ಕೂದಲು ಬೆಳವಣಿಗೆಗೆ ಮತ್ತು ಕೂದಲು ಉದುರುವಿಕೆ ತಡೆಗೆ ಮನೆಮದ್ದು ಮಾಡುವುದು ಸಾಕಷ್ಟು ಪೋಷಣೆ ನೀಡುತ್ತದೆ. ಕೂದಲು ಬೆಳೆಯಲು ನೈಸರ್ಗಿಕ ಮಾರ್ಗಗಳು ಹೀಗಿವೆ. ಮೊದಲನೇ ಮಾರ್ಗ ತೆಂಗಿನೆಣ್ಣೆಯಲ್ಲಿ ನಿಂಬೆರಸ ಬೆರೆಸಿ ಹಚ್ಚಿರಿ. ಒಂದು ಗಂಟೆ ನಂತರ ತಲೆಸ್ನಾನ ಮಾಡಿ. ಮೊಟ್ಟೆಗೆ ಎರಡು ಚಮಚ ಆಲಿವ್ ಎಣ್ಣೆ ಬೆರೆಸಿ ತಲೆಗೆ ಮಸಾಜ್ ಮಾಡಿ, ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ.