Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

Health Benefits of Cloves: ನಮ್ಮ ಅಡುಗೆಮನೆಯಲ್ಲಿರುವ ಬಹುತೇಕ ವಸ್ತುಗಳು ಸದ್ದಿಲ್ಲದೇ ಆರೋಗ್ಯ ವೃದ್ಧಿಸುತ್ತಿರುತ್ತವೆ. ಲವಂಗ ಕೂಡಾ ಅಂಥದ್ದೇ ಒಂದು ಅದ್ಭುತ ವಸ್ತು. ಆಯುರ್ವೇದ ಶಾಸ್ತ್ರ ಲವಂಗವನ್ನು ಹಾಡಿ ಹೊಗಳಿದೆ. ದಿನಾ ಬೆಳಗ್ಗೆ ಎರಡೇ ಎರಡು ಲವಂಗ ತಿಂದರೆ ಸಾಕು, ಎಷ್ಟೆಲ್ಲಾ ಪ್ರಯೋಜನಗಳಿವೆ ಎನ್ನುವುದರ ಸಂಪೂರ್ಣ ವಿವರ ಇಲ್ಲಿದೆ.

First published:

  • 18

    Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

    ಲವಂಗ ಭಾರತೀಯ ಅಡುಗೆ ಪದ್ಧತಿಯಲ್ಲಿ ಧಾರಾಳವಾಗಿ ಬಳಕೆಯಾಗುವ ಮಸಾಲೆ ಪದಾರ್ಥ. ಅಡುಗೆಗೆ ರುಚಿ ಕೊಡೋದು ಮಾತ್ರವಲ್ಲದೆ ದೇಹದ ಆರೋಗ್ಯಕ್ಕೂ ಲವಂಗ ಬಹಳ ಪ್ರಯೋಜನಕಾರಿ. ನಮಗೆ ಗೊತ್ತೇ ಇರದ ಲವಂಗದ ಗುಣಗಳ ಪರಿಚಯ ಮಾಡಿಕೊಳ್ಳೋಣ.

    MORE
    GALLERIES

  • 28

    Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

    ಪ್ರತಿದಿನ ಲವಂಗ ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಒಂದು ವೇಳೆ ದಿನಾ ಅಡುಗೆಯಲ್ಲಿ ಬಳಸಲು ಸಾಧ್ಯವಾಗದೇ ಇದ್ರೆ ಸುಮ್ಮನೆ ಒಂದು ಲೋಟ ನೀರಿಗೆ ಲವಂಗ ಹಾಕಿ ಕುದಿಸಿ, ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿಯಿರಿ. ಬೆಳಗ್ಗೆ ಮುಂಚೆ 2 ಲವಂಗ ತಿನ್ನೋದ್ರಿಂದ ಏನು ಪ್ರಯೋಜನ ತಿಳಿಯೋಣ.

    MORE
    GALLERIES

  • 38

    Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

    ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ. ಲವಂಗದಲ್ಲಿ ವಿಟಮಿನ್ ಸಿ ಅಂಶಗಳಿದೆ. ಇದು ರಕ್ತದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ. ಇದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಖಾಯಿಲೆಗಳ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ.

    MORE
    GALLERIES

  • 48

    Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

    ಲವಂಗ ನಮ್ಮ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಲವಂಗದಲ್ಲಿನ ಅಂಶಗಳು ಜೀರ್ಣರಸಗಳನ್ನು ಹೆಚ್ಚು ಉತ್ಪತ್ತಿ ಮಾಡುತ್ತವೆ. ಇದರಿಂದ ಮಲಬದ್ಧತೆ ಸೇರಿದಂತೆ ಜೀರ್ಣಾಂಗಕ್ಕೆ ಸಂಬಂಧಿಸಿದ ನಾನಾ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

    MORE
    GALLERIES

  • 58

    Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

    ಲಿವರ್ ಅಥವಾ ಯಕೃತ್ತಿನ ಕಾರ್ಯಕ್ಷಮತೆ ಹೆಚ್ಚಿಸುವ ತಾಕತ್ತು ಲವಂಗದಲ್ಲಿದೆ. ನಮ್ಮ ದೇಹದೊಳಗಿನ ಎಲ್ಲಾ ಟಾಕ್ಸಿನ್ ಅಥವಾ ವಿಷಕಾರಿ ಅಂಶಗಳನ್ನು ಹೊರಹಾಕುವ ಶಕ್ತಿ ಲಿವರ್​ಗಿದೆ. ಆ ಲಿಬರ್ ಸರಿಯಾಗಿ ಕೆಲಸ ಮಾಡದಿದ್ದರೆ ಸಮಸ್ಯೆಯಾಗುತ್ತದೆ. ಲವಂಗ ಲಿವರ್​ನ ಆರೋಗ್ಯ ಕಾಪಾಡುತ್ತದೆ.

    MORE
    GALLERIES

  • 68

    Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

    ಹಲ್ಲುನೋವಿಗೆ ಬಹಳ ಹಿಂದಿನಿಂದಲೂ ಲವಂಗವನ್ನು ಬಳಸುತ್ತಾರೆ. ತೀವ್ರವಾದ ಹಲ್ಲುನೋವಿದ್ದರೆ ಲವಂಗದ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಇಡುತ್ತಾರೆ. ಇದು ಹಲ್ಲು ನೋವನ್ನು ಬಹಳ ಬೇಗ ಶಮನ ಮಾಡುತ್ತದೆ.

    MORE
    GALLERIES

  • 78

    Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

    ತಲೆನೋವಿಗೆ ಲವಂಗ ಪರಿಹಾರ ನೀಡುತ್ತದೆ ಎನ್ನುವುದು ನಿಮಗೆ ತಿಳಿದಿತ್ತಾ? ಲವಂಗದ ಪುಡಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ ತಲೆನೋವು ಗುಣವಾಗುತ್ತದೆ. ಲವಂಗದಲ್ಲಿ ಊತವನ್ನು ಇಳಿಸುವ ಗುಣಗಳಿವೆ. ಹಾಗಾಗಿ ಇವು ನೋವುಗಳ ನಿವಾರಣೆಯಲ್ಲಿ ಬಳಕಯಾಗುತ್ತವೆ.

    MORE
    GALLERIES

  • 88

    Health Tips: ದಿನಾ ಬೆಳಗ್ಗೆ 2 ಲವಂಗ ತಿಂದರೆ ಸಾಕು, ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಸದ್ದಿಲ್ಲದೇ ಮಾಯವಾಗುತ್ತವೆ !

    ಫ್ಲೆವನಾಯ್ಡ್ಸ್, ಮ್ಯಾಂಗನೀಸ್, ಯುಜೆನಾಲ್ ಮುಂತಾದ ಅದ್ಭುತ ವಸ್ತುಗಳನ್ನು ಹೊಂದಿರುವ ಲವಂಗ ಮೂಳೆಗಳನ್ನು ಸದೃಢವಾಗಿಸುತ್ತದೆ. ಹಾಗಾಗಿ ಮೂಳೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುವ ಶಕ್ತಿ ಇದಕ್ಕಿದೆ.

    MORE
    GALLERIES