ಈ ಮಾತ್ರೆಯನ್ನು ಜನರ ಫೇವರೇಟ್ ‘ತಿಂಡಿ’ ಎಂದೂ ಈಗ ಲೇವಡಿ ಮಾಡುತ್ತಿದ್ದಾರೆ. ಡೋಲೋ 650 ಟ್ಯಾಬ್ಲೆಟ್ ಅನ್ನು ನೋವು ನಿವಾರಣೆ ಮತ್ತು ಜ್ವರದಿಂದ ಮುಕ್ತಿ ಪಡೆಯಲು ಬಳಸಲಾಗುತ್ತದೆ. ತಲೆನೋವು, ದೇಹದ ನೋವು, ಹಲ್ಲುನೋವು ಮತ್ತು ನೆಗಡಿಯಂತಹ ಇತರ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ನೋವು ಮತ್ತು ಜ್ವರವನ್ನು ಉಂಟುಮಾಡುವ ಕೆಲವು ರಾಸಾಯನಿಕಗಳ ಬಿಡುಗಡೆಯನ್ನು ತಡೆಯುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ.