Knee Pain: ಮಂಡಿ ನೋವು ತಡೆಯೋಕೆ ಆಗ್ತಿಲ್ವಾ? ಇಲ್ಲಿದೆ ನೋಡಿ ಮನೆಮದ್ದುಗಳು
Home Remedies For Knee Pain: ಈ ಮಂಡಿ ನೋವು ಯಾವ ಕಾರಣಕ್ಕೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಬಂದರೆ ಸುಲಭವಾಗಿ ಹೋಗುವುದಿಲ್ಲ. ಬಹಳಷ್ಟು ಪರದಾಡಬೇಕಾಗುತ್ತದೆ. ಆದರೆ ಮನೆಯಲ್ಲಿ ಸಿಗುವ ಕೆಲ ವಸ್ತುಗಳು ನಮ್ಮ ಈ ಮಂಡಿ ನೋವಿಗೆ ಪರಿಹಾರ ನೀಡುತ್ತದೆ. ಯಾವ ವಸ್ತುಗಳನ್ನು ಹೇಗೆ ಬಳಸಿದ್ರೆ ಮಂಡಿ ನೋವು ಹೋಗುತ್ತದೆ ಎಂಬುದು ಇಲ್ಲಿದೆ.
ಮೊದಲೆಲ್ಲ ಮಂಡಿ ನೋವು ವಯಸ್ಸಾದವರಲ್ಲಿ ಮಾತ್ರ ಕಾಣಿಸುತಿತ್ತು. ಆದರೆ ಇತ್ತೀಚಿನ ಜೀವನಶೈಲಿಯ ಕಾರಣದಿಂದ ಯುವಕರಲ್ಲಿ ಸಹ ಈ ನೋವು ಕಾಣಿಸುತ್ತಿದೆ.
2/ 7
ಒಂದು ಕಪ್ ಅಕ್ಕಿ ಹಿಟ್ಟು, ಮೂರು ಟೇಬಲ್ ಚಮಚ ತುರಿದ ಶುಂಠಿ, ಒಂದು ಟೀ ಚಮಚ ಏಲಕ್ಕಿ ಪುಡಿ, ಒಂದು ಟೀ ಚಮಚ ಲವಂಗದ ಪುಡಿ, ಒಂದು ಟೀ ಚಮಚ ಕಲ್ಲುಪ್ಪು ಸೇರಿಸಿ ಗಂಟು ಕಟ್ಟಿ ಇಡಿ. ನಂತರ ಎಳ್ಳೆಣ್ಣೆಯನ್ನು ಬಿಸಿ ಮಾಡಿ ಮಂಡಿ ನೋವಿರುವ ಕಡೆ ಹಚ್ಚಿ ಚನ್ನಾಗಿ ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ.
3/ 7
ಕರ್ಪೂರವನ್ನು ಪುಡಿ ಮಾಡಿಕೊಂಡು ತೆಂಗಿನ ಎಣ್ಣೆಯನ್ನು ಬಳಸಿ ಕರ್ಪೂರದ ಎಣ್ಣೆಯನ್ನು ತಯಾರಿಸಿಕೊಳ್ಳಿ. ಅದನ್ನ ಮಂಡಿಯ ಮೇಲೆ ಹಚ್ಚಿ ಉಜ್ಜಿ.
4/ 7
ಬಿಸಿಯಾದ ಹಾಲಿಗೆ ಅರಿಶಿನವನ್ನು ಹಾಕಿ ಕುಡಿಯುವುದು ಮಂಡಿ ನೋವನ್ನು ಬೇಗ ಶಮನ ಮಾಡುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ಗಳಿದ್ದು (Anti oxidant), ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
5/ 7
ರಾತ್ರಿ ಮೆಂತೆಕಾಳನ್ನು ನೆನೆಸಿ ಬೆಳಗ್ಗೆ ಕಾಳಿನ ಸಮೇತ ನೀರನ್ನು ಕುಡಿಯುವುದು ಮಂಡಿ ನೋವಿಗೆ ಪರಿಣಾಮಕಾರಿ ಮನೆಮದ್ದು ಎನ್ನಲಾಗುತ್ತದೆ.
6/ 7
ಎರಡು ಟೇಬಲ್ ಚಮಚ ಓಂಕಾಳುಗಳನ್ನು ನುಣ್ಣಗೆ ಅರೆದು ಮಂಡಿಯ ಮೇಲೆ ಹಚ್ಚಿದರೆ ಬೇಗ ನೋವು ಮಾಯವಾಗುತ್ತದೆ.
7/ 7
ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ನೋವಿರುವ ಜಾಗದಲ್ಲಿ ಹಚ್ಚಿ ಚನ್ನಾಗಿ ಮಸಾಜ್ ಮಾಡುವುದು ಹೆಚ್ಚಿನ ಪ್ರಯೋಜನ ನೀಡುತ್ತದೆ.