ಪ್ರತಿದಿನ ಮೊಸರು ತಿನ್ನಿ: ಮೊಸರು ಪ್ರೋಬಯಾಟಿಕ್ಗಳಲ್ಲಿ ಸಮೃದ್ಧವಾಗಿದೆ. ಪ್ರಸ್ತುತ ಬೇಸಿಗೆ ಕಾಲದಲ್ಲಿ ನಮ್ಮ ಕರುಳನ್ನು ತಂಪಾಗಿರಿಸಲು ಮೊಸರು ಅತ್ಯಗತ್ಯ ಆಹಾರವಾಗಿದೆ. ಹೀಗಾಗಿ, ಪ್ರತಿಯೊಬ್ಬರೂ ತಮ್ಮ ದೈನಂದಿನ ಆಹಾರದಲ್ಲಿ ಮೊಸರನ್ನು ತಿನ್ನುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಪ್ರತಿನಿತ್ಯ ಮೊಸರಿನ ಸೇವನೆಯು ತೂಕ ಹೆಚ್ಚಾಗಲು ಮತ್ತು ಚಯಾಪಚಯ ಬದಲಾವಣೆಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತದೆ.
ರಾತ್ರಿಯಲ್ಲಿ ಅತಿಯಾಗಿ ತಿನ್ನುವುದು: ಸಾಕಷ್ಟು ಮಂದಿ ಮಲಗುವ ಮುನ್ನ ಹೆಚ್ಚಾಗಿ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ನಾವು ಸೇವಿಸುವ ಆಹಾರ ಜೀರ್ಣವಾಗಲು ಸಾಕಷ್ಟು ಸಮಯ ಸಿಗುವುದಿಲ್ಲ. ತಡರಾತ್ರಿ ತಿನ್ನುವುದು ಮತ್ತು ಅತಿಯಾಗಿ ತಿನ್ನುವುದು ನಮ್ಮ ಯಕೃತ್ತಿನ ಮೇಲೆ ಭಾರೀ ಪರಿಣಾಮ ಬೀರುತ್ತದೆ. ಇದು ಅಪೌಷ್ಟಿಕತೆ ಮತ್ತು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಈ ಅನಾವಶ್ಯಕ ಆಹಾರ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಸ್ರವಿಸುವಿಕೆಯು ಕಡಿಮೆಯಾಗುವುದರಿಂದ ಮಧುಮೇಹದ ಸಮಸ್ಯೆ ಉಂಟಾಗುತ್ತದೆ. ಇದಲ್ಲದೇ ದೈಹಿಕ ಚಟುವಟಿಕೆಯ ಕೊರತೆ, ನಿದ್ರೆಯ ಕೊರತೆ ಮತ್ತು ಒತ್ತಡವೂ ಮಧುಮೇಹಕ್ಕೆ ಕಾರಣವಾಗಬಹುದು. ಅನಿಯಂತ್ರಿತವಾಗಿ ಮದ್ಯಪಾನ ಮಾಡುವವರು ಮಧುಮೇಹಕ್ಕೆ ಸುಲಭವಾಗಿ ಒಳಗಾಗುತ್ತಾರೆ. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಮಧುಮೇಹವನ್ನು ತಡೆಯಲು ಸಹಾಯ ಮಾಡುತ್ತದೆ.