ಈ ಕುರಿತಂತೆ ಮಾತನಾಡಿದ ಬಾರ್ಮರ್ನ ಹಿರಿಯ ನೇತ್ರ ತಜ್ಞ ಡಾ.ಶಕ್ತಿ ರಾಜಗುರು ಮಾತನಾಡಿ, ಟೆರ್ಟಿಯಂನಿಂದ ಕಣ್ಣು ಕೆಂಪಾಗುವುದು, ದೃಷ್ಟಿ ಮಂದವಾಗುವುದು, ಉರಿ ಮತ್ತು ತುರಿಕೆ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಭವಿಷ್ಯದಲ್ಲಿ ಇದರ ಪರಿಣಾಮಗಳು ಇನ್ನೂ ಹೆಚ್ಚಾಗಬಹುದು. ನೇರಳಾತೀತ ಕಿರಣಗಳು, ಧೂಳು, ಗಾಳಿ ಮತ್ತು ಕಣ್ಣುಗಳ ಮೇಲೆ ಬೀಳುವ ನೇರ ಬೆಳಕು ಇದಕ್ಕೆ ಮುಖ್ಯ ಕಾರಣಗಳು. ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಿಕೊಳ್ಳಲು ಜನರಿಗೆ ಸಲಹೆ ನೀಡಿದ್ದಾರೆ.