Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

Sojat Mehendi : ಮದುವೆ ಎಂದ ಮೇಲೆ ಮೆಹೆಂದಿ ಇಲ್ಲದೇ ಇರುವುದಿಲ್ಲ. ಇದು ಮದುವೆ ಹೆಣ್ಣಿನ ಸೌಂದರ್ಯವನ್ನು ಹೆಚ್ಚು ಮಾಡುತ್ತದೆ. ಹಾಗೆಯೇ ಎಲ್ಲ ಮೆಹೆಂದಿಗಳು ಹೆಚ್ಚು ಬಣ್ಣ ಬರುವುದಿಲ್ಲ, ಒಂದೊಂದು ಮೆಹೆಂದಿಯೂ ಒಂದೊಂದು ಬಣ್ಣವನ್ನು ನೀಡುತ್ತದೆ. ಆದರೆ ಎಲ್ಲಾ ಹೆಣ್ಣು ಮಕ್ಕಳಿಗೂ ಹೆಚ್ಚು ಕೆಂಪು ಬಣ್ಣ ಬರಬೇಕು ಎಂಬ ಆಸೆ ಇರುತ್ತದೆ, ಹಲವಾರು ಮೆಹೆಂದಿಗಳಲ್ಲಿ ಕೆಂಪು ಬಣ್ಣ ಬರಲಿ ಎಂದು ರಾಸಾಯನಿಕಗಳನ್ನು ಬಳಸಲಾಗುತ್ತದೆ. ಆದರೆ ಸಧ್ಯ ದೇಶದಲ್ಲಿ ಸೋಜತ್ ಮೆಹಂದಿ ಪ್ರಸಿದ್ಧವಾಗಿದೆ. iಷ್ಟಕ್ಕೂ ಏನಿದು ಸೋಜತ್ ಮೆಹಂದಿ? ಏನಿದರ ವಿಶೇಷತೆ ಇಲ್ಲಿದೆ ನೋಡಿ

First published:

  • 110

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಸೋಜತ್   ಮೆಹೆಂದಿ  ಎಂಬ ಹೆಸರು ಬಂದಿದ್ದು ಅದರ ಊರಿನಿಂದ.  ಸೋಜತ್ ಎಂಬುದು ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ಹರಿಯುವ ಸುಕ್ರಿ ನದಿ ದಂಡೆಯ ಮೇಲೆ ನೆಲೆಸಿರುವ ಒಂದು ನಗರವಾಗಿದೆ.

    MORE
    GALLERIES

  • 210

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಈ ನಗರದ ಬಹು ದೊಡ್ಡ ಆಕರ್ಷಣೆಯೆಂದರೆ ಇಲ್ಲಿ ಇರುವ ಮೆಹಂದಿ ತೋಟಗಳು. ಇಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಬಹುತೇಕ ವಿದೇಶಿ ಪ್ರವಾಸಿಗರು ಇದನ್ನು ಹೇಗೆ ಬೆಳೆಯುತ್ತಾರೆ ಎಂದು ಕಣ್ಣಾರೆ ನೋಡಲು ಮೌಂಟ್ ಅಬುವಿನ ಮೂಲಕ ಇಲ್ಲಿಗೆ ಭೇಟಿ ಕೊಡುತ್ತಾರೆ.

    MORE
    GALLERIES

  • 310

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಈ ಊರಿನ ದೊಡ್ಡ ಮತ್ತು ಸಣ್ಣ ರೈತರು, ವ್ಯಾಪಾರಿಗಳು, ತಯಾರಕರು ಮತ್ತು ಕಾರ್ಮಿಕರು 1000 ಕೋಟಿ ಮೌಲ್ಯದ ಮೆಹಂದಿ ಕೃಷಿಯನ್ನು ಅವಲಂಬಿಸಿದ್ದಾರೆ.

    MORE
    GALLERIES

  • 410

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಈ ಪ್ರದೇಶದ ಮಣ್ಣು ಮತ್ತು ಮಳೆ ಪರಿಸ್ಥಿತಿಗಳಿಂದಾಗಿ ಇದು ಅದರ ವಿಶೇಷ ಬಣ್ಣವನ್ನು ಪಡೆಯುತ್ತದೆ. ಮೆಹಂದಿ ಎಲೆಗಳು ಬೇರೆಡೆ ಬೆಳೆಯುವ ಎಲೆಗಳಿಗಿಂತ 2% ಅಧಿಕ ವರ್ಣದ್ರವ್ಯವನ್ನು ಹೊಂದಿರುತ್ತದೆ.

    MORE
    GALLERIES

  • 510

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಬೆಳೆದ ಮೆಹೆಂದಿ ಎಲೆಗಳನ್ನು ಬೇರ್ಪಡಿಸಲಾಗುತ್ತದೆ ಮತ್ತು ಬೀಜಗಳು ಮತ್ತು ಕಾಂಡಗಳನ್ನು ಒಳಗೊಂಡಿರುವ ತ್ಯಾಜ್ಯವನ್ನು ಕಡಿಮೆ ದರ್ಜೆಯ ಮೆಹಂದಿ ಪುಡಿಯನ್ನು ತಯಾರಿಸಲು ಬಳಸಲಾಗುತ್ತದೆ. ಉತ್ತಮ ಮೆಹಂದಿ ಪುಡಿಯನ್ನು ಪಡೆಯಲು ಒಳ್ಳೆಯ ಎಲೆಗಳನ್ನು ಒಂದೆರಡು ಬಾರಿ ಫಿಲ್ಟರ್ ಮಾಡಲಾಗುತ್ತದೆ.

    MORE
    GALLERIES

  • 610

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಈ ಮೆಹಂದಿಯನ್ನು ಪಾಕಿಸ್ತಾನ ಮತ್ತು ಪಶ್ಚಿಮ ಏಷ್ಯಾದ ದೇಶಗಳಲ್ಲಿ ಮತ್ತು ಇತರ ರಾಜ್ಯಗಳಲ್ಲಿ ಬೆಳೆಯುತ್ತಾರೆ ಆದರೆ ಈ ವಿಶಿಷ್ಟ ಬಣ್ಣವನ್ನು ಹೊಂದಿರುವುದಿಲ್ಲ. ಇದರ ಬಣ್ಣವೇ ಇದರ ವಿಶೇಷ.

    MORE
    GALLERIES

  • 710

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಮೆಹೆಂದಿಯ ಗಾಢ ಬಣ್ಣಕ್ಕಾಗಿ ಪಿಪಿಡಿ (ಪ್ಯಾರಾಫೆನಿಲೆನೆಡಿಯಾಮೈನ್) ಮತ್ತು ಬೆಂಜೈಲ್ ಆಲ್ಕೋಹಾಲ್ ನಂತಹ ರಾಸಾಯನಿಕಗಳನ್ನು ಡಾರ್ಕ್ ಟಿಂಟ್ ನೀಡಲು ಸೇರಿಸಲಾಗುತ್ತದೆ. ಆದರೆ ಸೋಜತ್ ಮೆಹೆಂದಿಯಲ್ಲಿ ಯಾವುದೇ ರೀತಿಯ ಕಲಬೆರಕೆ ಇರುವುದಿಲ್ಲ.

    MORE
    GALLERIES

  • 810

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಈ ಪ್ರಸಿದ್ಧ ಮೆಹೆಂದಿಗೆ GI ಟ್ಯಾಗ್​ ಸಹ ನೀಡಲಾಗಿದೆ.  ಭೌಗೋಳಿಕ ಸೂಚನೆ (ಜಿಐ) ಎನ್ನುವುದು ಒಂದು ನಿರ್ದಿಷ್ಟ ಭೌಗೋಳಿಕ ಮೂಲವನ್ನು ಹೊಂದಿರುವ ಮತ್ತು ಗುಣಗಳನ್ನು ಹೊಂದಿರುವ ಉತ್ಪನ್ನಗಳ ಮೇಲೆ ಬಳಸುವ ಚಿಹ್ನೆ. ಇದನ್ನು ಭೌಗೋಳಿಕ ಸೂಚನೆಗಳ ರಿಜಿಸ್ಟ್ರಾರ್ ಆಗಿರುವ ಪೇಟೆಂಟ್, ಡಿಸೈನ್ ಮತ್ತು ಟ್ರೇಡ್ ಮಾರ್ಕ್ಸ್ ನ ಕಂಟ್ರೋಲರ್ ಜನರಲ್ ನಿರ್ವಹಿಸುತ್ತಾರೆ.

    MORE
    GALLERIES

  • 910

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಮೆಹಂದಿ ಪೇಸ್ಟ್ ತಂಪಾಗಿಸುವ ಪರಿಣಾಮಕ್ಕೆ ಹೆಸರುವಾಸಿಯಾಗಿದ್ದು. ಇದನ್ನು ಸಾಂಪ್ರದಾಯಿಕ ಔಷಧದ ಭಾಗವಾಗಿ ತಲೆಗೆ ಹಚ್ಚಲಾಗುತ್ತದೆ. ಇದನ್ನು ಆಯುರ್ವೇದ ಔಷಧಗಳ ಸಿದ್ಧತೆಗಳಲ್ಲಿಯೂ ಬಳಸಲಾಗುತ್ತದೆ.

    MORE
    GALLERIES

  • 1010

    Sojat Mehendi: ಲಕ್ಷಗಟ್ಟಲೆ ಬೆಲೆಬಾಳುತ್ತೆ ಈ ಮೆಹೆಂದಿ, ಅದರಲ್ಲಿ ಅಂಥದ್ದೇನಿದೆ? ಕತ್ರಿನಾ ಮದ್ವೆಗೂ ಇದೇ ಬೇಕಂತೆ!

    ಸೋಜತ್ ಮೆಹಂದಿ ಬಾಲಿವುಡ್​ ಸೆಲೆಬ್ರಿಟಿಗಳ ಗಮನ ಸಹ ಸೆಳೆದಿದೆ. ಐಶ್ವರ್ಯ ರೈ, ಪ್ರಿಯಾಂಕಾ ಚೋಪ್ರಾ ಸಹ ತಮ್ಮ ಮದುವೆಗಳಲ್ಲಿ ಇದನ್ನೇ ಬಳಸಿದ್ದರು. ಈಗ ಕತ್ರೀನಾ  ಸಹ ತನ್ನ ಮದುವೆಗೆ ಇದನ್ನೇ ಬಳಸುತ್ತಿದ್ದಾರೆ.

    MORE
    GALLERIES