ಆತ್ಮಗೌರವ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಇರಬೇಕಾದ ಒಂದು ಅತ್ಯಮೂಲ್ಯ ಗುಣ. ಇದು ನಮ್ಮನ್ನು ನಾವು ಹೇಗೆ ಎಂದು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿ ತನ್ನ ಬಗ್ಗೆ ಎಷ್ಟರ ಮಟ್ಟಿಗೆ ಅರಿತುಕೊಂಡಿದ್ದಾನೆ ಎಂಬುದರ ನಂಬಿಕೆ ಕೂಡ ಆಗಿದೆ. ಆತ್ಮಗೌರವ ಹೊಂದಿರುವ ವ್ಯಕ್ತಿಗೆ ತನ್ನ ಗುಣ, ಸಾಮರ್ಥ್ಯದ ಬಗ್ಗೆ ಹೆಮ್ಮೆ ಇರುತ್ತದೆ. ಹಾಗಾಗಿ ತನ್ನ ಮಿತಿಗಳ ಬಗ್ಗೆ ಆಳವಾದ ಜ್ಞಾನವನ್ನು ಪಡೆದಿರುತ್ತಾನೆ.
ನಿಮ್ಮ ಸಾಮರ್ಥ್ಯದ ಜೊತೆಗೆ ನಿಮ್ಮ ಅಸಾಮರ್ಥ್ಯದ ಬಗ್ಗೆಯೂ ಅರಿವಿರಲಿ: ಸ್ವಯಂ ಜಾಗೃತಿ ಆತ್ಮಗೌರವದ ಮೊದಲ ಹೆಜ್ಜೆ ಅಥವಾ ಆಧಾರ ಸ್ತಂಭ. ಏಕೆಂದರೆ ನಮ್ಮ ಸಾಮರ್ಥ್ಯ ಏನು ದೌರ್ಬಲ್ಯಗಳು ಏನು ಅರಿತುಕೊಳ್ಳಲು ಸಹಾಯ ಮಾಡುವುದರ ಜೊತೆಗೆ ಆತ್ಮಾವಲೋಕನ ಹಾಗೂ ಪ್ರಾಮಾಣಿಕತೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುತ್ತದೆ. ನಿಮ್ಮ ಸಾಮರ್ಥ್ಯ ಏನು ಎಂದು ಅರಿತು ಹತೋಟಿಯಲ್ಲಿಟ್ಟುಕೊಳ್ಳಲು ಮತ್ತು ನಮ್ಮ ದೌರ್ಬಲ್ಯಗಳನ್ನು ಮತ್ತಷ್ಟು ಹೆಚ್ಚಾಗದಂತೆ ನೋಡಿಕೊಳ್ಳುವುದರ ಜೊತೆಗೆ ಹೆಚ್ಚಾಗದಂತೆ ಸಂಭಾಳಿಸಿಕೊಳ್ಳಲು ಸಹ ಇದು ಮುಖ್ಯವಾಗಿದೆ.
ನೀವು ಹೇಗಿದ್ದೀರೋ ಹಾಗೆಯೇ ಒಪ್ಪಿಕೊಳ್ಳಿ ಆದರೆ ನಿಮ್ಮ ಬೆಳವಣಿಗೆ ಬಗ್ಗೆ ನಂಬಿಕೆಯಿರಲಿ: ಸ್ವಯಂ ಸ್ವೀಕಾರ ಅಂದರೆ ನಾವು ಹೇಗಿದ್ದೀವೋ ಹಾಗೆ ಒಪ್ಪಿಕೊಳ್ಳುವುದು ಎರಡನೇ ಆಧಾರ ಸ್ತಂಭ. ಹೌದು ಆದಷ್ಟು ಮಂದಿ ತಮ್ಮನ್ನು ತಾವು ಒಪ್ಪಿಕೊಳ್ಳುವುದರಲ್ಲಿ ವಿಫಲರಾಗುತ್ತಾರೆ. ಇದನ್ನು ಒಪ್ಪಿಕೊಂಡಲ್ಲಿ ಇದು ಅವರ ಗುಣಗಳು, ಉತ್ತಮ ಆತ್ಮ ಗೌರವಕ್ಕೆ ಅಡಿಪಾಯ ಹಾಕುತ್ತದೆ. ಇದರಿಂದ ಆಂತರಿಕವಾಗಿ ಶಾಂತಿ, ನೆಮ್ಮದಿ ಮತ್ತು ಸಂತೃಪ್ತಿ ಭಾವವನ್ನು ಮೂಡಿಸುತ್ತದೆ.
ಸಣ್ಣದಾಗಿ ಪ್ರಾರಂಭಿಸಿ ಮತ್ತು ಆರಂಭಿಕ ಯಶಸ್ಸು ಸಾಧಿಸಿ: ಸಣ್ಣ ಸಣ್ಣ ಗೆಲುವಿನ ಶಕ್ತಿಯನ್ನು ಒಳಗೊಂಡಿರುತ್ತದೆ ಈ ಮೂರನೇ ಆಧಾರಸ್ತಂಭ. ಯಾವುದೇ ಕೆಲಸವನ್ನು ಮೊದಲು ನಾವು ಸಣ್ಣದಾಗಿ ಆರಂಭಿಸಬೇಕು. ವ್ಯವಹಾರವಾಗಿರಲಿ, ಯಾವುದೇ ಕೆಲಸವಾಗಿರಲಿ ಇದನ್ನು ಮೊದಲು ಸಣ್ಣದಾಗಿ ಪ್ರಾರಂಭಿಸಿ ಯಶಸ್ಸನ್ನು ಪಡೆದ ನಂತರ ದೊಡ್ಡ ಯೋಜನೆಗಳತ್ತ ಗಮನಹರಿಸಬೇಕು. ಸಣ್ಣ ಯಶಸ್ಸು ಹಾಗೂ ಗುರಿಗಳ ನಿರ್ವಹಣೆ ಇದು ಆತ್ಮವಿಶ್ವಾಸ ಮತ್ತು ಧನಾತ್ಮಕ ಅಂಶಗಳನ್ನು ಬೆಳೆಸುತ್ತದೆ.
ಭವಿಷ್ಯವನ್ನು ಊಹಿಸಿ: ಇದು ನಮ್ಮ ಮನಸ್ಸಿನಲ್ಲಿ ನಮ್ಮ ಭವಿಷ್ಯವನ್ನು ಊಹಿಸಿಕೊಳ್ಳುವುದಾಗಿದೆ. ನಮ್ಮ ಮನಸ್ಸಿನಲ್ಲಿ ಭವಿಷ್ಯದ ಬಗ್ಗೆ ಚಿತ್ರೀಕರಣಗೊಳಿಸುವುದರಿಂದ ಆತ್ಮವಿಶ್ವಾಸ ಹೆಚ್ಚಿಸುತ್ತದೆ, ಕಾರ್ಯಕ್ಷಮತೆಯನ್ನು ರೂಪಿಸುತ್ತದೆ. ನಿಮ್ಮ ಮುಂದಿನ ಭವಿಷ್ಯದ ಬಗ್ಗೆ ಆಲೋಚಿಸುತ್ತಿದ್ದ ಹಾಗೆಯೇ ನಿಮ್ಮ ಅರ್ಧ ಯಶಸ್ಸು ಸಾಧಿಸಿದಂತೆಯೇ ಆಗುತ್ತದೆ. ಇದರಿಂದ ಗುರಿಗಳ ಮೇಲೆ ಬದ್ಧತೆಯನ್ನು ಸಾಧಿಸುವುದರ ಜೊತೆಗೆ ನಿಮ್ಮ ಸಾಧನಾ ಸಾಮರ್ಥ್ಯದ ಮೇಲೆ ನಂಬಿಕೆ ಹೆಚ್ಚಳಕ್ಕೆ ಕಾರಣವಾಗುತ್ತದೆ.
ನಿಮ್ಮ ಮೇಲೆ ಮತ್ತು ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಬೆಳೆಸಿಕೊಳ್ಳಿ: ಇದು ಯಶಸ್ವಿಯಾಗುವ ನಿಮ್ಮ ಸಾಮರ್ಥ್ಯದ ಮೇಲಿನ ನಂಬಿಕೆಯಾಗಿದೆ. ಈ ನಂಬಿಕೆಯು ನಿಮ್ಮ ಆಯ್ಕೆ, ಪ್ರಯತ್ನ, ನಿರಂತರತೆಯ ಮೇಲೆ ಪ್ರಭಾವ ಬೀರುವುದಲ್ಲದೇ ಆತ್ಮಗೌರವವನ್ನು ಬೆಳೆಸಿಕೊಳ್ಳಲು ನಿರ್ಣಾಯಕವಾಗಿದೆ. ಪಾಂಡಿತ್ಯದ ಅನುಭವಗಳು, ಭಾವನೆಗಳ ಕಲ್ಪನೆಯ ಅನುಭವಗಳು, ಸಕಾರಾತ್ಮಕ ಸ್ವಯಂ ಚರ್ಚೆ ಮೂಲಕ ಸ್ವಯಂ ಪರಿಣಾಮಕಾರಿತ್ವವನ್ನು ರೂಪಿಸಿಕೊಳ್ಳಿ. ನಿಮ್ಮ ಮೇಲಿನ ನಂಬಿಕೆಯು ಎಲ್ಲಾ ಸಾಧನೆಗಳಿಗೆ ಮೂಲಾಧಾರ ಎಂಬುದನ್ನು ಮಾತ್ರ ಮರೆಯಬಾರದು.
ವೈಯಕ್ತಿಕ ತತ್ವ- ಸಿದ್ಧಾಂತಗಳು ಮತ್ತು ವರ್ತನೆಗಳು ಉನ್ನತ ಮಟ್ಟದಾಗಿರಲಿ: ಇದು ನಿಮ್ಮ ಮೌಲ್ಯಗಳು ಮತ್ತು ನಂಬಿಕೆಗಳನ್ನು ಪ್ರತಿಬಿಂಬಿಸುತ್ತದೆ. ಅಲ್ಲದೇ ನಿಮ್ಮನ್ನು ನೀವು ಹೇಗೆ ಗ್ರಹಿಸಿಕೊಂಡಿದ್ದೀರಿ, ಭಾವಿಸಿಕೊಂಡಿದ್ದೀರಿ ಎಂಬುದರ ಮೇಲೂ ಪ್ರಭಾವ ಬೀರುತ್ತದೆ. ಉನ್ನತ ಮಟ್ಟದ ನೈತಿಕತೆಯು ಸ್ವಾಭಿಮಾನ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವುದಲ್ಲದೇ ನಮ್ಮನ್ನು ಮತ್ತಷ್ಟು ಪರಿಪೂರ್ಣಗೊಳಿಸುತ್ತದೆ. ಇದು ನಿಮ್ಮ ಆಯ್ಕೆಯನ್ನು ನಿಮ್ಮ ತತ್ವ ಸಿದ್ಧಾಂತಗಳಿಗೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಲು ನಮ್ಮನ್ನು ತಯಾರು ಮಾಡುತ್ತದೆ.