Health Tips: ರಾತ್ರಿ ಮಲಗುವ ಮುನ್ನ ಮಿಸ್ ಆಗಿಯೂ ಈ 5 ಆಹಾರಗಳನ್ನು ಸೇವಿಸಬೇಡಿ
ಪ್ರತಿಯೊಬ್ಬರಿಗೂ ನಿದ್ರೆ ಅತಿ ಮುಖ್ಯ ಸರಿಯಾಗಿ ನಿದ್ರೆ ಮಾಡದಿದ್ದರೆ ಆರೋಗ್ಯ ಹದಗೆಡುತ್ತೆ. ಅದರ ಪರಿಣಾಮ ಅನೇಕ ಅನಾರೋಗ್ಯಕರ ಸಮಸ್ಯೆಗಳು ಉಂಟಾಗುತ್ತೆ. ಅದಕ್ಕಾಗಿಯೇ ರಾತ್ರಿ ಉತ್ತಮ ನಿದ್ರೆಯನ್ನು ಪಡೆಯಲು ಕೆಲವು ರೀತಿಯ ಆಹಾರಗಳನ್ನು ತಿನ್ನಬಾರದು. ಅವು ಯಾವುದು ಎಂದು ತಿಳಿದುಕೊಳ್ಳಿ
ಸಾಂಕ್ರಾಮಿಕ ರೋಗ ಹೆಚ್ಚುತ್ತಿರೋ ಹಿನ್ನೆಲೆ ಜನರು ಆರೋಗ್ಯದ ಕಡೆಗೂ ವಿಶೇಷ ಗಮನ ಹರಿಸುತ್ತಿದ್ದಾರೆ. ಇಂದಿನ ವೇಗದ ಜೀವನದಲ್ಲಿ ನಾವು ಆರೋಗ್ಯವಾಗಿರಲು ಸಾಕಷ್ಟು ಉತ್ತಮ ನಿದ್ರೆಯ ಅಗತ್ಯವಿದೆ.
2/ 8
ರಾತ್ರಿ ಸರಿಯಾಗಿ ನಿದ್ದೆ ಮಾಡದಿದ್ದರೆ. ಮರುದಿನ ಯಾವ ಕೆಲಸವನ್ನೂ ಸರಿಯಾಗಿ ಮಾಡಲು ಸಾಧ್ಯವಿಲ್ಲ. ಉತ್ತಮ ನಿದ್ರೆಗೆ ಆರೋಗ್ಯಕರ ಆಹಾರವು ಬಹಳ ಮುಖ್ಯ. ಅದಕ್ಕಾಗಿಯೇ ರಾತ್ರಿ ಮಲಗುವ ಮುನ್ನ ಕೆಲವು ಆಹಾರಗಳನ್ನು ಸೇವಿಸಬೇಡಿ.
3/ 8
ಚಾಕೊಲೇಟ್, ನೋವು ನಿವಾರಕಗಳು: ರಾತ್ರಿ ಮಲಗುವ ಮುನ್ನ ಚಾಕೊಲೇಟ್ ಮತ್ತು ನೋವು ನಿವಾರಕಗಳನ್ನು ಸೇವಿಸಬಾರದು. ಇದರಲ್ಲಿ ಕೆಫೀನ್ ಅಧಿಕವಾಗಿದೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಮಲಗಲು ಕಷ್ಟವಾಗುತ್ತದೆ.
4/ 8
ಟೊಮೆಟೊ: ರಾತ್ರಿ ಮಲಗುವ ಮುನ್ನ ಟೊಮೆಟೊ ತಿಂದರೆ ಸರಿಯಾಗಿ ನಿದ್ದೆ ಬರುವುದಿಲ್ಲ. ರಾತ್ರಿ ಊಟಕ್ಕೆ ಮುಂಚೆ ಇವುಗಳನ್ನು ತಿಂದರೆ.. ಆಸಿಡ್ ರಿಫ್ಲಕ್ಸ್ ಬರುತ್ತದೆ. ತನ್ಮೂಲಕ ನಿದ್ರೆಗೆ ತೊಂದರೆಯಾಗುತ್ತದೆ.
5/ 8
ಈರುಳ್ಳಿ ತಿನ್ನುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಈರುಳ್ಳಿ ಹೊಟ್ಟೆಯಲ್ಲಿ ಹೆಚ್ಚಿನ ಪ್ರಮಾಣದ ಅನಿಲವನ್ನು ಬಿಡುಗಡೆ ಮಾಡುತ್ತದೆ. ಇದು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಮಲಗುವ ಮುನ್ನ ಈರುಳ್ಳಿ ತಿನ್ನದಿರುವುದು ಉತ್ತಮ.
6/ 8
ಹೆಚ್ಚಿನವರು ರಾತ್ರಿ ಊಟದ ನಂತರ ಜ್ಯೂಸ್ ಕುಡಿಯುತ್ತಾರೆ. ಆದರೆ ರಾತ್ರಿ ಮಲಗುವ ಮುನ್ನ ಹಣ್ಣಿನ ರಸವನ್ನು ಎಂದಿಗೂ ಕುಡಿಯಬಾರದು. ಹೆಚ್ಚಿನ ಹಣ್ಣುಗಳು ಆಮ್ಲಗಳನ್ನು ಹೊಂದಿರುತ್ತವೆ. ಇವು ದೇಹದಲ್ಲಿ ಆಮ್ಲ ಪ್ರತಿಕ್ರಿಯೆಯನ್ನು ಉಂಟುಮಾಡುತ್ತವೆ ಮತ್ತು ನಿದ್ರೆಯನ್ನು ತೊಂದರೆಗೊಳಿಸುತ್ತವೆ.
7/ 8
ಅನೇಕ ಯುವಕರು ರಾತ್ರಿ ಪಾರ್ಟಿ ಮಾಡುತ್ತಾರೆ. ಮಧ್ಯರಾತ್ರಿಯವರೆಗೆ ಮದ್ಯವನ್ನು ಕುಡೀತಾರೆ. ಹೀಗೆ ಮಾಡೋದ್ರಿಂದ ಆರೋಗ್ಯ ಮತ್ತಷ್ಟು ಹದಗೆಡುತ್ತದೆ. ಆಲ್ಕೋಹಾಲ್ ಮಾತ್ರವಲ್ಲದೆ ಹಲವು ಕೂಲ್ ಡ್ರಿಂಕ್ಸ್ ಗಳಲ್ಲೂ ಆಲ್ಕೋಹಾಲ್ ಇರುತ್ತದೆ. ಅಂತಹ ಪದಾರ್ಥಗಳನ್ನು ಸಹ ಕುಡಿಯಬೇಡಿ.
8/ 8
ಸರಿಯಾದ ಸಮಯಕ್ಕೆ ಆಹಾರ ಸೇವಿಸೋದು ಕೂಡ ಮುಖ್ಯ, ಹೀಗಾಗಿ ಸಮಯಕ್ಕೆ ಸರಿಯಾಗಿ ರಾತ್ರಿ ಲಘುವಾಗಿ ಊಟ ಸೇವಿಸಿ. ಅತಿಯಾಗಿ ತಿಂದ್ರೆ ಅಜೀರ್ಣದ ಸಮಸ್ಯೆ ಉಂಟಾಗುತ್ತೆ.