Sara Ali Khan Fitness Secret: ನೀವೂ ಈ ವ್ಯಾಯಾಮ ಮಾಡಿ ಬಳುಕುವ ಬಳ್ಳಿಯಂತಹ ದೇಹ ನಿಮ್ಮದಾಗಿಸಿಕೊಳ್ಳಿ
ಸಿನಿರಂಗಕ್ಕೆ ಕಾಲಿಡುವ ಮುನ್ನವೇ ಸಾರಾ ಅಲಿ ಖಾನ್ (Sara Ali Khan) ತಮ್ಮ ದೇಹದ ತೂಕ ಇಳಿಸಿಕೊಳ್ಳುವ (Weight Loss) ಮೂಲಕ ಅಭಿಮಾನಿಗಳ ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದರು. ತಮ್ಮ ಹಳೇ ವಿಡಿಯೋ ಹಾಗೂ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾರಾ ತಮ್ಮ ಹಳೇ ದಿನಗಳನ್ನು ಆಗಾ ನೆನಪಿಸಿಕೊಳ್ಳುತ್ತಿರುತ್ತಾರೆ. ಜೊತೆಗೆ ತಮ್ಮ ಫಿಟ್ನೆಸ್ ಸೀಕ್ಎಟ್ ಸಹ ರಿವೀಲ್ ಮಾಡುತ್ತಿರುತ್ತಾರೆ. (ಚಿತ್ರಗಳು ಕೃಪೆ: ಸಾರಾ ಅಲಿ ಖಾನ್ ಇನ್ಸ್ಟಾಗ್ರಾಂ ಖಾತೆ)
ಫಿಟ್ನೆಸ್ ವಿಷಯಕ್ಕೆ ಬಂದರೆ ಸಾರಾ ಅಲಿ ಖಾನ್ ನಿಜಕ್ಕೂ ತುಂಬಾ ಜನರಿಗೆ ಮಾದರಿಯಾಗುತ್ತಾರೆ. ಬಣ್ಣದ ಲೋಕಕ್ಕೆ ಕಾಲಿಡುವ ಮುನ್ನ ಸಾರಾ ಅಲಿ ಖಾನ್ ಬಹುತೇಕ ಸ್ಟಾರ್ ಕಿಡ್ಗಳಂತೆಯೇ ಸ್ಥೂಲಕಾಯಿಯಾಗಿದ್ದರು.
2/ 7
ನಂತರದ ದಿನಗಳಲ್ಲಿ ಸಿನಿರಗಂಕ್ಕೆ ಕಾಲಿಡಲು ನಿರ್ಧರಿಸ ಮೇಲೆ ಅವರು ತಮ್ಮ ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಹಾಗೂ ಫಿಟ್ ಆದರು. ಅವರು ಹಳೇ ವಿಡಿಯೋಗಳನ್ನು ನೋಡಿದರೆ, ಇವರೇನಾ ಸಾರಾ ಎಂದು ಗುರುತಿಸದಷ್ಟು ಬದಲಾಹಿ ಹೋದರು.
3/ 7
ಈಗಲೂ ಸಹ ಏನು ಬೇಕಾದರೂ ಮಿಸ್ ಮಾಡಿಕೊಳ್ಳುವ ಈ ನಟಿ, ನಿತ್ಯ ತಮ್ಮ ಫಿಟ್ನೆಸ್ ಸೆಷನ್ ಮಾತ್ರ ತಪ್ಪದೇ ಮಾಡುತ್ತಾರಂತೆ. ಹೌದು, ಇದೇ ಅವರ ಫಿಟ್ನೆಸ್ನ ಗುಟ್ಟು. ಸಾರಾ ಅಲಿ ಖಾನ್ ತಮ್ಮ ಅಭಿಮಾನಿಗಳಿಗೆ ಫಿಟ್ನೆಸ್ ಕುರಿತಾಗಿ ಕೆಲವು ಟಿಪ್ಸ್ ಕೊಟ್ಟಿದ್ದಾರೆ.
4/ 7
ನೀಳವಾದ ಸಪೂರವಾದ ಕಾಲು ಹಾಗೂ ಫ್ಲಾಟ್ ಹೊಟ್ಟೆ ನಿಮ್ಮದಾಗಬೇಕಾದರೆ, ನೀವೂ ಸಾರಾ ಮಾಡುವ ವ್ಯಾಯಾಮ ಮಾಡಬೇಕಂತೆ. ಸಾರಾ ತಮ್ಮ ಕಾಲು ಹಾಗೂ ಆ್ಯಬ್ಸ್ಗಾಗಿ ನಿತ್ಯ Jump Squats ಮಾಡುತ್ತಾರಂತೆ.
5/ 7
Jump Squats ಮಾಡುವುದರಿಂದ ಕಾಲು ಹಾಗೂ ಆ್ಯಬ್ಸ್ ಎರಡಕ್ಕೂ ವ್ಯಾಯಾಮವಾಗುತ್ತದೆ. ಇದರಿಂದಾಗಿ ಈ ಎರಡೂ ಭಾಗಗಳಲ್ಲಿ ಶೇಖರಣೆಯಾಗಿರುವ ಕೊಬ್ಬು ಕರಗಲು ಆರಂಭವಾಗುತ್ತದೆಯಂತೆ. ಈ ವ್ಯಾಯಾಮವನ್ನು ಮನೆಯಲ್ಲೇ ಮಾಡಬಹುದಾಗಿದೆ.
6/ 7
ಸಾರಾ ಅಲಿ ಖಾನ್ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ ಕೂಲಿ ನಂ 1. ಅದು ವರುಣ್ ಧವನ್ ಜೊತೆ ನಾಯಕಿಯಾಗಿ ನಟಿಸಿದ ಚಿತ್ರವಾಗಿದ್ದು, ಇದು ಒಟಿಟಿಯಲ್ಲಿ ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಬಾಕ್ಸಾಫಿಸ್ನಲ್ಲಿ ಹೇಳ ಹೆಸರಿಲ್ಲದಂತೆ ಹೋಯಿತು.
7/ 7
ಈ ಸಿನಿಮಾದ ನಂತರ ಸಾರಾ ಅಲಿ ಖಾನ್ ಮತ್ತಾವೂದೇ ಚಿತ್ರವನ್ನು ಪ್ರಕಟಿಸಲಿಲ್ಲ.ಕೋವಿಡ್ ಆರಂಭಕ್ಕೂ ಮುನ್ನ ಅಕ್ಷಯ್ ಕುಮಾರ್ ಹಾಗೂ ಧನುಷ್ ಜೊತೆಗಿ ಅತ್ರಂಗಿ ರೇ ಚಿತ್ರ ಮಾತ್ರ ಚಿತ್ರೀಕರಣದ ಹಂತದಲ್ಲಿದೆ.