ದೇಹಕ್ಕೆ ವಿವಿಧ ರೀತಿಯ ವಿಟಮಿನ್-ಪ್ರೋಟೀನ್ಗಳ ಅವಶ್ಯಕತೆ ಇರುತ್ತದೆ. ಅಂತಹ ಪೋಷಕಾಂಶಗಳನ್ನು ಹೊಂದಿರುವ ಆಹಾರಗಳಲ್ಲಿ ಮೊಟ್ಟೆ ಕೂಡ ಒಂದು.
2/ 9
ಮೊಟ್ಟೆಯಲ್ಲಿ ಹಲವಾರು ಪೋಷಕಾಂಶಗಳು ಅಡಗಿದ್ದು, ಇದು ಆರೋಗ್ಯದ ಹಿತ ದೃಷ್ಟಿಯಿಂದ ಡಯಟ್ನಲ್ಲಿ ಮೊಟ್ಟೆಯನ್ನು ಸೇರಿಸುವುದು ಉತ್ತಮ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಪೋಷಕಾಂಶಗಳ ಅಗರ ಮೊಟ್ಟೆಯನ್ನು ತಿಂದರೆ ಸಿಗುವಂತಹ ಪ್ರಯೋಜನಗಳನ್ನು ಇಲ್ಲಿ ತಿಳಿಸಲಾಗಿದೆ.
3/ 9
ದಿನವೂ ಕೇವಲ ಒಂದು ಮೊಟ್ಟೆ ತಿಂದರೂ ಕೂಡ ಹಲವು ಪ್ರಯೋಜನಗಳನ್ನು ಪಡೆಯಬಹುದು. ಇದರಿಂದ ಮೂಳೆಗಳು ಬಲಗೊಳ್ಳುವುದಲ್ಲದೆ, ಕೀಲು ನೋವಿನಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ.
4/ 9
ಮೊಟ್ಟೆಯನ್ನು ತಿನ್ನುವುದರಿಂದ ಬುದ್ಧಿ ಶಕ್ತಿಯು ಚುರುಕಾಗುತ್ತದೆ.
5/ 9
ದೇಹ ತೂಕ ಹೆಚ್ಚಾಗದಂತೆ ಉತ್ತಮ ಆರೋಗ್ಯವನ್ನು ಪಡೆಯಲು ಮೊಟ್ಟೆಯ ಬಿಳಿ ಭಾಗವನ್ನು ಮಾತ್ರ ಸೇವಿಸುವುದು ಉತ್ತಮ.
6/ 9
ಮೊಟ್ಟೆಯಲ್ಲಿರುವ ಹಳದಿ ಭಾಗವನ್ನು ಹೆಚ್ಚಾಗಿ ತಿನ್ನುವುದರಿಂದ ದೇಹ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
7/ 9
ಮೊಟ್ಟೆಯನ್ನು ತಿನ್ನುವುದರಿಂದ ಕಣ್ಣಿನ ರೆಟಿನಾದ ಆರೋಗ್ಯ ವೃದ್ದಿಸುತ್ತದೆ. ಇದರಿಂದ ಕಣ್ಣಿಗೆ ಸಂಬಂಧಿತ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
8/ 9
ದಿನಂಪ್ರತಿ ಮೊಟ್ಟೆ ತಿನ್ನುವುದರಿಂದ ಕೂದಲು ಮತ್ತು ತ್ವಚೆಯು ಕಾಂತಿಯುತವಾಗುತ್ತದೆ. ಅಲ್ಲದೆ ಇದರಿಂದ ಎಜಿಂಗ್ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
9/ 9
ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಉತ್ತಮ. ಆಮ್ಲೆಟ್ ಅಥವಾ ಇತರ ಖಾದ್ಯಗಳ ರೂಪದಲ್ಲಿ ಮೊಟ್ಟೆಯನ್ನು ಸೇವಿಸುವುದರಿಂದ ಪೌಷ್ಠಿಕಾಂಶ ಕಡಿಮೆಯಾಗುವ ಸಾಧ್ಯಯಿರುತ್ತದೆ.