ಕಾರ್ಬೋಹೈಡ್ರೇಟ್ಗಳು: ಕಾರ್ಬೋಹೈಡ್ರೇಟ್ಗಳು ಮಧುಮೇಹಿಗಳಿಗೆ ಶತ್ರುವಲ್ಲ. ಬದಲಿಗೆ ಕಾರ್ಬೋಹೈಡ್ರೇಟ್ಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಹೋಲ್ವೀಡ್ ಹಿಟ್ಟು, ಜೋಳ, ರಾಗಿ, ಬಾಜ್ರಾ ಮತ್ತು ಬ್ರೌನ್ ರೈಸ್ ಉತ್ತಮವಾಗಿದೆ. ಏಕೆಂದರೆ ಇವುಗಳು ಗ್ಲುಕೋಸ್ ಅನ್ನು ನಿಧಾನವಾಗಿ ರಕ್ತಕ್ಕೆ ಬಿಡುಗಡೆ ಮಾಡುತ್ತದೆ. ಗುಣಮಟ್ಟದ ಪ್ರೋಟೀನ್ ಆಹಾರಗಳೊಂದಿಗೆ ಕಾರ್ಬೋಹೈಡ್ರೇಟ್ಗಳನ್ನು ಯಾವಾಗಲೂ ಸೇವಿಸುವುದು ಗ್ಲೂಕೋಸ್ನ ಬಿಡುಗಡೆಯನ್ನು ಇನ್ನಷ್ಟು ನಿಧಾನಗೊಳಿಸಲು ಸಹಾಯ ಮಾಡುತ್ತದೆ.
ಸಕ್ಕರೆ ಬಗ್ಗೆ ಗಮನವಿರಲಿ: ಮಧುಮೇಹಕ್ಕೆ ಸಕ್ಕರೆ ಮಾತ್ರ ವಿಲನ್ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು. ಏಕೆಂದರೆ ಮಧುಮೇಹವನ್ನು ಇನ್ನಷ್ಟು ಹದಗೆಡಿಸುವ ಹಲವಾರು ಅಂಶಗಳಿವೆ. ಅದೇ ಸಮಯದಲ್ಲಿ ಹೆಚ್ಚು ಸಕ್ಕರೆ ಸೇವನೆಯು ಹಾನಿಕಾರಕವಾಗಿದೆ. ಕುಕೀಸ್ ಮತ್ತು ಐಸ್ ಕ್ರೀಮ್ ನಲ್ಲಿ ಕಂಡುಬರುವ ಕೊಬ್ಬು ಮತ್ತು ಸಕ್ಕರೆಯು ವ್ಯಕ್ತಿಯ ತೂಕವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆಚ್ಚಿದ ತೂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ.
ಪ್ರೋಟೀನ್: ನಮ್ಮ ಆಹಾರದಲ್ಲಿನ ಪ್ರೋಟೀನ್ ಇನ್ಸುಲಿನ್ ಹೆಚ್ಚಿಸಲು ಸಹಾಯ ಮಾಡುತ್ತದೆಯಾದರೂ, ಸರಿಯಾದ ಪ್ರಮಾಣದಲ್ಲಿ ಪ್ರೋಟೀನ್ನ ಗುಣಮಟ್ಟವನ್ನು ತೆಗೆದುಕೊಳ್ಳುವುದು ಮುಖ್ಯ. ಏಕೆಂದರೆ ಅನೇಕ ಪ್ರೋಟೀನ್ ಭರಿತ ಆಹಾರಗಳು ಹೆಚ್ಚಾಗಿ ಕೊಬ್ಬಿನಂಶವನ್ನು ಹೊಂದಿರುತ್ತವೆ. ಆದ್ದರಿಂದ ಎಚ್ಚರಿಕೆಯಿಂದ ಆಯ್ಕೆ ಮಾಡಿ. ಮಧುಮೇಹಿಗಳು, ಆಹಾರದಲ್ಲಿ ಉತ್ತಮ ಗುಣಮಟ್ಟದ, ಸುಲಭವಾಗಿ ಜೀರ್ಣವಾಗುವ ಪ್ರೋಟೀನ್ ಅನ್ನು ಸೇರಿಸುವುದರಿಂದ ಹೊಟ್ಟೆಯಲ್ಲಿ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.