Health Tips:ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುತ್ತೀರಾ? ಅದಕ್ಕೂ ಮುನ್ನ ಈ ವಿಷಯ ಅರಿಯಿರಿ
reusing oil dangerous for health: ಕರಿದ ತಿಂಡಿ ಮಾಡಿದ ಬಳಿಕ ಉಳಿದಬಳಕೆ ಮಾಡಿದ ಎಣ್ಣೆಯನ್ನು ಪುನಃ ಅಡುಗೆಗೆ ಬಳಕೆ ಮಾಡುವುದು ಸಾಮಾನ್ಯ. ಈ ಕರಿದ ಎಣ್ಣೆಯನ್ನು ಪಲ್ಯ, ಸಾರಿನ ಒಗ್ಗರಣೆಗೆ ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಮತ್ತೊಮ್ಮೆ ಕರಿಯಲು ಕೂಡ ಬಳಸುತ್ತಾರೆ. ಆದರೆ, ಈ ರೀತಿ ಎಣ್ಣೆಗಳನ್ನು ಪದೇ ಪದೇ ಮರು ಬಳಕೆ ಮಾಡುವುದು ಸುರಕ್ಷಿತವೇ?
Reusing oil: ಕರಿದ ಎಣ್ಣೆಯನ್ನು ಸಾಧಾರಣವಾಗಿ ಒಮ್ಮೆ ಬಳಕೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದನ್ನು ದೀರ್ಘ ಕಾಲದವರೆಗೆ ಬಿಟ್ಟು, ಮತ್ತೆ ಕರಿಯಲು ಅಥವಾ ಇನ್ನಿತರ ಅಡುಗೆಗೆ ಬಳಸುವುದು ಸುರಕ್ಷಿತವಲ್ಲ.
2/ 9
ದೀರ್ಘ ಕಾಲದ ಬಳಿಕೆ ಬಳಕೆ ಮಾಡಿದ ಎಣ್ಣೆಯನ್ನು ಮರು ಬಳಕೆ ಮಾಡುವುದರಿಂದ ಅನೇಕ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇವು ಕೆಟ್ಟ ಕೊಬ್ಬನ್ನು ಉತ್ಪತ್ತಿ ಮಡುತ್ತದೆ. ಇದರಿಂದ ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆ ಕೂಡ ಇದೆ.
3/ 9
ಕರಿದ ಎಣ್ಣೆಯನ್ನು ಅತಿಯಾಗಿ ಬಳಸುವುದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಬಾರಿ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಸೂಕ್ತವಲ್ಲ. ಇದರಿಂದ ಹೃದ್ರೋಗ, ಅಲ್ಜೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗು ಸಾಧ್ಯತೆ ಇದೆ.
4/ 9
ಎಣ್ಣೆಯನ್ನು ದೀರ್ಘಕಾಲದವರೆಗೆ ಬಿಸಿ ಮಾಡಿದ್ದರೆ ಅದನ್ನು ಮತ್ತೆ ಹುರಿಯಲು ಬಳಸಬಾರದು. ಹಾಗೆಯೇ ಬೇಯಿಸಿದ ಆಹಾರಕ್ಕೆ ಕೂಡ ಇದರ ಬಳಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು
5/ 9
ಅಡುಗೆ ಎಣ್ಣೆಗಳನ್ನು ಅತಿಯಾಗಿ ಕುದಿಸುವುದು ಆರೋಗ್ಯಕ್ಕೆ ಹಾನಿಕಾರಕ ಕೂಡ. ಇವುಗಳನ್ನು ಡುಗೆಯಲ್ಲಿ ಮರು ಬಳಕೆ ಮಾಡುವುದರಿಂದ ಕೆಲ ಹಾನಿಕಾರಕ ಅಂಶ ಬಿಡುಗಡೆಯಾಗುತ್ತದೆ.
6/ 9
ಇನ್ನು ಈ ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವ ಬದಲು ಬಯೋಡೀಸೆಲ್ ತಯಾರಿಸಿದರೆ ಮಾಲಿನ್ಯದ ಸಮಸ್ಯೆಯನ್ನು ತಪ್ಪಿಸಬಹುದು ಎನ್ನುತ್ತಾರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತಜ್ಞ ಪಿವಿಎನ್ ಮಾಧವ್.
7/ 9
ಕೇಂದ್ರ ಸರ್ಕಾರ ಕೂಡ ಕರಿದ ಎಣ್ಣೆಯನ್ನು ಜೈವಿಕ ಡೀಸೆಲ್ ಉತ್ಪಾದನೆಗೆ ಮಾತ್ರ ಬಳಸಲು 2018 ರಲ್ಲಿ ಆದೇಶ ಹೊರಡಿಸಿತು. ಅಲ್ಲದೇ ಈ ಎಣ್ಣೆಯಲ್ಲಿ ಹೇಗೆ ಡಿಸೇಲ್ ತಯಾರಿಸಬಹುದು ಎಂದು ಕೂಡ ವಿವರಿಸಿದ್ದರು.
8/ 9
ಅಡುಗೆ ಮಾಡಿದ ನಂತರ ಉಳಿದ ಎಣ್ಣೆಯನ್ನು ತಣ್ಣಗಾಗಿಸಿ ನಂತರ ಸ್ಟ್ರೈನರ್ ಮೂಲಕ ಗಾಳಿಯಾಡದ ಪಾತ್ರೆಯಲ್ಲಿ ಸುರಿಯಬೇಕು. ಆಗ ಆ ಎಣ್ಣೆಯಲ್ಲಿ ಯಾವುದೇ ಆಹಾರ ಕಣಗಳು ಇರುವುದಿಲ್ಲ.
9/ 9
ಎಣ್ಣೆಯನ್ನು ಮರುಬಳಕೆ ಮಾಡುವ ಮೊದಲು ಪ್ರತಿ ಬಾರಿ ಎಣ್ಣೆಯ ಬಣ್ಣ ಮತ್ತು ದಪ್ಪವನ್ನು ಪರೀಕ್ಷಿಸಬೇಕು. ಇಲ್ಲ ಆರೋಗ್ಯಕ್ಕೆ ಹಾನಿ ಹೆಚ್ಚು. ಈ ಹಿನ್ನಲೆ ಆರೋಗ್ಯ ದೃಷ್ಟಿಯಿಂದ ಈ ಬಗ್ಗೆ ಯೋಚಿಸಿ ಬಳಕೆ ಮಾಡಬೇಕು