Makar Sankranti 2022: ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಲು ಇಲ್ಲಿದೆ ಟಿಪ್ಸ್
How To Celebrate Festival With family: ಸಂಕ್ರಾಂತಿ ಹಬ್ಬದ ಸಂಭ್ರಮ ಆರಂಭವಾಗಿದೆ. ಆದರೆ ಕೊರೊನಾ ಇರುವುದರಿಂದ ಎಚ್ಚರಿಕೆಯಿಂದ ಆಚರಣೆ ಮಾಡಬೇಕು. ಹಬ್ಬ ಎಂದ ಮೇಲೆ ಸಂಬಂಧಿಕರನ್ನು ಕರೆದು ಆಚರಿಸುವುದು ಸಾಮಾನ್ಯ, ಆದರೆ ಈ ಬಾರಿ ಹಾಗೆ ಆಗುವುದಿಲ್ಲ. ಸಾಧ್ಯವಾದಷ್ಟು ಯಾರನ್ನೂ ಕರೆಯದೇ ಮನೆಯಲ್ಲಿಯೇ ಮಾಡುವುದು ಉತ್ತಮ. ಹಾಗಾದ್ರೆ ಈ ಬಾರಿ ಹಬ್ಬವನ್ನು ವಿಭಿನ್ನವಾಗಿ ಹೇಗೆ ಆಚರಣೆ ಮಾಡುವುದು ಎಂಬುದು ಇಲ್ಲಿದೆ.
ಈಗ ಕೊರೊನಾ ವೈರಸ್ ಭೀತಿ ಎದುರಾಗಿರುವುದರಿಂದ, ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದು ಅಗತ್ಯವಾಗಿದೆ. ಮೊದಲು ನೀವು ಮನೆಗೆ ಹೆಚ್ಚು ಜನರನ್ನು ಆಹ್ವಾನಿಸಬೇಡಿ. ಸಾಧ್ಯವಾದಷ್ಟು ಕಡಿಮೆ ಜನರನ್ನು ಕರೆಯಿರಿ.
2/ 6
ಜನರನ್ನು ಕರೆದಾಗ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಮಾಸ್ಕ್ ಧರಿಸುವುದು ಮುಖ್ಯವಾಗುತ್ತದೆ. ಪ್ರತಿಯೊಬ್ಬರಿಗೂ ಮಾಸ್ಕ್ ಧರಿಸಲು ಹೇಳಿ, ಮನೆಗೆ ಬಂದ ನಂತರ ಕೈಕಾಲು ತೊಳೆದು ಸ್ವಚ್ಛವಾಗಲು ಹೇಳಿ.
3/ 6
ರುಚಿಕರವಾದ ಆಹಾರ ಮತ್ತು ಪಾನೀಯಗಳು ಪ್ರತಿ ಹಬ್ಬದ ಪ್ರಮುಖ ಭಾಗವಾಗಿದೆ. ಈ ವರ್ಷ ಕರೋನಾ ಹೆಚ್ಚಾಗಿರುವ ಕಾರಣ ಆರೋಗ್ಯಕರ ಆಹಾರವನ್ನು ತಿನ್ನುವುದು ಮುಖ್ಯ. ಜಂಕ್ ಫುಡ್ಗಳ ಬದಲಾಗಿ ಹೆಚ್ಚು ಆರೋಗ್ಯಕರ ಆಹಾರ ಉತ್ತಮ.
4/ 6
ಅಲಂಕಾರಗಳು: ಈ ವರ್ಷ ಕಡಿಮೆ ಜನರು ನಿಮ್ಮ ಮನೆಗೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ಕಡಿಮೆ ಜಾಗದಲ್ಲಿ ನಿಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸಲು ಪ್ರಯತ್ನಿಸಿ. ಮಡಿಕೆ, ಬೆತ್ತ, ಕಂಬಗಳು ಮತ್ತು ಹೂವುಗಳಿಂದ ಮನೆಯನ್ನು ಅಲಂಕರಿಸಿ.
5/ 6
ಕ್ಯಾಶುಯಲ್ ಅಲಂಕಾರವು ಉತ್ತಮವಾಗಿದ್ದರೂ ಸಹ, ಥೀಮ್ ಇದ್ದರೆ ಇನ್ನೂ ಚಂದ. ನೀವು ನಿರ್ದಿಷ್ಟ ಥೀಮ್ ಅನ್ನು ಆಯ್ಕೆ ಮಾಡಬಹುದು ಮತ್ತು ಅದಕ್ಕೆ ಅನುಗುಣವಾಗಿ ಬಟ್ಟೆ ಧರಿಸಬಹುದು. ಇದು ಹಬ್ಬದ ಸಂತೋಷವನ್ನು ಹೆಚ್ಚು ಮಾಡುತ್ತದೆ.
6/ 6
ವಿಶಿಷ್ಟ ಸಂಗೀತವಿಲ್ಲದೆ ಹಬ್ಬದ ಆಚರಣೆಯು ಪೂರ್ಣಗೊಳ್ಳುವುದಿಲ್ಲ. ನಿಮ್ಮ ಪಾರ್ಟಿಯನ್ನು ಪ್ರಾರಂಭಿಸುವ ಮೊದಲು ಪ್ಲೇಪಟ್ಟಿಯನ್ನು ತಯಾರಿಸಿ. ಹಳ್ಳಿ ಶೈಲಿಯ ಹಾಡುಗಳು ಚೆನ್ನಾಗಿರುತ್ತದೆ.