ಕೋಪ ಬರುವುದು ಸಹಜ. ಆದರೆ ನಾವು ಅದನ್ನು ಸಮಾಧಾನದಿಂದ ನಿಭಾಯಿಸಬೇಕು. ಇಲ್ಲದಿದ್ದರೆ ನೀವು ಅನೇಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಸಾಮಾನ್ಯವಾಗಿ ನಾವು ಕೋಪಗೊಂಡಾಗ, ನಮ್ಮ ದೇಹದಲ್ಲಿ ಅಡ್ರಿನಾಲಿನ್ ಹೆಚ್ಚಾಗುತ್ತದೆ. ಇದರಿಂದ ನಮ್ಮ ಸ್ನಾಯುಗಳು ಬಿಗಿಯಾಗುವುದು, ಹೆಚ್ಚು ಬೆವರುವುದು, ಹೃದಯ ಬಡಿತ ಹೆಚ್ಚಾಗುವುದು, ರಕ್ತದೊತ್ತಡ ಹೆಚ್ಚಾಗುವುದು ಇತ್ಯಾದಿಗಳು ಉಂಟಾಗುತ್ತದೆ.
ಡಾ. ನಿಕೋಲ್ ಲೆಪೆರಾ ಪ್ರಕಾರ, ಈ ರೀತಿಯ ಕೋಪವು ನಿಮ್ಮ ಮೆದುಳನ್ನು ಹೆಚ್ಚು ದುರ್ಬಲಗೊಳಿಸುತ್ತದೆ. ಆದ್ದರಿಂದ ನಿಮ್ಮ ಮೆದುಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ನಿಮ್ಮ ಕರ್ತವ್ಯ. ಮೊದಲು ನಿಮಗೆ ಏಕೆ ಕೋಪ ಬಂದಿದೆ ಎಂಬುವುದನ್ನು ತಿಳಿದುಕೊಳ್ಳಬೇಕು. ಅನಗತ್ಯವಾದ ವಿಚಾರಗಳ ಬಗ್ಗೆ ಚಿಂತಿಸಬೇಡಿ. ಈ ರೀತಿ ಯೋಚನೆಗಳನ್ನು ಮಾಡುವುದರಿಂದ ನಿಮ್ಮ ಎದುರುಗಡೆ ಇರುವವರಿಗೂ ಕೋಪ ಬರುವುದಿಲ್ಲ. ಈ ಸಮಸ್ಯೆಗಳಿಂದ ನೀವು ಪಾರಾಗಬಹುದು.
ಕೋಪ ನಿರ್ವಹಣೆ ವ್ಯಾಯಾಮಗಳು
ಗ್ರೌಂಡಿಂಗ್ ವ್ಯಾಯಾಮಗಳು: ನೀವು ತುಂಬಾ ಕೋಪ ಬರುತ್ತದೆ ಅಂತ ಅನಿಸಿದರೆ, ಮನಸ್ಸನ್ನು ಶಾಂತವಾಗಿರಿಸಿ. 5-4-3-2-1 ಅಂತ ನಿಮ್ಮ ಗಮನವನ್ನು ಬೇರೆಡೆಗೆ ಸೆಳೆಯಲು, ನಿಮ್ಮ ಸುತ್ತಲಿನ 5 ವಸ್ತುಗಳನ್ನು ಸ್ಪರ್ಶಿಸಲು ಮತ್ತು ನೋಡಲು ಸಹಾಯ ಮಾಡಲು ನೀವು ಗ್ರೌಂಡಿಂಗ್ ವ್ಯಾಯಾಮಗಳನ್ನು ಸಹ ಮಾಡಬೇಕು. ಅದು ಟೇಬಲ್, ಕುರ್ಚಿ ಇತ್ಯಾದಿ ಯಾವುದಾದರೂ ಆಗಿರಬಹುದು. ನಿಮ್ಮ ಹತ್ತಿರವಿರುವ ವಿಷಯಗಳನ್ನು ಕೇಳುವುದು ಮತ್ತು ಹತ್ತಿರದ ಜನರೊಂದಿಗೆ ಮಾತನಾಡುವುದು ನಿಮ್ಮ ಒತ್ತಡ ಮತ್ತು ಕೋಪವನ್ನು ಕಡಿಮೆ ಮಾಡುತ್ತದೆ.