ದೇಶಾದ್ಯಂತ ಬಿಸಿಲಿನ ಆರ್ಭಟ ಆರಂಭವಾಗಿದೆ. ಬೆಳಗ್ಗೆ 9 ಗಂಟೆಯಿಂದಲೇ ದೇಶಾದ್ಯಂತ ಉರಿ ಬಿಸಿಲು ಜನರನ್ನು ಕಾಡಲಾರಂಭಿಸಿದೆ. ಬೆಳಗ್ಗೆ 10 ಗಂಟೆಯ ಬಳಿಕ ಮನೆಯಿಂದ ಹೊರಗೆ ಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲ ತಾಪದಿಂದ ಹೊರಬರಲು ಜನರು ನಾನಾ ತಂತ್ರಗಳನ್ನು ಬಳಸುತ್ತಿದ್ದಾರೆ. ಆದರೆ ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಕೂಡ ತುಂಬಾ ಮುಖ್ಯವಾಗಿದೆ.
ವಿಪರೀತ ಶಾಖದಲ್ಲಿ ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳು ಬರುತ್ತವೆ. ಜೊತೆಗೆ ತುರಿಕೆ, ದದ್ದುಗಳಂತಹ ವಿವಿಧ ಚರ್ಮ ರೋಗಗಳು ಬರುತ್ತವೆ. ಚಯಾಪಚಯವೂ ತೊಂದರೆಗೊಳಗಾಗಬಹುದು. ಅಸಿಡಿಟಿ, ಹಸಿವಿನ ಕೊರತೆ, ಗ್ಯಾಸ್ ಸಮಸ್ಯೆ ಬರಬಹುದು. ಅನೇಕ ಮಂದಿ ಈಗಾಗಲೇ ಇಂತಹ ಸಮಸ್ಯೆಗಳಿಂದ ವೈದ್ಯರ ಬಳಿ ಹೋಗಲಾರಂಭಿಸಿದ್ದಾರೆ. ಅದರಲ್ಲಿಯೂ ರಾಜಸ್ಥಾನದಲ್ಲಿ ಪರಿಸ್ಥಿತಿ ಇನ್ನೂ ಕೆಟ್ಟದಾಗಿದೆ. ಅಲ್ಲಿನ ಆಸ್ಪತ್ರೆಗಳ ಹೊರರೋಗಿ ವಿಭಾಗದಲ್ಲಿ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ.