ದೇಹದ ತೂಕ ಇಳಿಸಿಕೊಳ್ಬೇಕು ಅಂದ್ರೆ ಮೊದಲು ನಿಮ್ಮ ಜೀವನಶೈಲಿ, ಆಹಾರ ಕ್ರಮದಲ್ಲಿ ಬದಲಾವಣೆ ಮಾಡುವುದು ಬಹಳ ಅಗತ್ಯ. ಊಟದಲ್ಲಿ ಕಾರ್ಬೊಹೈಡ್ರೇಟ್ ಪ್ರಮಾಣ ಕಡಿಮೆ ಮಾಡಿ ಪ್ರೋಟಿನ್ ಹೆಚ್ಚಳ ಮಾಡುವುದು ಇದರ ಮೊದಲ ಹಂತ. ಪ್ರೋಟಿನ್ ಅಂದ್ಕೂಡ್ಲೇ ಮಾಂಸ ಮತ್ತು ಮೊಟ್ಟೆ ಎಂದೇ ಎಲ್ಲರೂ ಮೊದಲು ಭಾವಿಸ್ತಾರೆ. ಆದ್ರೆ ಸಸ್ಯಾಹಾರಿ ಆಹಾರದಲ್ಲೂ ಪ್ರೋಟಿನ್ ಹೇರಳವಾಗಿರುವ ಅನೇಕ ಪದಾರ್ಥಗಳಿವೆ. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ
ಚಿಯಾ ಸೀಡ್ಸ್ ಅನೇಕ ವರ್ಷಗಳಿಂದ ಬಳಕೆಯಲ್ಲಿ ಇದ್ದೇ ಇದೆ. ಆದರೆ ಇತ್ತೀಚೆಗೆ ಅದು ಫೇಮಸ್ ಆಗಿದೆ ಅಷ್ಟೇ. ಜನ ಈಗೀಗ ಅದರ ಬಗ್ಗೆ ಗಮನ ಹರಿಸುತ್ತಿದ್ದಾರೆ. ಚಿಯಾ ಸೀಡ್ಸ್ ತನ್ನೊಳಗೆ ಹೇರಳವಾಗಿ ಪ್ರೋಟಿನ್ ಹೊಂದಿದೆ. ನೆನೆಸಿದ ಚಿಯಾ ಬೀಜಗಳನ್ನು ನೀರಿನ ಸಮೇತ ಕುಡಿಯುವುದರಿಂದ ಬೇಗನೇ ತೂಕ ಇಳಿಸಬಹುದು ಎನ್ನಲಾಗಿದೆ. ಸ್ವಲ್ಪ ಜೇನುತುಪ್ಪ ಸೇರಿಸಿದರೆ ಇನ್ನೂ ಒಳ್ಳೆಯದಂತೆ.