ಹಿಂದೆ, ಮಹಿಳೆಯರು ದೈಹಿಕ ಶ್ರಮದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದರು. ಹಾಗಾಗಿ ಹೆರಿಗೆ ಸುಲಭವಾಗುತ್ತಿತ್ತು. ಆದರೆ ಈಗ ದೈಹಿಕ ಕೆಲಸಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿಲ್ಲ. ಅದಕ್ಕಾಗಿ ವೈದ್ಯರು ಗರ್ಭಧಾರಣೆಯ ನಂತರ ವ್ಯಾಯಾಮವನ್ನು ಮಾಡಬೇಕು ಎಂದು ಸಲಹೆ ನೀಡುತ್ತಾರೆ. ಹೀಗಾಗಿ ವಾಕಿಂಗ್ ಮತ್ತು ವ್ಯಾಯಾಮವು ನಿಮ್ಮನ್ನು ಕ್ರಿಯಾಶೀಲವಾಗಿರಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಮಾರ್ಗವಾಗಿದೆ. ಇದರೊಂದಿಗೆ ಮಹಿಳೆಯರು ಬೆನ್ನು ನೋವು, ಪಾದದ ಊತ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಪಡೆಯಬಹುದು. ಹಾಗಾದರೆ ವಾಕಿಂಗ್ ಮತ್ತು ವ್ಯಾಯಾಮ ಮಾಡುವುದರಿಂದ ಆಗುವ ಕೆಲವು ಪ್ರಯೋಜನಗಳು ಯಾವುವು? ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ