ಆಯಾಸ ಮತ್ತು ದೇಹದ ನೋವನ್ನು ನಿವಾರಿಸಲು ಜನರು ಸಾಮಾನ್ಯವಾಗಿ ನೋವು ನಿವಾರಕ ಔಷಧ ಸೇವಿಸುತ್ತಾರೆ. ದೇಹದ ನೋವು, ಹೊಟ್ಟೆ ನೋವು, ತಲೆನೋವಿನಿಂದ ಹಿಡಿದು ಹಲವು ಬಗೆಯ ಓವರ್ ದ ಕೌಂಟರ್ ನೋವು ನಿವಾರಕಗಳು ಲಭ್ಯ ಇವೆ. ಇವು ಜೀರ್ಣಾಂಗ ವ್ಯವಸ್ಥೆಗೆ ಸೂಕ್ತವಲ್ಲ. ಆಮ್ಲೀಯತೆ ಮತ್ತು ಎದೆಯುರಿ, ಉರಿಯೂತದ ಸಮಸ್ಯೆ ಉಂಟು ಮಾಡುತ್ತದೆ.