ಕೆಂಪು ಚಹಾ: ದಕ್ಷಿಣ ಆಫ್ರಿಕಾದಲ್ಲಿ ಬೆಳೆಯುವ ಆಸ್ಪಲಾಟಸ್ ಮರದಿಂದ ಕೆಂಪು ಚಹಾ ಬರುತ್ತದೆ. ಇದನ್ನು ರೂಬೋಸ್ ಟೀ ಎಂದೂ ಕರೆಯುತ್ತಾರೆ. ಇದು ಹಸಿರು ಚಹಾಕ್ಕಿಂತ 50% ಹೆಚ್ಚು ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಕೂದಲನ್ನು ಗಟ್ಟಿಯಾಗಿಸುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.
ಹಳದಿ ಚಹಾ: ಹಸಿರು ಚಹಾದ ನಂತರ ಹೆಚ್ಚು ವ್ಯಾಪಕವಾಗಿ ಸೇವಿಸುವ ಚಹಾ ಹಳದಿ ಚಹಾ. ಇದು ಚೀನಾದಿಂದ ಪ್ರಪಂಚದಾದ್ಯಂತ ಅಭ್ಯಾಸವಾಗಿದೆ. ಇದರ ಎಲೆಗಳನ್ನು ಹಳದಿ ಬಣ್ಣಕ್ಕೆ ತರಲು ವಿಶೇಷವಾಗಿ ತಯಾರಿಸಲಾಗುತ್ತದೆ. ಇದರ ರುಚಿ ಗ್ರೀನ್ ಟೀಯಷ್ಟು ಕಹಿಯಲ್ಲ, ಸ್ವಲ್ಪ ಸಿಹಿಯಾಗಿರುತ್ತದೆ. ಇದು ಹಸಿರು ಚಹಾದಲ್ಲಿ ಕಂಡುಬರುವ ಎಲ್ಲಾ ಆ್ಯಂಟಿ ಆಕ್ಸಿಡೆಂಟ್ಗಳನ್ನು ಹೊಂದಿರುತ್ತದೆ.