Vitamin B 12: ಪದೇ ಪದೇ ತಲೆಸುತ್ತು, ತಲೆನೋವು ಬರುತ್ತಿದೆಯಾ? ಹಾಗಾದ್ರೆ ನಿಮಗೆ ಈ ಕೊರತೆ ಇದೆ..
ವಿಟಮಿನ್ ಬಿ 12 ನೀರಿನಲ್ಲಿ ಕರಗುವ ವಿಟಮಿನ್ ಆಗಿದ್ದು, ಅದು ರಕ್ತ ರಚನೆ ಮತ್ತು ನರಮಂಡಲದ ಕಾರ್ಯನಿರ್ವಹಣೆಗೆ ಬಹಳ ಅಗತ್ಯವಾಗಿದೆ. ಇದರ ಮುಖ್ಯ ಸಮಸ್ಯೆ ಎಂದರೆ ನಮ್ಮ ದೇಹವು ಅದನ್ನು ಉತ್ಪಾದಿಸಲು ಸಾಧ್ಯವಿಲ್ಲ, ಆದ್ದರಿಂದ ಆಹಾರಗಳ ಮೂಲಕ ದೇಹಕ್ಕೆ ವಿಟಮಿನ್ 12 ಪಡೆಯಬೇಕು. ವಿಟಮಿನ್ ಬಿ 12 ಕೊರತೆಯಿಂದ ಏನಾಗುತ್ತದೆ ಮತ್ತು ಅದರಿಂದ ಯಾವ ತೊಂದರೆಗಳು ಉಂಟಾಗುತ್ತದೆ ಎಂಬುದು ಇಲ್ಲಿದೆ.
ಸಸ್ಯಾಹಾರಿಗಳಲ್ಲಿ ಬಿ 12 ವಿಟಮಿನ್ ಕೊರತೆಯು ಸಾಮಾನ್ಯವಾಗಿ ಕಂಡು ಬರುತ್ತದೆ. ಏಕೆಂದರೆ ಈ ವಿಟಮಿನ್ ಸಸ್ಯ ಆಧಾರಿತ ಆಹಾರ ಉತ್ಪನ್ನಗಳಲ್ಲಿ ಹೆಚ್ಚಾಗಿ ಕಂಡುಬರುವುದಿಲ್ಲ. ಹಾಗಾಗಿ ಸಸ್ಯಹಾರಿಗಳು ಹೆಚ್ಚು ವಿಟಮಿನ್ ಬಿ 12 ಇರುವ ಆಹಾರ ಪದಾರ್ಥಗಳನ್ನು ಹುಡುಕಿ ಸೇವನೆ ಮಾಡಬೇಕು.
2/ 10
ವಿಟಮಿನ್ ಬಿ 12 ಕೊರತೆಯಿಂದ ಮಕ್ಕಳಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಬುದ್ದಿ ಮಾಂದ್ಯತೆ, ಮರೆವು ಹೆಚ್ಚಾಗುತ್ತದೆ. ಮಕ್ಕಳು ಮೊದಲೇ ಊಟಗಳನ್ನು ಸರಿಯಾಗಿ ಮಾಡುವುದಿಲ್ಲ. ಸಾಧ್ಯವಾದಷ್ಟು ಆಹಾರದಲ್ಲಿ ವಿಟಮಿನ್ ಬಿ12 ಇರುವುದನ್ನ ನೀಡಿ.
3/ 10
ವಯಸ್ಕರಲ್ಲಿ ಸಹ ವಿಟಮಿನ್ ಬಿ 12 ಕೊರತೆ ಕಾಡುತ್ತದೆ. ಸಾಮಾನ್ಯವಾಗಿ ಎಲ್ಲರು ಒತ್ತಡದ ಜೀವನ ಶೈಲಿಯನ್ನು ನಡೆಸುತ್ತಿದ್ದಾರೆ. ಆದರೆ ಈ ವಿಟಮಿನ್ ಕೊರತೆಯಾದಾಗ ಸಣ್ಣ ಸಣ್ಣ ವಿಚಾರಗಳಿಗೂ ಒತ್ತಡ ಉಂಟಾಗಿ ಬೇರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
4/ 10
ವಿಟಮಿನ್ ಬಿ 12 ಕೊರತೆಯಿಂದ ಉಂಟಾಗುವ ದೊಡ್ಡ ಸಮಸ್ಯೆಯೆಂದರೆ ಖಿನ್ನತೆ. ಕಡಿಮೆ ಬಿ12ನಿಂದ ಉಂಟಾಗುವ ಹೆಚ್ಚಿನ ಮಟ್ಟದ ಹೋಮೋಸಿಸ್ಟೈನ್ ಕೆಲವು ಮೆದುಳಿನ ಅಂಗಾಂಶಗಳನ್ನು ತೊಂದರೆ ಮಾಡುತ್ತದೆ. ಇದು ಮೂಡ್ ಸ್ವಿಂಗ್ ಮತ್ತು ಖಿನ್ನತೆಗೆ ಕಾರಣವಾಗುತ್ತದೆ.
5/ 10
ಇದಿಷ್ಟೇ ಅಲ್ಲದೇ, ಇದರ ಕೊರತೆ ಹೃದಯಕ್ಕೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗುತ್ತದೆ. ರಕ್ತದೊತ್ತಡ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗೆ ಕಾರಣವಾಗುತ್ತದೆ.
6/ 10
ವಿಟಮಿನ್ಗಳ ಕೊರತೆ ಚರ್ಮದ ಸಮಸ್ಯೆಗೆ ಕಾರಣವಾಗುತ್ತದೆ. ಪ್ರತಿ ವಿಟಮಿನ್ ಕೊರತೆಯಂತೆಯೇ ವಿಟಮಿನ್ ಬಿ12 ಕೊರತೆ ಚರ್ಮದ ಸುಕ್ಕಾಗಲು ಕಾರಣವಾಗುತ್ತದೆ. ಅಲ್ಲದೇ ಕೆಲವೊಮ್ಮೆ ಕಪ್ಪು ಕಲೆಗಳಾಗುತ್ತದೆ.
7/ 10
ಇತ್ತೀಚೆಗೆ ಗಮನಿಸಿ ನೋಡಿ ಏಕಾಗ್ರತೆಯ ಸಮಸ್ಯೆ ಹೆಚ್ಚು ಜನರನ್ನು ಕಾಡುತ್ತದೆ. ಇದಕ್ಕೆ ಬಹಳಷ್ಟು ಕಾರಣವಿದೆ. ಅದರಲ್ಲಿ ಒಂದು ಕಾರಣ ವಿಟಮಿನ್ ಬಿ 12 ಕೊರತೆ. ಏಕಾಗ್ರತೆ ಸಮಸ್ಯೆಗೆ ಪರಿಹಾರ ಪಡೆಯಲು ವಿಟಮಿನ್ ಬಿ 12ಗಳಿರುವ ಆಹಾರ ಸೇವನೆ ಮುಖ್ಯವಾಗುತ್ತದೆ
8/ 10
ವಿಟಮಿನ್ ಬಿ12 ದೇಹದ ವಿವಿಧ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಕೆಂಪು ರಕ್ತ ಕಣಗಳ ಕೊರತೆಯು ಕೆಲವರಿಗೆ ಕಾಲಕಾಲಕ್ಕೆ ತಲೆಸುತ್ತು, ಪ್ರತಿ ವಿಚಾರದಲ್ಲಿ ಗೊಂದಲ ಉಂಟಾಗುವುದಕ್ಕೆ ಕಾರಣವಾಗುತ್ತದೆ.
9/ 10
ವಿಟಮಿನ್ ಬಿ 12 ಕೊರತೆಯನ್ನು ಕಡೆಗಾಣಿಸಬಾರದು. ಹೆಚ್ಚು ಸಮಸ್ಯೆಗಳು ಉಂಟಾದಾಗ ಅದಕ್ಕೆ ಕಾರಣವನ್ನು ಹುಡಿಕಿ ಪರಿಹಾರವನ್ನು ಕಂಡುಕೊಳ್ಳಬೇಕು. ಹೆಚ್ಚು ಸಮಸ್ಯೆ ಕಾಣಿಸಿಕೊಂಡಲ್ಲಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
10/ 10
ವಿಟಮಿನ್ ಬಿ 12 ಕೊರತೆಯನ್ನು ನಿವಾರಿಸಲು ಇರುವ ಉತ್ತಮ ಮಾರ್ಗ ಎಂದರೆ ಪೋಷಕಾಂಶಯುಕ್ತ ಆಹಾರ ಸೇವನೆ. ಮಾಂಸಹಾರಿಗಳಿಗೆ ಉತ್ತಮ ಪ್ರಮಾಣದಲ್ಲಿ ವಿಟಮಿನ್ ಬಿ 12 ಲಭಿಸುತ್ತೆ. ಆದರೂ ಕೂಡ ಕೊರತೆಯಾದಲ್ಲಿ ಕ್ರಮ ತೆಗೆದುಕೊಳ್ಳಬೇಕು.