ಸೀಬೆ ಹಣ್ಣು ಅಥವಾ ಪೇರಲೆ ಹಣ್ಣು ತನ್ನ ವಿಶಿಷ್ಟ ರುಚಿಗೆ ಹೆಸರುವಾಸಿಯಾಗಿದೆ. ಇದು ವಿಟಮಿನ್ ಸಿ, ಲೈಕೋಪೀನ್, ಫೈಬರ್ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಪೋಷಕಾಂಶಗಳು ಮಧುಮೇಹವನ್ನು ನಿರ್ವಹಿಸಲು, ಸರಿಯಾದ ಜೀರ್ಣಕ್ರಿಯೆಗೆ ನೆರವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಹೃದಯ ಸಮಸ್ಯೆಗಳನ್ನು ದೂರವಿಡಲು ಪ್ರಯೋಜನಕಾರಿಯಾಗಿದೆ. ಅನೇಕ ಜನರು ಅತಿಸಾರಕ್ಕೆ ಚಿಕಿತ್ಸೆ ನೀಡಲು ಸೀಬೆ ಎಲೆಗಳನ್ನು ಬಳಸುತ್ತಾರೆ