ತೆಂಗಿನಕಾಯಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣಾಂಶ, ಫಾಸ್ಪರಸ್ ಮತ್ತು ಖನಿಜಾಂಶ ಅಡಗಿದೆ. ಇದರಲ್ಲಿ ಆಲ್ಕಲೈನ್ ಎಣ್ಣೆಯೂ ಅಧಿಕ ಪ್ರಮಾಣದಲ್ಲಿರುತ್ತದೆ. ಇದರಿಂದ ದೇಹಕ್ಕೆ ಅವಶ್ಯಕವಾದ ಪೋಷಕಾಂಶವೂ ದೊರಕುತ್ತದೆ. ಮಲಗುವ ಮುನ್ನ ಹಸಿ ತೆಂಗಿನಕಾಯಿ ತಿನ್ನುವುದರಿಂದ ಹೃದಯದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದರಲ್ಲಿರುವ ಕೊಬ್ಬು ದೇಹದಲ್ಲಿನ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸುತ್ತದೆ.