ಅನೇಕ ಮಂದಿ ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಹೊರಗಿನ ತಿಂಡಿಯನ್ನು ಬಹಳ ಇಷ್ಟಪಡುತ್ತಾರೆ. ಹಾಗಾಗಿ ಹೊರಗಡೆ ತಿನ್ನುವ ಅಭ್ಯಾಸವನ್ನು ಹೆಚ್ಚಾಗಿ ಬೆಳೆಸಿಕೊಂಡಿರುತ್ತಾರೆ. ಅದರಲ್ಲಿಯೂ ಫ್ರೈಡ್ ರೈಸ್ ಮತ್ತು ಬಿರಿಯಾನಿಗೆ ಆದ್ಯತೆ ನೀಡುತ್ತಾರೆ. ಇದು ನಾಲಿಗೆಗೆ ಹೆಚ್ಚು ರುಚಿಯನ್ನು ನೀಡುತ್ತದೆ. ಆದರೆ ಅವುಗಳನ್ನು ಯಾವುದರಿಂದ ಮಾಡಲ್ಪಟ್ಟಿದೆ? ಅಷ್ಟಕ್ಕೂ ಇದು ಆರೋಗ್ಯಕ್ಕೆ ಒಳ್ಳೆಯದಾ ಎಂಬುವುದನ್ನು ಮೊದಲು ಯೋಚಿಸಿ.
ನಾವೇನು ತಿನ್ನುತ್ತೇವೋ ಅದು ರುಚಿಯಾಗಿದ್ಯಾ ಎಂಬುವುದನ್ನು ಮಾತ್ರ ನಾವು ನೋಡುತ್ತೇವೆ. ಆದರೆ ಈ ಅಭ್ಯಾಸ ನಮ್ಮ ಆರೋಗ್ಯವನ್ನೇ ಹಾಳು ಮಾಡುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಭವಿಷ್ಯದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಅದಕ್ಕಾಗಿಯೇ ನೀವು ರುಚಿಗಿಂತ ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಅನಾರೋಗ್ಯಕ್ಕೆ ಕಾರಣವಾಗುವ ಪದಾರ್ಥಗಳನ್ನು ತಿನ್ನುವುದನ್ನು ನಿಲ್ಲಿಸಬೇಕು.
ಉಪ್ಪು: ಉಪ್ಪು ಇಲ್ಲದಿದ್ದರೆ ಯಾವ ಆಹಾರವೂ ರುಚಿಯಾಗಿರುವುದಿಲ್ಲ. ಉಪ್ಪಿದ್ದರೆ ಸಾಕು. ಇದಕ್ಕಿಂತ ರುಚಿ ಬೇರೆ ಇಲ್ಲ. ಆದರೆ ಹೆಚ್ಚು ಉಪ್ಪು ಸೇವನೆ ಆರೋಗ್ಯಕ್ಕೆ ಹಾನಿಕರ. ಪಿಜ್ಜಾ ಮತ್ತು ಚಿಪ್ಸ್ನಂತಹ ಜಂಕ್ ಫುಡ್ಗಳಲ್ಲಿ ಸೋಡಿಯಂ ಅಧಿಕವಾಗಿದೆ ಎಂದು ನಿಮಗೆ ತಿಳಿದಿದೆಯೇ, ಇದು ದೇಹದಲ್ಲಿನ ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಹಾಗಾಗಿ ಉಪ್ಪು ಮತ್ತು ಜಂಕ್ ಫುಡ್ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
ಕಾಫಿ: ಆಫೀಸ್ ನಲ್ಲಿ ಟೆನ್ಷನ್ ಇದ್ದರೂ, ಮನೆಗೆಲಸ ಮಾಡಿ ಸುಸ್ತಾಗಿ, ಅನೇಕ ಮಂದಿ ದಿನದಲ್ಲಿ ಟೀ, ಕಾಫಿ ಕುಡಿಯುತ್ತಾರೆ. ಆದರೆ ಕೆಲ ಮಂದಿ ಕಾಫಿ ಮತ್ತು ಚಹಾವನ್ನು ಕುಡಿಯುವುದನ್ನು ಚಟ ಮಾಡಿಕೊಂಡು ಬಿಟ್ಟಿರುತ್ತಾರೆ. ಆದರೆ, ಚಹಾ ಮತ್ತು ಕಾಫಿಯಲ್ಲಿ ಹೆಚ್ಚಿನ ಪ್ರಮಾಣದ ಕೆಫೀನ್ ಇರುತ್ತದೆ. ಇದು ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಕೊರತೆಯಿಂದ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಮತ್ತು ತಲೆನೋವಿನ ಸಮಸ್ಯೆಗಳು ಉಂಟಾಗುತ್ತದೆ.