Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಬಹಳಷ್ಟು ಸೆಲೆಬ್ರಿಟಿಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜನಸಾಮಾನ್ಯರು ಸಹ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇದಕ್ಕೆಲ್ಲಾ ನೀವು ತಿನ್ನುವ ಆಹಾರ ಪದ್ಧತಿಯೂ ಕಾರಣವಾಗಿದೆ.

First published:

  • 18

    Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

    ಇಂದಿನ ದಿನಗಳಲ್ಲಿ ಒಟ್ಟಾರೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಮುಖ್ಯವಾಗಿದೆ. ಹೃದಯದ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸುವುದು ತುಂಬಾ ಮುಖ್ಯ. ಹೃದಯದ ಆರೋಗ್ಯ ಮತ್ತು ಹೃದಯಾಘಾತದ ಬಗ್ಗೆ ಸರಿಯಾದ ಜ್ಞಾನ ಹೊಂದುವುದು ಮುಖ್ಯ.

    MORE
    GALLERIES

  • 28

    Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

    ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಮೊದಲು ಆಹಾರದ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ. ಹೃದಯದ ಆರೋಗ್ಯ ಹದಗೆಡಿಸುವ ಪದಾರ್ಥಗಳ ಬಗ್ಗೆ ಕಾಳಜಿ ವಹಿಸಿ.

    MORE
    GALLERIES

  • 38

    Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

    ಹೃದಯದ ಕೆಟ್ಟ ಆಹಾರಗಳ ಪಟ್ಟಿಯಲ್ಲಿ ಕೆಂಪು ಮಾಂಸ, ಮೊಟ್ಟೆಯ ಹಳದಿ ಭಾಗ, ತುಪ್ಪ, ಬೆಣ್ಣೆ ಸೇರಿವೆ. ಇದು ಹೃದ್ರೋಗ ಮತ್ತು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಈ ಆಹಾರಗಳು ನಿಜವಾಗಿಯೂ ಹೃದಯದ ಆರೋಗ್ಯಕ್ಕೆ ಅಪಾಯಕಾರಿಯೇ ಎಂದು ನೋಡೋಣ.

    MORE
    GALLERIES

  • 48

    Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

    ಹೃದಯದ ಆರೋಗ್ಯ ಕೆಡಿಸುವಲ್ಲಿ ಆಹಾರದ ಪಾತ್ರ ಹೆಚ್ಚು ಮಹತ್ವದ್ದಾಗಿದೆ ಅಂತಾರೆ ತಜ್ಞರು. ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಆಹಾರ ಪದ್ಧತಿಯು ಕಾರಣವಾಗಿದೆ. ಅದರಲ್ಲೂ ಆಹಾರದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುವ ಆಹಾರಗಳುನ್ನು ಅಧಿಕವಾಗಿ ಸೇರಿಸಿದರೆ ಇದು ಹೃದಯದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

    MORE
    GALLERIES

  • 58

    Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

    ಕೆಲವು ಹೃದಯ ತಜ್ಞರು ಹೆಲುವ ಪ್ರಕಾರ, ಮೊಟ್ಟೆಯ ಹಳದಿ ಲೋಳೆ ಮತ್ತು ಕೆಂಪು ಮಾಂಸವು ಹೃದಯಾಘಾತಕ್ಕೆ ಕಾರಣವಂತೆ. ಅತಿಯಾದ ಮೊಟ್ಟೆ ಸೇವನೆಯು ಅದರಲ್ಲೂ ಹಳದಿ ಭಾಗ ಸೇವಿಸಿದರೆ ಅದು ಹೃದಯ ಕಾಯಿಲೆ ಅಪಾಯ ಹೆಚ್ಚಿಸುತ್ತದೆ. ಮೊಟ್ಟೆ ಜೊತೆ ಅಧಿಕವಾಗಿ ಬೇಕನ್, ಸಾಸೇಜ್ ಮತ್ತು ಹ್ಯಾಮ್ ಸೇವನೆಯು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ.

    MORE
    GALLERIES

  • 68

    Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

    ನಿಯಮಿತವಾಗಿ ದಿನವೂ ಎರಡಕ್ಕಿಂತ ಹೆಚ್ಚು ಅಥವಾ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಮೊಟ್ಟೆ ತಿಂದರೆ ಹೃದಯಾಘಾತ, ಪಾರ್ಶ್ವವಾಯು ಹಾಗೂ ಇತರೆ ಕಾಯಿಲೆ ಉಂಟು ಮಾಡುತ್ತದೆ. ಮೊಟ್ಟೆಯ ಹಳದಿ ಭಾಗ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುತ್ತದೆ. ಹೃದ್ರೋಗದ ಅಪಾಯ ಹೆಚ್ಚುತ್ತದೆ.

    MORE
    GALLERIES

  • 78

    Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

    ದಿನವೂ ಅಥವಾ ಅತಿಯಾಗಿ ಕೆಂಪು ಮಾಂಸ ಸೇವಿಸಿದರೆ ಇದು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಇದು ಕರುಳಿನ ಬ್ಯಾಕ್ಟೀರಿಯಾ ಮತ್ತು ಕೆಟ್ಟ ಜೀರ್ಣಾಂಗ ವ್ಯವಸ್ಥೆಗೆ ಕಾರಣವಾಗುತ್ತದೆ. ಇದು ಹೃದ್ರೋಗದ ಅಪಾಯ ಹೆಚ್ಚಿಸುತ್ತದೆ. ಕೆಂಪು ಮಾಂಸದಲ್ಲಿ ಸ್ಯಾಚುರೇಟೆಡ್ ಕೊಬ್ಬು ಅಧಿಕವಾಗಿರುತ್ತದೆ. ಇದು ಅಪಧಮನಿಯ ಪ್ಲೇಕ್ ಅನ್ನು ಉಂಟುಮಾಡುತ್ತದೆ.

    MORE
    GALLERIES

  • 88

    Heart Problems: ಈ ಆಹಾರಗಳು ಹೃದಯದ ಆರೋಗ್ಯವನ್ನು ಕೆಡಿಸುತ್ತವೆ, ಎಚ್ಚರ!

    ಕೆಂಪು ಮಾಂಸದಲ್ಲಿ ಕಂಡು ಬರುವ ಕೋಲೀನ್ ಮತ್ತು ಕಾರ್ನಿಟೈನ್ ಪೋಷಕಾಂಶಗಳು ಗಟ್ಟಿಯಾದ ಅಪಧಮನಿಗೆ ಕಾರಣವಾಗುತ್ತದೆ. ಇದು ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಒಟ್ಟಾರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಹೃದಯಕ್ಕೆ ತೊಂದರೆದಾಯಕವಾಗಿದೆ.

    MORE
    GALLERIES