ಫಿಟ್ನೆಸ್ ವಾಚ್ ಕಟ್ಟುವ ಮುನ್ನ ಎಚ್ಚರ, ನಿಮ್ಮ ಸಮಸ್ಯೆ ಮತ್ತಷ್ಟು ಹೆಚ್ಚಾದೀತು!
ನೀವು ನಿತ್ಯ ಎಷ್ಟು ದೂರ ರನ್ ಮಾಡಿದ್ದೀರಿ? ನಿಮ್ಮ ಹಾರ್ಟ್ ಬೀಟ್ ಎಷ್ಟು? ಎಷ್ಟು ಕ್ಯಾಲರಿ ಬರ್ನ್ ಮಾಡಿದ್ದೀರಿ ಎಂಬಿತ್ಯಾದಿ ಮಾಹಿತಿಗಳನ್ನು ವಾಚ್ ನಲ್ಲೇ ವೀಕ್ಷಿಸಬಹುದಾಗಿದೆ. ಆದರೆ, ಈ ವಾಚ್ ನಿಮಗೆ ತೊಂದರೆ ಉಂಟು ಮಾಡಬಹುದು.
ತಂತ್ರಜ್ಞಾನ ಮುಂದುವರಿದಂತೆ ನಮ್ಮ ಆರೋಗ್ಯವನ್ನು ಕಾಪಾಡಲು ನಾನಾ ರೀತಿಯ ಯಂತ್ರಗಳನ್ನು ಕಂಡು ಹಿಡಿಯಲಾಗುತ್ತಿದೆ. ಇದರಲ್ಲಿ ಫಿಟ್ ನೆಸ್ ವಾಚ್ ಕೂಡ ಒಂದು.
2/ 9
ನೀವು ನಿತ್ಯ ಎಷ್ಟು ದೂರ ರನ್ ಮಾಡಿದ್ದೀರಿ? ನಿಮ್ಮ ಹಾರ್ಟ್ ಬೀಟ್ ಎಷ್ಟು? ಎಷ್ಟು ಕ್ಯಾಲರಿ ಬರ್ನ್ ಮಾಡಿದ್ದೀರಿ ಎಂಬಿತ್ಯಾದಿ ಮಾಹಿತಿಗಳನ್ನು ವಾಚ್ ನಲ್ಲೇ ವೀಕ್ಷಿಸಬಹುದಾಗಿದೆ.
3/ 9
ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಈ ವಾಚ್ ತುಂಬಾನೇ ಮುಖ್ಯ ಎಂಬುದು ಅನೇಕರ ನಂಬಿಕೆ. ಆದರೆ, ಇದು ಅಪಾಯಕಾರಿ ಕೂಡ ಆಗಬಹುದು ಎಂದು ಅಧ್ಯಯನವೊಂದು ಎಚ್ಚರಿಸಿದೆ.
4/ 9
ಹೃದಯ ಸಂಬಂಧಿ ಕಾಯಿಲೆ ಹೊಂದಿರುವವರು ಈ ವಾಚ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ಸಂಶೋಧಕರು ಕಂಡು ಹಿಡಿದ ಹೊಸ ವಿಚಾರ.
5/ 9
ಹೃದಯ ಸಂಬಂಧಿ ಕಾಯಿಲೆ ಹೊಂದಿರುವ ವ್ಯಕ್ತಿ ನಿತ್ಯ ಇಷ್ಟು ವಾಕ್ ಮಾಡಬೇಕು, ಇಷ್ಟು ಕ್ಯಾಲರಿ ಶಕ್ತಿಯನ್ನು ಬರ್ನ್ ಮಾಡಬೇಕು ಎನ್ನುವ ಉದ್ದೇಶ ಇಟ್ಟುಕೊಂಡಿರುತ್ತಾನೆ.
6/ 9
ಆದರೆ, ಕೆಲವೊಮ್ಮೆ ಇದು ಸಾಧ್ಯವಾಗುವುದೇ ಇಲ್ಲ. ಈ ವೇಳೆ ಫಿಟ್ ನೆಸ್ ವಾಚ್ ನಲ್ಲಿ ಪದೇ ಪದೇ ನೋಟಿಫಿಕೇಷನ್ ಗಳು ಬರುತ್ತಿರುತ್ತವೆ. ಇದು ವ್ಯಕ್ತಿಯಲ್ಲಿ ಒಂದು ರೀತಿಯ ಒತ್ತಡವನ್ನು ಸೃಷ್ಟಿ ಮಾಡುತ್ತದೆ.
7/ 9
ಇದರಿಂದ ವ್ಯಕ್ತಿಯಲ್ಲಿ ರಕ್ತದೊತ್ತಡ ಕಡಿಮೆ ಆಗುತ್ತದೆ. ಜೊತೆಗೆ ವ್ಯಕ್ತಿಯಲ್ಲಿ ನಿದ್ರೆ ಕೂಡ ಕಡಿಮೆ ಆಗುತ್ತದೆ. ಇದು ಆತನ ಆರೋಗ್ಯದ ಮೇಲೆ ನೇರ ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎನ್ನಲಾಗಿದೆ.
8/ 9
ಹೀಗಾಗಿ, ಫಿಟ್ ನೆಸ್ ವಾಚ್ ಕೆಲ ಸಂದರ್ಭದಲ್ಲಿ ನಮಗೆ ಗೊತ್ತಿಲ್ಲದೆ ತೊಂದರೆಯನ್ನೂ ಉಂಟು ಮಾಡಿ ಬಿಡುತ್ತವೆ ಎಂದು ಅಧ್ಯಯನ ಹೇಳಿದೆ.
9/ 9
ಹೃದಯ ಸಂಬಂಧಿ ಕಾಯಿಲೆ ಇದ್ದವರು ಸಾಮಾನ್ಯವಾಗಿ ಒತ್ತಡಕ್ಕೆ ಒಳಗಾಗಬಾರದು. ಹೀಗಾದರೆ, ಅವರಿಗೆ ಅಪಾಯ ಮತ್ತೂ ಹೆಚ್ಚು. ಈ ದೃಷ್ಟಿಯಿಂದ ಫಿಟ್ನೆಸ್ ವಾಚ್ ಒಳ್ಳೆಯದಲ್ಲ ಎನ್ನುತ್ತಾರೆ ಸಂಶೋಧಕರು.