ನಿಮ್ಮ ದೇಹದಲ್ಲಿ ಹಿಮೋಗ್ಲೋಬಿನ್ ಕೊರತೆಯಿದ್ದರೆ, ನೀವು ನಿಮ್ಮ ಆಹಾರದಲ್ಲಿ ಹುಳಿ ರುಚಿಯ ಹಣ್ಣುಗಳನ್ನು ಸೇರಿಸಿಕೊಳ್ಳಬೇಕು. ಪ್ರಮುಖವಾಗಿ ಬೆಟ್ಟದ ನಲ್ಲಿಕಾಯಿಯಲ್ಲಿ ಕಬ್ಬಿಣ, ವಿಟಮಿನ್ ಸಿ, ಆಂಟಿಆಕ್ಸಿಡೆಂಟ್ ಗಳು ಸಮೃದ್ಧವಾಗಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಮತ್ತು ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ವಿಟಮಿನ್ ಸಿ ಮತ್ತು ಕಬ್ಬಿಣ ಎರಡೂ ದಾಳಿಂಬೆಯಲ್ಲಿ ಕಂಡುಬರುತ್ತವೆ. ವಿಟಮಿನ್ ಸಿ ನಮ್ಮ ದೇಹದಲ್ಲಿ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಿದರೆ, ಇದು ಹಿಮೋಗ್ಲೋಬಿನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂ ದಾಳಿಂಬೆಯಲ್ಲಿ ಹೇರಳವಾಗಿ ಕಂಡುಬರುತ್ತದೆ. ನೀವು ಪ್ರತಿದಿನ ಒಂದು ಲೋಟ ದಾಳಿಂಬೆ ರಸವನ್ನು ಕುಡಿಯುತ್ತಿದ್ದರೆ, ಹಿಮೋಗ್ಲೋಬಿನ್ ವೇಗವಾಗಿ ಹೆಚ್ಚಾಗುತ್ತದೆ.