ಜನರು ತಮ್ಮ ಬ್ಯುಸಿ ಲೈಫ್ನಲ್ಲಿ ಸರಿಯಾಗಿ ಉಪಹಾರ ಸೇವಿಸುವುದಿಲ್ಲ. ಕೆಲವರು ಆಫೀಸ್, ಶಾಲೆ- ಕಾಲೇಜಿಗೆ ಹೋಗುವ ಗಡಿಬಿಡಿಯಲ್ಲಿ ಬೆಳಗಿನ ತಿಂಡಿಯನ್ನು ಮರೆತೆ ಬಿಟ್ಟಿರುತ್ತಾರೆ. ಮತ್ತೆ ಕೆಲವರು ತೂಕ ಇಳಿಸಿಕೊಳ್ಳುವ ಸಲುವಾಗಿ ಬ್ರೇಕ್ ಫಾಸ್ಟ್ ತಿನ್ನುವುದಿಲ್ಲ. ಆದರೆ ಇದು ಆರೋಗ್ಯ ಒಳ್ಳೆಯದಲ್ಲ. ಇದು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೇ ಬೆಳಗಿನ ಉಪಾಹಾರವನ್ನು ಬಿಡುವುದರಿಂದ ಬುದ್ಧಿಮಾಂದ್ಯತೆ, ಬಿಪಿ, ಶುಗರ್, ಹೃದ್ರೋಗ ಸಮಸ್ಯೆಗಳು ಉಂಟಾಗಬಹುದು.
ಬ್ರೇಕ್ ಫಾಸ್ಟ್ನಿಂದ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ವಿಶೇಷವಾಗಿ ಬೆಳಗಿನ ಉಪಾಹಾರವು ಹೃದ್ರೋಗ ಅಥವಾ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಬ್ರೇಕ್ ಫಾಸ್ಟ್ ಬಿಡುವುದರಿಂದ ಮಾರಣಾಂತಿಕ ಕಾಯಿಗಳು ಬರಬಹುದು, ಬೆಳಗ್ಗೆ ಬೇಗನೆ ಎದ್ದು ಖಾಲಿ ಹೊಟ್ಟೆಯಲ್ಲಿ ಇದ್ದರೆ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳು ಬರಬಹುದು. ನೀವು ಅಕಾಲಿಕವಾಗಿ ಸಾವನ್ನಪ್ಪಬಹುದು.