ಪೌಷ್ಟಿಕ ಪಾನೀಯಗಳು ಮತ್ತು ಸೋಡಾದಂತಹ ಪಾನೀಯಗಳನ್ನು ಕ್ಯಾನ್ಗಳಲ್ಲಿ ಅವುಗಳನ್ನು ಮಾರಾಟ ಮಾಡಲಾಗುತ್ತದೆ. ಶಾಖವನ್ನು ಹೊಡೆದೋಡಿಸುವ ಮಾರ್ಗವಾಗಿ ಇವುಗಳನ್ನು ಕುಡಿಯುವುದರಲ್ಲಿ ಸಿಗುವ ಖುಷಿಯ ಹಿಂದೆ ಕೆಲವು ಅಪಾಯಗಳು ಅಡಗಿವೆ ಎಂಬ ವಿಚಾರ ಅದೆಷ್ಟೋ ಮಂದಿಗೆ ತಿಳಿದಿಲ್ಲ. ಏಕೆಂದರೆ ತಂಪು ಪಾನೀಯಗಳನ್ನು ತುಂಬುವ ಮುನ್ನ ಕ್ಯಾನ್ಗಳನ್ನು ತೊಳೆಯಲಾಗುವುದಿಲ್ಲ ಎಂದು ಆರೋಪಿಸಲಾಗಿದೆ.
ಈ ಕ್ಯಾನ್ಗಳಲ್ಲಿ ಸೂಕ್ಷ್ಮಜೀವಿಗಳು ಮತ್ತು ಸೋಂಕುಗಳು ಸ್ವಾಭಾವಿಕವಾಗಿ ಇರುತ್ತವೆ ಎಂದು ಹೇಳಲಾಗುತ್ತದೆ. ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೌಷ್ಟಿಕತಜ್ಞ ಸಿಮ್ರುನ್ ಚೋಪ್ರಾ ಎಂಬವರು ಪೋಸ್ಟ್ ಮಾಡಿದ್ದು, ಸಾಮಾನ್ಯವಾಗಿ, ಕ್ಯಾನ್ಗಳನ್ನು ಗೋದಾಮುಗಳಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ ಅವುಗಳನ್ನು ತೊಳೆದಿರುವುದಿಲ್ಲ ಅಥವಾ ಸ್ವಚ್ಛ ಕೂಡ ಗೊಳಿಸಲಾಗಿರುವುದಿಲ್ಲ. ಇಲಿಗಳು ತಂಪು ಪಾನೀಯಗಳನ್ನು ಸಂಗ್ರಹಿಸುವ ಕ್ಯಾನ್ಗಳ ಮೇಲೆ ಓಡಬಹುದು. ಇಲಿಗಳು ಅದರ ಮೇಲೆ ಮೂತ್ರ ಅಥವಾ ತ್ಯಾಜ್ಯವನ್ನು ತಂದು ಹಾಕಬಹುದು. ಇಂತಹ ಡಬ್ಬಿಗಳಿಂದ ಪಾನೀಯ ಸೇವಿಸಿದಾಗ ಲೆಪ್ಟೋಸಿರೋಸಿಸ್ ಬರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಲೆಪ್ಟೊಸಿರೋಸಿಸ್ ಸೋಂಕಿನ ಸಂದರ್ಭದಲ್ಲಿ ಜ್ವರ, ತಲೆನೋವು, ಹೊಟ್ಟೆ ನೋವು ಮತ್ತು ಅತಿಸಾರದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು ಎಂದಿದ್ದಾರೆ. ಕೆಲವು ಮಂದಿ ಮೂತ್ರಪಿಂಡದ ಹಾನಿ, ಯಕೃತ್ತು ಹಾನಿ ಮತ್ತು ಉಸಿರಾಟದ ಸಮಸ್ಯೆಗಳನ್ನು ಅನುಭವಿಸಬಹುದು. ಆದ್ದರಿಂದ, ಕ್ಯಾನ್ಗಳಿಂದ ತಂಪು ಪಾನೀಯಗಳನ್ನು ಕುಡಿಯುವ ಮುನ್ನ ಕ್ಯಾನ್ಗಳ ಹೊರಭಾಗವನ್ನು ತೊಳೆದು ಸ್ವಚ್ಛಗೊಳಿಸಬೇಕು ಅಥವಾ ಒದ್ದೆಯಾದ ಬಟ್ಟೆಯಿಂದ ಒರೆಸಬೇಕು. ಅದೇ ರೀತಿ ನೇರವಾಗಿ ಕುಡಿಯುವ ಬದಲು ಸ್ಟ್ರಾ ಹಾಕಿಕೊಂಡು ಕುಡಿಯುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.
ಬೇಸಿಗೆಯಲ್ಲಿ ಪೂರ್ವಸಿದ್ಧ ಪಾನೀಯಗಳಿಗಿಂತ ನೈಸರ್ಗಿಕ ತಂಪು ಪಾನೀಯಗಳನ್ನು ಕುಡಿಯುವುದು ಉತ್ತಮ. ಎಳನೀರು ಇತ್ಯಾದಿಗಳನ್ನು ತೆಗೆದುಕೊಳ್ಳಬಹುದು. ಯಾವುದೇ ಹೆಚ್ಚುವರಿ ಸಿಹಿಕಾರಕಗಳನ್ನು ಸೇರಿಸದೆಯೇ ಹಣ್ಣಿನ ರಸವನ್ನು ನೇರವಾಗಿ ತೆಗೆದುಕೊಳ್ಳಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ)