ಗೋಧಿ ಹಿಟ್ಟಿನಿಂದ ಚಪಾತಿ ಮಾಡಿದಂತೆ ಜೋಳದ ಹಿಟ್ಟಿನಿಂದ ರೊಟ್ಟಿ ಮಾಡಲಾಗುತ್ತದೆ. ಇದು ಮ್ಯಾಂಗನೀಸ್, ಪೊಟ್ಯಾಸಿಯಮ್, ಸತು, ಕಬ್ಬಿಣ, ರಂಜಕ, ತಾಮ್ರ, ಸೆಲೆನಿಯಮ್, ವಿಟಮಿನ್-ಎ ಮತ್ತು ಇತರ ಆ್ಯಂಟಿ ಆಕ್ಸಿಡೆಂಟ್ಗಳನ್ನು ಸಹ ಒಳಗೊಂಡಿದೆ. ಇದು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಕಣ್ಣುಗಳಿಗೆ ಒಳ್ಳೆಯದು ಎನ್ನಲಾಗುತ್ತದೆ.