ಅನೇಕ ಜನರು ರಹಸ್ಯವಾಗಿ ಅಥವಾ ಬಹಿರಂಗವಾಗಿ ಮೂಗಿನೊಳಗೆ ಬೆರಳಿಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವು ಜನರು ಕೆಲವು ಅಸ್ವಸ್ಥತೆಯ ಕಾರಣದಿಂದ ಮೂಗಿನೊಳಗೆ ಬೆರಳಿಟ್ಟುಕೊಳ್ಳುತ್ತಾರೆ. ಅನೇಕ ಬಾರಿ ಮೂಗಿನೊಳಗೆ ಬೆರಳಿಟ್ಟುಕೊಳ್ಳುವುದರಿಂದ ಮುಂದೆ ಇದೇ ಮಕ್ಕಳಿಗೆ ಅಭ್ಯಾಸವಾಗಿ ಹೋಗಿರುತ್ತದೆ. ತಾವು ಎಲ್ಲಿದ್ದೇವೆ ಎಂಬ ಪರಿಜ್ಞಾನ ಕೂಡ ಇಲ್ಲದೇ ಮೂಗಿನೊಳಗೆ ಬೆರಳಿಟ್ಟುಕೊಳ್ಳುತ್ತಾರೆ. ಇದು ಇತರರಿಗೆ ಅನ್ ಕಂಫರ್ಟ್ಟೇಬಲ್ ಫಿಲ್ ಉಂಟು ಮಾಡುತ್ತದೆ.
ಒಂದು ನಿರ್ದಿಷ್ಟ ವಯಸ್ಸಿನಲ್ಲಿ ಮಕ್ಕಳಿಗೆ ಈ ಕೆಟ್ಟ ಅಭ್ಯಾಸಗಳ ಬಗ್ಗೆ ಹೆಚ್ಚು ಜ್ಞಾನ ಇರುವುದಿಲ್ಲ. ಮಕ್ಕಳೂ ದೊಡ್ಡವರು ಏನನ್ನು ಮಾಡುತ್ತಾರೋ ಅದನ್ನೇ ಅನುಸರಿಸುತ್ತಾರೆ. ಆದರೆ ಕೆಲವೊಮ್ಮೆ ಅದನ್ನು ಅಭ್ಯಾಸವಾಗಿ ರೂಢಿಸಿಕೊಂಡು ಬಿಡುತ್ತಾರೆ. ನಿಜಕ್ಕೂ ಹೇಳಬಬೇಕಂದರೆ ಮಕ್ಕಳು ಮೂಗಿನೊಳಗೆ ಬೆರಳಿಟ್ಟುಕೊಳ್ಳುವುದರಿಂದ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಈ ಅಭ್ಯಾಸವನ್ನು ಒಂದು ಸಲ ರೂಢಿಸಿಕೊಂಡರೆ, ಮತ್ತೆ ಕಡಿವಾಣ ಹಾಕಲು ಕಷ್ಟ, ಹಾಗಾದ್ರೆ ಮಕ್ಕಳನ್ನು ಈ ಅಭ್ಯಾಸ ಬಿಡಿಸಬೇಕು ಅಂದರೆ ಏನು ಮಾಡಬೇಕು?
ಇದು ಕೆಟ್ಟ ಅಭ್ಯಾಸ ಎಂದು ನೀವು ಮಗುವಿಗೆ ಎಷ್ಟು ಬಾರಿ ಹೇಳಿದರೂ, ಅರ್ಥಮಾಡಿಕೊಲ್ಳುತ್ತಿಲ್ಲವಾ? ಬದಲಿಗೆ ಇನ್ನೂ ಹೆಚ್ಚಾಗಿ ಮೂಗಿನೊಳಗೆ ಬೆರಳಿಟ್ಟುಕೊಳ್ಳುತ್ತಿದ್ದಾರಾ? ಹಾಗಾದರೆ ನಿಮ್ಮ ಗಮನವನ್ನು ಸೆಳೆಯಲು ಮಕ್ಕಳು ಹೀಗೆ ಮಾಡುತ್ತಿರುತ್ತಾರೆ. ಹಾಗಾಗಿ ಸ್ವಲ್ಪ ಸಮಯದ ನಂತರ ನೀವು ವಿಷಯವನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರೆ, ಮಕ್ಕಳು ಈ ಅಭ್ಯಾಸವನ್ನು ತಾವೇ ಕ್ರಮೇಣವಾಗಿ ಕಡಿಮೆ ಮಾಡಿಕೊಳ್ಳುತ್ತಾರೆ.
ಮಕ್ಕಳು ಮೂಗಿನೊಳಗೆ ಬೆರಳಿಟ್ಟುಕೊಳ್ಳುವುದರ ಹಿಂದೆ ಬೇರೆ ಕಾರಣವಿದ್ಯಾ? ಒತ್ತಡವು ರೈನೋಟಿಲೆಕ್ಸೋಮೇನಿಯಾಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಪರಿಣಾಮವಾಗಿ, ಮೂಗಿನೊಳಗೆ ಬೆರಳಿಟ್ಟುಕೊಳ್ಳುವುದರ ಪ್ರಮಾಣವು ವಿಪರೀತವಾಗಿ ಹೆಚ್ಚಾಗುತ್ತದೆ. ಸಮಸ್ಯೆಯನ್ನು ಕಡಿಮೆ ಮಾಡಲು ಅಗತ್ಯವಿದ್ದರೆ ವೈದ್ಯರನ್ನು ಸಂಪರ್ಕಿಸಿ. (Disclaimer: ಈ ವರದಿಯು ಸಾಮಾನ್ಯ ಮಾಹಿತಿಗಾಗಿ ಮಾತ್ರ, ಆದ್ದರಿಂದ ಯಾವಾಗಲೂ ವಿವರಗಳಿಗಾಗಿ ತಜ್ಞರ ಸಲಹೆಯನ್ನು ಪಡೆಯಿರಿ. ಇದಕ್ಕೆ ನ್ಯೂಸ್ 18 ಜವಾಬ್ದಾರಿಯಲ್ಲ)