ಅಲರ್ಜಿಗಳು: WebMDಯಲ್ಲಿ ಪ್ರಕಟವಾದ ಸುದ್ದಿ ಲೇಖನದ ಪ್ರಕಾರ, ಪಪ್ಪಾಯಿ ತಿನ್ನುವ ಕೆಲವು ಮಂದಿಗೆ ಅಲರ್ಜಿ ಉಂಟಾಗಬಹುದು. ಇದು ಊತ, ತಲೆತಿರುಗುವಿಕೆ, ತಲೆನೋವು, ಚರ್ಮದ ದದ್ದು ಮುಂತಾದ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಹಾಗಾಗಿ ಪಪ್ಪಾಯಿ ತಿಂದ ನಂತರ ನಿಮಗೆ ವಾಕರಿಕೆ ಅಥವಾ ತಲೆಸುತ್ತು ಬಂದರೆ ಪಪ್ಪಾಯಿ ತಿನ್ನುವುದನ್ನು ನಿಲ್ಲಿಸಿ. ಆದರೆ ಈ ರೀತಿ ಎಲ್ಲರಿಗೂ ಆಗುವುದಿಲ್ಲ.
ಗರ್ಭಾವಸ್ಥೆ: ಗರ್ಭಾವಸ್ಥೆಯಲ್ಲಿ ಪಪ್ಪಾಯಿಯನ್ನು ಸೇವಿಸಬಾರದು. ಹಸಿ ಪಪ್ಪಾಯಿಯಲ್ಲಿ ಲ್ಯಾಟೆಕ್ಸ್ ಅಧಿಕವಾಗಿದ್ದು ಗರ್ಭಾಶಯದ ಗೋಡೆಯಲ್ಲಿ ಸಂಕೋಚನವನ್ನು ಹೆಚ್ಚಿಸುತ್ತದೆ. ಪಪ್ಪಾಯಿಯಲ್ಲಿರುವ ಪಪೈನ್ ದೇಹದಲ್ಲಿನ ಜೀವಕೋಶ ಪೊರೆಗಳನ್ನು ಹಾನಿಗೊಳಿಸುತ್ತದೆ. ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಜೀವಕೋಶ ಪೊರೆಗಳು ಬಹಳ ಮುಖ್ಯ. ಈ ಕಾರಣದಿಂದಾಗಿ ಗರ್ಭಿಣಿಯರು ಹಸಿ ಪಪ್ಪಾಯಿಯನ್ನು ತಿನ್ನಬಾರದು.