Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

ಮನೆಯಲ್ಲಿ ನಾವು ಹಲಸಿನ ಹಣ್ಣನ್ನು ಕತ್ತರಿಸುವಾಗ ಅದರ ಅಂಟು ಕೈಗೆ ಅಂಟಿಕೊಳ್ಳುತ್ತದೆ. ಇದು ಕೆಲವೊಮ್ಮೆ ಹಲವು ದಿನಗಳವರೆಗೆ ಹಾಗೇ ಇರುತ್ತೆ. ಆದ್ರೆ ಹಲಸಿನ ಹಣ್ಣನ್ನು ಕತ್ತರಿಸುವಾಗ ಅಂಟಿಕೊಳ್ಳದಂತೆ ಮಾಡಲು ಕೆಲವೊಂದು ಟಿಪ್ಸ್​ಗಳು ಇಲ್ಲಿವೆ ನೋಡಿ.

First published:

  • 18

    Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

    ಹಲಸಿನ ಹಣ್ಣು ಎಂದಾಗ ಅದರ ಸಿಹಿಗೆ ಬಾಯಲ್ಲಿ ನೀರು ಬರುತ್ತೆ. ಆದ್ರೆ ಹಲಸಿನ ಹಣ್ಣು ತಿನ್ನಲು ಬಲು ಸುಲಭ. ಆದ್ರೆ ಅದನ್ನು ಕತ್ತರಿಸೋದೆ ಒಂದು ದೊಡ್ಡ ಕೆಲಸ ಅನ್ನೋರು ತುಂಬಾ ಜನ ಇದ್ದಾರೆ.

    MORE
    GALLERIES

  • 28

    Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

    ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಹಲಸಿನ ಹಣ್ಣನ್ನು ಹಣ್ಣಾಗದೇ ಇದ್ದಾಗ ಕತ್ತರಿಸಿದರೆ ಅದನ್ನು ತರಕಾರಿಯಾಗಿ ಪದಾರ್ಥ ಮಾಡ್ಬಹುದು. ಅದೇ ಸಮಯದಲ್ಲಿ, ಅದು ಹಣ್ಣಾಗಿದ್ದರೆ ಅದನ್ನು ಹಣ್ಣಾಗಿ ತಿನ್ನಬಹುದು. ಇನ್ನೂ ಕೆಲವರಿಗೆ ಈ ಹಲಸಿನ ಹಣ್ಣನ್ನು ಕತ್ತರಿಸೋದು ಹೇಗೆ ಎಂಬುದೇ ತಿಳಿದಿಲ್ಲ.

    MORE
    GALLERIES

  • 38

    Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

    ಮನೆಯಲ್ಲಿ ಹಲಸು ಕತ್ತರಿಸಿ ತಿನ್ನಿ: ಹಲವರು ಮಾರುಕಟ್ಟೆಯಿಂದ ಕತ್ತರಿಸಿದ ಹಲಸು ಖರೀದಿಸಿ ಮನೆಗೆ ತರುತ್ತಾರೆ. ಅನೇಕ ಬೀದಿ ಅಂಗಡಿಗಳು ಪಾಲಿಥಿನ್‌ನಲ್ಲಿ ಕತ್ತರಿಸಿದ ಹಲಸಿನ ಹಣ್ಣನ್ನು ಮಾರಾಟ ಮಾಡುತ್ತವೆ. ಇಂತಹ ಹಲಸಿನ ಹಣ್ಣಿನಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುತ್ತವೆ. ಮನೆಗೆ ತಂದು ಅವುಗಳನ್ನು ತಿನ್ನುವುದರಿಂದ ಹೊಟ್ಟೆನೋವು ಅಥವಾ ಇತರ ಕಾಯಿಲೆಗಳು ಉಂಟಾಗಬಹುದು. ಹಾಗಾಗಿ ಮನೆಗೆ ತಂದು ಕತ್ತರಿಸಿ ತಿನ್ನುವುದು ಉತ್ತಮ.

    MORE
    GALLERIES

  • 48

    Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

    ಮನೆಯಲ್ಲಿ ನಾವು ಹಲಸಿನ ಹಣ್ಣನ್ನು ಕತ್ತರಿಸುವಾಗ ಅದರ ಅಂಟು ಕೈಗೆ ಅಂಟಿಕೊಳ್ಳುತ್ತದೆ. ಇದು ಕೆಲವೊಮ್ಮೆ ಹಲವು ದಿನಗಳವರೆಗೆ ಹಾಗೇ ಇರುತ್ತೆ. ಆದ್ರೆ ಹಲಸಿನ ಹಣ್ಣನ್ನು ಕತ್ತರಿಸುವಾಗ ಅಂಟಿಕೊಳ್ಳದಂತೆ ಮಾಡಲು ಕೆಲವೊಂದು ಟಿಪ್ಸ್​ಗಳು ಇಲ್ಲಿವೆ ನೋಡಿ.

    MORE
    GALLERIES

  • 58

    Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

    ಮೊದಲು, ಹಲಸಿನ ಹಣ್ಣಿನ ಒಳಗಿರುವ ಜಿಗುಟಾದ ಅಂಟು ನೆಲಕ್ಕೆ ಅಂಟಿಕೊಳ್ಳದಂತೆ ತಡೆಯಲು ದೊಡ್ಡದಾದ ಪ್ಲಾಸ್ಟಿಕ್ ಅಥವಾ ಕಾಗದವನ್ನು ಹರಡಿ. ನಂತರ ಒಂದು ಪಾತ್ರೆಗೆ ಸ್ವಲ್ಪ ತೆಂಗಿನ ಎಣ್ಣೆಯನ್ನು ಸುರಿಯಿರಿ. ಎರಡು ಒಳ್ಳೆಯ ಚೂಪಾದ ಚಾಕುಗಳನ್ನು ತೆಗೆದುಕೊಳ್ಳಿ. ಎರಡು ದೊಡ್ಡ ಚಾಕುಗಳು ಮತ್ತು ಒಂದು ಸಣ್ಣ ಚಾಕು ಇದ್ದರೆ ಉತ್ತಮ.

    MORE
    GALLERIES

  • 68

    Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

    ಈಗ ಚಾಕು ಮತ್ತು ನಿಮ್ಮ ಕೈಗಳಿಗೆ ಎಣ್ಣೆ ಹಾಕಿ. ನಂತರ ಹಲಸಿನ ಹಣ್ಣನ್ನು ಕಾಗದದ ಮೇಲೆ ಇಡಿ ಮತ್ತು ಅದನ್ನು ಒಂದು ಕೈಯಿಂದ ಹಿಡಿದುಕೊಳ್ಳಿ ಮತ್ತು ಇನ್ನೊಂದು ಕೈಯಿಂದ ಚಾಕುವಿನ ಸಹಾಯದಿಂದ ಹಣ್ಣಿನ ಮಧ್ಯದಲ್ಲಿ ಉದ್ದವಾಗಿ ಸೀಳು ಮಾಡಿ. ನಿಮ್ಮ ಕೈ ಮತ್ತು ಚಾಕುವಿನ ಎಣ್ಣೆಯು ನಿಮ್ಮ ಕೈಯನ್ನು ಜಾರುವಂತೆ ಮಾಡುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಕತ್ತರಿಸಿ. ಇಲ್ಲದಿದ್ದರೆ ಇನ್ನೊಬ್ಬ ವ್ಯಕ್ತಿಯಲ್ಲಿ ಹಣ್ಣನ್ನು ಹಿಡಿಯಲು ಸಹಾಯವನ್ನು ಪಡೆಯಬಹುದು.

    MORE
    GALLERIES

  • 78

    Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

    ಎರಡೂ ಬದಿಗಳನ್ನು ಕತ್ತರಿಸಿದ ನಂತರ, ಎರಡೂ ಬದಿಗಳನ್ನು ನಿಮ್ಮ ಕೈಗಳಿಂದ ಹಿಡಿದುಕೊಳ್ಳಿ ಮತ್ತು ಅವುಗಳನ್ನು ಬೇರ್ಪಡಿಸಿ. ನಂತರ ಹಲಸಿನ ಹಣ್ಣಿನಿಂದ ಹೊರಬರುವ ಬಿಳಿ ಅಂಟನ್ನು ಟಿಶ್ಯೂ ಪೇಪರ್‌ನಿಂದ ತೆಗೆದುಹಾಕಿ. ಹಾಗೆಯೇ ಆಗಾಗ ನಿಮ್ಮ ಕೈಗಳಿಗೆ ಮತ್ತು ಚಾಕುವಿಗೆ ಎಣ್ಣೆ ಹಚ್ಚುತ್ತಿರಿ.

    MORE
    GALLERIES

  • 88

    Jackfruits Cutting Tips: ಹಲಸಿನ ಹಣ್ಣನ್ನು ಅಂಟಿಕೊಳ್ಳದ ಹಾಗೆ ಕತ್ತರಿಸಲು ಇಲ್ಲಿದೆ ಟಿಪ್ಸ್​

    ನಂತರ ಕತ್ತರಿಸಲಾದ ಹಲಸಿನ ಹಣ್ಣಿನ ಮೇಲಿರುವ ನಾರುಗಳನ್ನು ಸಣ್ಣ ಚಾಕುವಿನಿಂದ ಎಣ್ಣೆ ಹಾಕಿ ಅದನ್ನು ಕತ್ತರಿಸಿ. ನಂತರ ಅದರಲ್ಲಿರುವ ಹಣ್ಣನ್ನು ತೆಗೆಯಿರಿ. ಈ ರೀತಿ ನೀವು ಹಲಸಿನ ಹಣ್ಣನ್ನು ಸ್ವಲ್ಪವೂ ಅಂಟಿಕೊಳ್ಳದಂತೆ ಕತ್ತರಿಸಬಹುದಾಗಿದೆ.

    MORE
    GALLERIES