ಬಂಗಾಳದಲ್ಲಷ್ಟೇ ಅಲ್ಲ, ಇಡೀ ಉತ್ತರ ಭಾರತದಲ್ಲಿ ಮಣ್ಣಿನ ಲೋಟದಲ್ಲಿ ಬಿಸಿಬಿಸಿ ಟೀ ಕುಡಿಯುವ ಟ್ರೆಂಡ್ ಇದೆ. ಬೀದಿ ಬದಿಯ ಅಂಗಡಿಗಳಲ್ಲಿ ಟೀ ಕುಡಿಯುವುದಕ್ಕಿಂತ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಮಣ್ಣಿನ ಲೋಟದಲ್ಲಿ ಚಹಾ ಕುಡಿಯಲು ಇಷ್ಟಪಡುತ್ತಾರೆ. ಆದರೆ ಇದರಿಂದ ಆರೋಗ್ಯಕ್ಕೆ ಪ್ರಯೋಜನವಿದ್ಯಾ? ಈ ಬಗ್ಗೆ ತಜ್ಞರು ಹೇಳುವುದೇನು? ಈ ಎಲ್ಲ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ನೋಡಿ.
ಹಾಲಿನಿಂದ ತಯಾರಿಸಿದ ಚಹಾವನ್ನು ಸೇವಿಸಿದ ನಂತರ ಅನೇಕ ಮಂದಿ ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುತ್ತಾರೆ. ಮಣ್ಣಿನಿಂದ ಮಾಡಿದ ಲೋಟಗಳು ಕ್ಷಾರೀಯವಾಗಿರುತ್ತವೆ. ಹಾಗಾಗಿ ಇದರಲ್ಲಿ ಟೀ ಕುಡಿಯುವುದರಿಂದ ಅಸಿಡಿಟಿ ಬರುವ ಸಾಧ್ಯತೆ ಹೆಚ್ಚಿಲ್ಲ. ಈ ಕಾರಣದಿಂದಾಗಿ, ಜೀರ್ಣಕಾರಿ ಸಮಸ್ಯೆಗಳಿರುವ ಜನರು ಸಾಮಾನ್ಯವಾಗಿ ಮಣ್ಣಿನ ಲೋಟಗಳಲ್ಲಿ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ.