ಮೊಳಕೆಯೊಡೆದ ಆಲೂಗಡ್ಡೆಗಳು: ಆಲೂಗಡ್ಡೆಗಳು ಪ್ರತಿಯೊಬ್ಬ ಅಡುಗೆ ಮನೆಯಲ್ಲಿ ಇರುವ ತರಕಾರಿಗಳಲ್ಲಿ ಒಂದಾಗಿದೆ. ಆಲೂಗಡ್ಡೆಯನ್ನು ಹಲವು ಅಡುಗೆಗಳಿಗೆ ಬಳಸಲಾಗುತ್ತದೆ. ಆದಾಗ್ಯೂ, ಆಲೂಗಡ್ಡೆ ಯಾವಾಗಲೂ ಚೆನ್ನಾಗಿ ಬೇಯಿಸಬೇಕು. ಆಲೂಗಡ್ಡೆ ಮೊಳಕೆಯೊಡೆಯಲು ಪ್ರಾರಂಭಿಸಿದಾಗ ಅವುಗಳ ಮೇಲೆ ಹಸಿರು ಚುಕ್ಕೆಗಳಿರುತ್ತವೆ. ಈ ಹಸಿರು ಕಲೆಗಳು ಸೋಲನೈನ್ ಎಂಬ ವಿಷವನ್ನು ಉತ್ಪತ್ತಿ ಮಾಡುತ್ತವೆ. ಆಲೂಗಡ್ಡೆಗಳನ್ನು ಸರಿಯಾಗಿ ಬೇಯಿಸಿದಿದ್ದರೆ ಸೋಲಾನಿನ್ ವಿಷವು ಹೊಟ್ಟೆಗೆ ಹೋಗಿ ಆರೋಗ್ಯ ಕೆಡುತ್ತದೆ.