ಹೃದಯಾಘಾತದ ಲಕ್ಷಣಗಳು: ಎದೆ ಮತ್ತು ಹೊಟ್ಟೆಯಲ್ಲಿ ಉರಿ ಕಾಣಿಸಿಕೊಳ್ಳಬಹುದು. ತಂಪು ವಾತಾವರಣದಲ್ಲೂ ಸಹ ದೇಹ ಬೆವರಬಹುದು. ಉಸಿರಾಡಲು ಕಷ್ಟವಾಗುವುದು, ವಾಕರಿಕೆ, ತಲೆ ಸುತ್ತುವುದು, ವೇಗವಾದ ಎದೆ ಬಡಿತವೂ ಸಹ ಹೃದಯಾಘಾತದ ಲಕ್ಷಣಗಳೇ ಆಗಿವೆ. ಈ ರೀತಿ ಸಮಸ್ಯೆಗಳು ಹತ್ತು ನಿಮಿಷಗಳಿಗೂ ಹೆಚ್ಚು ಕಾಣಿಸಿಕೊಂಡಲ್ಲಿ ನಿರ್ಲಕ್ಷ್ಯ ವಹಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಧೂಮಪಾನ ಬಿಟ್ಟುಬಿಡಿ: ಧೂಮಪಾನ ಚಟವಿರುವವರಿಗೆ ಹೃದಯಾಘಾತ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಆದ್ದರಿಂದ ಈ ಅಪಾಯಕಾರಿ ಚಟದಿಂದ ದೂರ ಇರಬೇಕು. ಇನ್ನು ಬಾಯಿಗೆ ರುಚಿ ಎಂದು ಜಂಕ್‌ಫುಡ್‌ಗಳನ್ನು ತಿನ್ನುವುದರಿಂದ ದೇಹದ ಆರೋಗ್ಯ ಹಾಳಾಗುವುದು, ಜಂಕ್ ಫುಡ್ ತಿನ್ನುವುದರಿಂದ ದೇಹದಲ್ಲಿ ಕೊಬ್ಬಿನಂಶ ಸಂಗ್ರಹವಾಗಿ ರಕ್ತಸಂಚಾರಕ್ಕೆ ಅಡಚಣೆ ಉಂಟಾಗಿ ಹೃದಯಾಘಾತ ಉಂಟಾಗುವುದು.