6) ಕೆಂಪು ಮಾಂಸ ಬೇಡ: ಈ ಅವಧಿಯಲ್ಲಿ ನಿಮ್ಮ ದೇಹವು ಪ್ರೊಸ್ಟಗ್ಲಾಂಡಿನ್ ಗಳನ್ನು ಉತ್ಪಾದಿಸುತ್ತದೆ. ಇದು ನಿಮ್ಮ ಗರ್ಭಾಶಯದ ಸಂಕೋಚನಕ್ಕೆ ಸಹಾಯ ಮಾಡುತ್ತದೆ. ಗರ್ಭಾಶಯದ ಒಳಪದರವನ್ನು ತೊಡೆದು ಹಾಕುತ್ತದೆ, ಇದರಿಂದಾಗಿ ಪ್ರತಿ ತಿಂಗಳು ಪಿರಿಯಡ್ಸ್ ಸಂಭವಿಸುತ್ತದೆ. ಈ ಸಮಯದಲ್ಲಿ ಕೆಂಪು ಮಾಂಸವನ್ನು ಸೇವಿಸಿದಾಗ, ಅದು ಪ್ರೊಸ್ಟಗ್ಲಾಂಡಿನ್ ಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಿಂದಾಗಿ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ.