ನಾವೆಲ್ಲರೂ ಆರೋಗ್ಯಕ್ಕಾಗಿ ಅನೇಕ ಹೆಲ್ದೀ ಟಿಪ್ಸ್ಗಳನ್ನು ಫಾಲೋ ಮಾಡುತ್ತೇವೆ. ಬೆಳಗ್ಗೆ ಹಲ್ಲುಜ್ಜುವುದರಿಂದ ಹಿಡಿದು ರಾತ್ರಿ ಸ್ನಾನದವರೆಗೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಹಲವಾರು ಕೆಲಸಗಳನ್ನು ಮಾಡುತ್ತೇವೆ. ಆದರೆ ನಾವು ದಿನನಿತ್ಯ ಒಳ್ಳೆಯದು ಎಂದು ಭಾವಿಸುವ ಕೆಲವು ವಿಚಾರಗಳು ನಿಜಕ್ಕೂ ನಮಗೆ ಅಪಾಯವನ್ನು ತಂದೊಡ್ಡುತ್ತದೆ ಎಂಬ ವಿಚಾರ ನಿಮಗೆ ತಿಳಿದಿದ್ಯಾ? ಹೌದು, ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ವಿಚಾರಗಳು ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ.
ಹೆಡ್‌ಸೆಟ್‌ಗಳನ್ನು ಹೆಚ್ಚು ಹೊತ್ತು ಬಳಸುವುದು: ನಮ್ಮಲ್ಲಿ ಕೆಲವರಿಗೆ ಹೆಚ್ಚು ಸಂಗೀತವನ್ನು ಕೇಳುವ ಅಭ್ಯಾಸವಿದೆ. ಹಾಡು ಕೇಳಲು ಚೆನ್ನಾಗಿರುತ್ತದೆ. ಆದರೆ, ಹೆಡ್ಸೆಟ್ ಅನ್ನು ಅತಿಯಾಗಿ ಬಳಸುವುದು ಸೂಕ್ತವಲ್ಲ. ಹೆಡ್‌ಸೆಟ್ ಮೂಲಕ ಹೆಚ್ಚು ಸಂಗೀತವನ್ನು ಕೇಳುವುದರಿಂದ ನಿಮ್ಮ ಕಿವಿಯೊಳಗೆ ಹಾನಿಯುಂಟಾಗುತ್ತದೆ. ಜೊತೆಗೆ ಇದು ಕಿವಿ ನರಗಳ ಸೋಂಕಿಗೆ ಕಾರಣವಾಗಬಹುದು. ಕಿವಿ ಮತ್ತು ಬಾಯಿ ನೋವನ್ನು ಉಂಟುಮಾಡುತ್ತದೆ.