ಕಡಲೆಕಾಯಿ ಹಿಟ್ಟಿನಿಂದ ಮಾಡಿದ ತಿನಿಸುಗಳನ್ನು ಚಹಾದ ಜೊತೆಗೆ ತಿನ್ನಬಾರದು. ಹೆಚ್ಚಿನವರು ಬಿಸಿ ಬಿಸಿ ಚಹಾದೊಂದಿಗೆ ಪಕೋಡ ತಿನ್ನಲು ಇಷ್ಟಪಡುತ್ತಾರೆ. ಕೆಲವರು ಟೀ ಹೀರುತ್ತಾ ಬಜ್ಜಿ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.ಕಡಲೆ ಹಿಟ್ಟಿನಿಂದ ಮಾಡಿದ ಪದಾರ್ಥಗಳನ್ನು ಟೀ ಜೊತೆ ತಿಂದರೆ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. (ಸಾಂದರ್ಭಿಕ ಚಿತ್ರ)
ಕೆಲವರು ಚಹಾದ ಜೊತೆಗೆ ನಿಂಬೆ ರಸ ಅಥವಾ ಲೆಮನ್ ಜ್ಯೂಸ್ ಕುಡಿಯಲು ಇಷ್ಟಪಡುತ್ತಾರೆ. ಟೀ ಜೊತೆ ನಿಂಬೆ ರಸ ಬೆರೆಸಿ ಕುಡಿಯುವವರೂ ಇದ್ದಾರೆ. ಆದರೆ ಹೀಗೆ ಮಾಡುವುದರಿಂದ ಅಸಿಡಿಟಿ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳು ಬರಬಹುದು ಎಂದು ತಜ್ಞರು ಹೇಳುತ್ತಾರೆ. ಚಹಾ ಕುಡಿದ ತಕ್ಷಣ ಸಿಟ್ರಸ್ ಹಣ್ಣುಗಳನ್ನು ಅಂದರೆ ಹುಳಿ ಅಂಶವಿರುವ ಪದಾರ್ಥಗಳನ್ನು ತಿನ್ನಬೇಡಿ. (ಸಾಂದರ್ಭಿಕ ಚಿತ್ರ)