೇಹವು ಕಾಲಜನ್ ಅನ್ನು ಸ್ರವಿಸಲು ಸಹಾಯ ಮಾಡುತ್ತದೆ.ಇದು ನಿಮ್ಮ ಎಲ್ಲಾ ಚರ್ಮದ ಸಮಸ್ಯೆಗೆ ಫುಲ್ ಸ್ಟಾಪ್ ಹಾಕುತ್ತದೆ.