ಪುರುಷರು ಮತ್ತು ಮಹಿಳೆಯರು ಇಬ್ಬರೂ ಮೃದುವಾದ, ದಪ್ಪವಾದ ಮತ್ತು ಬಲವಾದ ಕೂದಲನ್ನು ಹೊಂದಲು ಬಯಸುತ್ತಾರೆ. ಆರೋಗ್ಯಕರ ಕೂದಲನ್ನು ಪಡೆಯಲು ದುಬಾರಿ ಕೂದಲ ರಕ್ಷಣೆಯ ಉತ್ಪನ್ನಗಳನ್ನು ಬಳಸುವುದು ಮಾತ್ರವಲ್ಲ. ತ್ವಚೆಯಂತೆಯೇ ಕೂದಲಿನ ಆರೋಗ್ಯಕ್ಕೆ ಪೌಷ್ಟಿಕಾಂಶವುಳ್ಳ ಆಹಾರಗಳನ್ನು ಸೇವಿಸುವುದು ಮುಖ್ಯ. ಆದರೆ ನೀವು ದಿನನಿತ್ಯ ಸೇವಿಸುವ ಕೆಲವು ಆಹಾರಗಳು ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡುತ್ತದೆ ಎಂದು ನಿಮಗೆ ತಿಳಿದಿದ್ಯಾ? ಕೂದಲು ಉದುರಲು ಒತ್ತಡ, ಮಾಲಿನ್ಯ, ನಿದ್ದೆಯ ಕೊರತೆ, ಬಿಸಿಯೂಟ, ಆಹಾರ ಕ್ರಮ ಹೀಗೆ ಹಲವು ಕಾರಣಗಳಿದೆ. ಆದರೆ ಕೂದಲು ಉದುರುವಿಕೆಗೆ ಮುಖ್ಯ ಕಾರಣವೇ ನೀವು ಸೇವಿಸುತ್ತಿರುವ ಈ ಆಹಾರಗಳು. ಅವು ಯಾವುವು ಅಂತೀರಾ ಹಾಗಾದ್ರೆ ಈ ಸ್ಟೋರಿ ಓದಿ.